

ತಯಾರಿಸುವ ವಿಧಾನ:ತೆಂಗಿನ ತುರಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿ ಗಟ್ಟಿಯಾದ ಹಾಲನ್ನು ತೆಗೆಯಿರಿ. ನಂತರ ಇದೇ ಹಿಂಡಿದ ತೆಂಗಿನಕಾಯಿ ತುರಿಗೆ ಎರಡು ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದು ತೆಳುವಾದ ಕಾಯಿ ಹಾಲು ಆಗುತ್ತದೆ.ಚಿಕ್ಕದಾಗಿ ಕತ್ತರಿಸಿದ ಪೈನಾಪಲನ್ನು ಒಂದು ಪಾತ್ರೆಯಲ್ಲಿ ಹಾಗೂ ಸಾಬೂದಾನಿಯನ್ನು ಇನ್ನೊಂದು ಪಾತ್ರೆಯಲ್ಲಿ ಹಾಕಿ ಕುಕ್ಕರ್ನಲ್ಲಿಡಿ. ನಾಲ್ಕು ಕಪ್ ನೀರನ್ನು ಹಾಕಿ ಐದು ವಿಷಲ್ ಬರಿಸಿ. ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿಯಿರಿ. ತುಪ್ಪದಲ್ಲಿ ಚಿಕ್ಕದಾಗಿ ಕತ್ತರಿಸಿದ ಪೈನಾಪಲ್ ಹಾಕಿ ಹುರಿಯಿರಿ. ಅದು ತುಪ್ಪವನ್ನು ಬಿಟ್ಟಾಗ ಸಕ್ಕರೆ ಹಾಕಿ. ಸಕ್ಕರೆ ಕರಗಿ ಗಟ್ಟಿಯಾದ ಜಾಮ್ ರೀತಿಯಲ್ಲಿ ಆಗುತ್ತದೆ. ಆಗ ಗಟ್ಟಿಯಾದ ತೆಂಗಿನ ಹಾಲನ್ನು ಹಾಕಿ. ಅದು ಚೆನ್ನಾಗಿ ಕುದಿ ಬಂದು ಗಟ್ಟಿಯಾಗುತ್ತಾ ಬಂದಾಗ ಬೇಯಿಸಿದ ಸಾಬೂದಾನಿವನ್ನು ಹಾಕಿ. ಕುದಿ ಬಂದ ನಂತರ ತಯಾರಿಸಿ ಕೊಂಡ ತೆಳುವಾದ ಕಾಯಿಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಇವುಗಳು ಕುದಿ ಬರುವಾಗ ಕೇಸರಿ ದಳಗಳು, ಏಲಕ್ಕಿ ಪುಡಿ, ಉಪ್ಪು ಮತ್ತು ಶುಂಠಿ ಪುಡಿಯನ್ನು ಸೇರಿಸಿ. ಎಲ್ಲವೂ ಗಟ್ಟಿಯಾದ ಪಾಯಸ ರೀತಿಯಲ್ಲಿ ಬಂದಾಗ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ.