

ಇತ್ತೀಚಿನ ದಿನಗಳಲ್ಲಿ ನಾಟ್ಯವು ಹಲವು ಬಗೆಗಳಲ್ಲಿ ಬೆಳೆದು ಬಂದಿದೆ. ನಾಟ್ಯರಂಗಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವುದು ಹಿಂದಿನ ಕಾಲದಲ್ಲಿ ನಟರ ವಾಡಿಕೆಯಾದರೆ, ಇದನ್ನು ಪ್ರದರ್ಶಿಸಲು ಇಂದು ಕಲಾ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳು ಹೊಸದಾಗಿ ಸೇರ್ಪಡೆಯಾಗಿವೆ. ಇಂದಿನ ನಾಟ್ಯಕಲಾ ಪ್ರದರ್ಶನದ ಮೂಲ ಉದ್ದೇಶವು ಬಹುಮಟ್ಟಿಗೆ ಮನರಂಜನೆ, ಕಲಾಪ್ರದರ್ಶನ, ಕೀರ್ತಿ ಹಾಗೂ ಧನ ಸಂಪಾದನೆಯೇ ಆಗಿದೆ. ಆಧುನಿಕ ನೃತ್ಯದ ಭರಾಟೆಯಲ್ಲಿ ಪ್ರಾಚೀನ ನಾಟ್ಯ ಪದ್ಧತಿಗಳಾದಂತಹ ಭರತನಾಟ್ಯವೇ ಮೊದಲಾದ ಭಾರತೀಯ ನಾಟ್ಯಪರಂಪರೆಗಳ ಜನಪ್ರಿಯತೆ ಕಡಿಮೆಯಾಗುತ್ತಿದೆಯೇನೋ ಎನ್ನಿಸುವಂತಿದೆ.
| ವಾದಿರಾಜ ಪ್ರಸನ್ನ
ಭಾರತೀಯ ನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ ಆತ್ಮರಂಜನೆಯವರೆಗಿನ ವಿಷಯವನ್ನಿಟ್ಟುಕೊಂಡಿದೆ. ಆದರೆ ಋಷಿಗಳು ನಾಟ್ಯಕಲೆಗೆ ಹಾಕಿಕೊಟ್ಟ ಹಾದಿಯನ್ನು ಬಿಟ್ಟು ಇಂದು ಕಲಾಪ್ರದರ್ಶನಗಳು ಎಷ್ಟೋ ಕಡೆಗಳಲ್ಲಿ ಸ್ವತಂತ್ರವಾಗಿ ಬೆಳೆದುಬಿಟ್ಟಿರುವುದೂ ಉಂಟು. ಅಂತಹ ದೋಷಗಳನ್ನು ಜ್ಞಾನಿಗಳ ದಿಗ್ದರ್ಶನದಂತೆ ಸರಿಪಡಿಸಿಕೊಂಡಲ್ಲಿ ಈ ಕಲೆಯು ನಮ್ಮನ್ನು ಋಷಿಗಳು ಕಂಡುಕೊಂಡ ಜೀವನದ ಮೂಲೋದ್ದೇಶವಾದ ಪರಮಾತ್ಮ ಸಾಕ್ಷಾತ್ಕಾರದವರೆಗೆ ತಲುಪಿಸುವುದರಲ್ಲಿ ಸಂಶಯವಿಲ್ಲ. ಯೋಗಾಯತನವೂ ಮತ್ತು ಭೋಗಾಯತನವೂ ಆಗಿರುವ ಈ ನಾಟ್ಯಕಲೆಯ ಪರಿಪೂರ್ಣ ಪ್ರಯೋಜನವನ್ನು ಪಡೆಯೋಣ. ನಮ್ಮ ಭಾರತೀಯ ಮಹರ್ಷಿಗಳು ಕಂಡರುಹಿದ ಸತ್ಯವನ್ನು ನಾವೂ ಸಹ ಅನುಭವಿಸೋಣ.
(ಲೇಖಕರು ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)