ಬಾಣಂತಿಯರ ಅಡುಗೆಗಳು: ಮೆಣಸಿನ ಸಾರು

MENASU
Published on

ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿ: ಕಡಲೆ ಬೇಳೆ-2 ಚಮಚ  ಉದ್ದಿನ ಬೇಳೆ-1 ಚಮಚ ಕೊತ್ತಂಬರಿ ಬೀಜ-1 ಚಮಚ ಕಾಳು ಮೆಣಸು-7-8 ಒಣಕೊಬ್ಬರಿ ತುರಿ-3 ಚಮಚ ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಕಡಲೆ ಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಬೀಜ, ಕಾಳು ಮೆಣಸು, ಒಣಕೊಬ್ಬರಿ ತುರಿಗಳನ್ನು ಹುರಿದು ತರಿತರಿಯಾಗಿ ಮಸಾಲೆ ತಯಾರಿ ಸಿಡಿ. 2 ಕಪ್ ನೀರು ಕಾಯಲಿರಿಸಿ ಎರಡು ಚಮಚದಷ್ಟು ಮಸಾಲೆ ಪುಡಿ, ಬೆಲ್ಲ, ಉಪ್ಪು ಹಾಕಿ ಕುದಿಸಿ. ತುಪ್ಪ-ಜೀರಿಗೆಗಳ ಒಗ್ಗರಣೆ ಮಾಡಿ ಸೇರಿಸಿ.

| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net