ಜನಮತ: ಭಯೋತ್ಪಾದನೆ ಕೊನೆಗಾಣಿಸಬೇಕು

taliban-govt emplyoees
Published on

ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಪ್ರಜಾಪ್ರಭುತ್ವ ಸರ್ಕಾರವನ್ನು ಕಿತ್ತೊಗೆದು ತಮ್ಮದೇ ಹಿಡಿತ ಸಾಧಿಸಿದ್ದಾರೆ. ವಿಶ್ವದ ಎಲ್ಲ ರಾಷ್ಟ್ರಗಳು ಒಕ್ಕೊರಲಿನಿಂದ ಇದನ್ನು ಖಂಡಿಸಬೇಕು. ಭಯೋತ್ಪಾದನೆ ಒಂದು ದೇಶಕ್ಕೆ ಸೀಮಿತವಲ್ಲ. ಅದೊಂದು ಜಾಗತಿಕ ಸಮಸ್ಯೆ. ಭಯೋತ್ಪಾದನೆ ಮೂಲಕ ಕ್ರೂರಕೃತ್ಯಗಳಲ್ಲಿ ತೊಡಗುವ ಇಂಥ ಉಗ್ರರಿಗೆ ಸರಿಯಾದ ಪಾಠವನ್ನು ಜಾಗತಿಕ ಸಮೂಹ ಕಲಿಸಬೇಕು. ಉಗ್ರವಾದವನ್ನು ಬೇರುಸಮೇತ ಕಿತ್ತೊಗೆಯಲು ಶ್ರಮಿಸಬೇಕು. ಒಂದು ದೇಶದ ಸೈನ್ಯವನ್ನೇ ಮಟ್ಟಹಾಕುವಷ್ಟು ಮದ್ದುಗುಂಡುಗಳು, ಯುದ್ಧೋಪಕರಣಗಳು ಉಗ್ರರಲ್ಲಿವೆ ಎಂದರೆ ದೊಡ್ಡ ಆರ್ಥಿಕ ಸಹಾಯ ಉಗ್ರರಿಗೆ ಇರಲೇ ಬೇಕು. ಉಗ್ರರಿಗೆ ಧನಸಹಾಯ ನೀಡುವ ದೇಶಗಳಿಗೆ ವಿಶ್ವಸಂಸ್ಥೆ ದಿಗ್ಬಂಧನ ವಿಧಿಸಬೇಕು. ಇಲ್ಲವಾದಲ್ಲಿ ಉಗ್ರವಾದದ ನಂಜು ಬೇರೆ ರಾಷ್ಟ್ರಗಳಿಗೂ ಹಬ್ಬುತ್ತದೆ. ಅಶಾಂತಿ. ಹಿಂಸೆ ಆವರಿಸಿಕೊಳ್ಳುತ್ತದೆ.

| ಪ್ರಾಣೇಶ ಪೂಜಾರ್ ಗಿಣಗೇರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net