ಬಾಣಂತಿಯರ ಅಡುಗೆಗಳು: ಅಂಟಿನ ಉಂಡೆ

ANTINA UNDE
Published on

ಹೆರಿಗೆಯ ನಂತರ ಮಹಿಳೆಯರು ಮರಳಿ ದೇಹಾರೋಗ್ಯ ಪಡೆಯಲು ಸಾಂಪ್ರದಾಯಿಕ ಊಟ- ಉಪಚಾರಗಳ ವಿವರ ಇಲ್ಲಿದೆ. ಜತೆಗೆ ಎಣ್ಣೆ ಉಪಚಾರದ ಬಗ್ಗೂ ಇಲ್ಲಿದೆ ಮಾಹಿತಿ. 

ಬೇಕಾಗುವ ಸಾಮಗ್ರಿ: ಅಂಟು-100ಗ್ರಾಮ್ ಒಣಕೊಬ್ಬರಿ ತುರಿ-2 ಕಪ್ ಗಸಗಸೆ ಪುಡಿ-4 ಚಮಚ ಗೇರು ಬೀಜದ ತುಂಡುಗಳು-12 ಕಪ್ ಕತ್ತರಿಸಿದ ಉತ್ತತಿಯ ತುಂಡುಗಳು-1 ಕಪ್ ಬೆಲ್ಲದ ತುರಿ-2 ಕಪ್ ಏಲಕ್ಕಿ ಪುಡಿ-1 ಚಮಚ

ಮಾಡುವ ವಿಧಾನ: ಅಂಟಿನ ತುಂಡುಗಳು ಅರಳುವವರೆಗೆ ತುಪ್ಪದಲ್ಲಿ ಹುರಿಯಿರಿ. ಒಣಕೊಬ್ಬರಿ ತುರಿ, ಗೇರು ಬೀಜ, ಉತ್ತತ್ತಿ.ಗಳನ್ನು ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿಯಿರಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಬೆಲ್ಲ ಕರಗಿಸಿ ಬೆಲ್ಲ ಕರಗಿದ ನಂತರ, ತುಪ್ಪದಲ್ಲಿ ಹುರಿದಿರಿಸಿದ ಸಾಮಗ್ರಿ, ಗಸಗಸೆ, ಏಲಕ್ಕಿಗಳನ್ನು ಸೇರಿಸಿ ಚೆನ್ನಾಗಿ ಕಲಕಿ. ತಣಿದ ಮೇಲೆ, ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ.

| ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net