ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತಲಾಖ್

RJ Netra 27 Jul 20
Published on

ಬೆಂಗಳೂರು: ಎಲ್ಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ‘ತಲಾಖ್ ತಲಾಖ್ ತಲಾಖ್’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರಮಂದಿರಗಳೆಲ್ಲ ಬಂದ್ ಆಗಿರುವುದರಿಂದ, ಚಿತ್ರದ ಬಿಡುಗಡೆ ತಡವಾಗಿದೆ. ಈ ಮಧ್ಯೆ, ಚಿತ್ರವು ದಿ ಲಿಫ್ಟ್ ಆಪ್ ಸೆಷೆನ್ಸ್ ಹಾಲಿವುಡ್ 2020 ಹಾಗೂ ದಿ ಲಿಸ್ಟ್ ಆಫ್ ಯುಕೆ 2020 ಸಿನಿಮೋತ್ಸವಗಳಲ್ಲಿ ಪ್ರವೇಶ ಪಡೆದಿದೆ.

ಇದಲ್ಲದೆ, ಕಾಸ್ಮೋ ಫಿಲಂ ಫೆಸ್ಟಿವಲ್ ಮೇ 2020 ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, ಇಂಡೋ ಗ್ಲೋಬಲ್ ಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಉತ್ತರ ಭಾರತದ ಖ್ಯಾತ ಲೇಖಕಿ ನೂರ್ ಜಹೀರ್ ಅವರ ‘ಡಿನೈಡ್ ಬೈ ಅಲ್ಲಾಹ್’ ಎಂಬ ಸಂಶೋಧನಾ ಕೃತಿಯನ್ನಾಧರಿಸಿ, ಕನ್ನಡಕ್ಕೆ ಪೊ›.ಎಂ. ಅಬ್ದುಲ್ ರೆಹಮಾನ್ ಪಾಷ ಅವರು ‘ಅಲ್ಲಾಹುನಿಂದ ನಿರಾಕೃತರು’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ವೈದ್ಯನಾಥ್ ಅವರು ನಿರ್ವಿುಸಿ-ನಿರ್ದೇಶಿಸಿರುವ ಈ ಚಿತ್ರದಲ್ಲಿ ಆರ್​ಜೆ ನೇತ್ರಾ, ಸ್ವರೂಪ್ ವೈದ್ಯ, ಶಶಾಂಕ್ ವೈದ್ಯ, ಶ್ರೀನಿವಾಸಮೂರ್ತಿ, ವೀಣಾ ಸುಂದರ್ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net