ಬಾಣಂತಿಯರ ಅಡುಗೆಗಳು: ಸಿಹಿ ಸಜ್ಜಿಗೆ

SAJIGE
Published on

ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ. 

ಬೇಕಾಗುವ ಸಾಮಗ್ರಿ: ಚಿರೋಟಿ ರವೆ-1 ಕಪ್  ತುಪ್ಪ-12 ಕಪ್ ಹಾಲು- 1 ಕಪ್ ಸಕ್ಕರೆ-12 ಕಪ್ ತುಪ್ಪದಲ್ಲಿ ಹುರಿದ ಲವಂಗದ ಪುಡಿ-1 ಚಮಚ ಏಲಕ್ಕಿ ಪುಡಿ-4 ಚಮಚ ಹಾಲಿನಲ್ಲಿ ನೆನೆಸಿದ ಕೇಸರಿ ಪುಡಿ-14 ಚಮಚ ತುಪ್ಪದಲ್ಲಿ ಹುರಿದ ದ್ರಾಕ್ಷಿ-2 ಚಮಚ ತುಪ್ಪದಲ್ಲಿ ಹುರಿದ ಗೋಡಂಬಿ-2 ಚಮಚ

ಮಾಡುವ ವಿಧಾನ: ಚಿರೋಟಿ ರವೆಯನ್ನು ಪರಿಮಳ ಬರುವ ವರೆಗೆ ತುಪ್ಪದಲ್ಲಿ ಹುರಿದಿರಿಸಿ. ಎರಡು ಕಪ್ ನೀರು ಕಾಯಲಿರಿಸಿ, ಹಾಲು ಸೇರಿಸಿ ಕುದಿಯಲಿರಿಸಿ. ಕುದಿಯುವಾಗ ರವೆ, ಸಕ್ಕರೆ ಸೇರಿಸಿ. ಗಂಟಾಗದಂತೆ ಚೆನ್ನಾಗಿ ಕಲಕಿ. ಕೇಸರಿ ಮಿಶ್ರಣ, ಲವಂಗದ ಪುಡಿ, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ ಕಲಕಿ ಒಲೆಯಿಂದ ಕೆಳಗಿರಿಸಿ.

| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net