ಹೊಸ ಪರ್ವಕ್ಕೆ ಸವಿಸವಿ ರೈಸ್ ಖೀರು

ರಿಚೆ
Published on
ಬೇಕಾಗುವ ಸಾಮಾನುಗಳು: 2 ಗಂಟೆ ನೆನೆಸಿದ ಅರ್ಧಕಪ್ ಅಕ್ಕಿ, 3 ಲೋಟ ಹಾಲು, 2 ಕಪ್ ಸಕ್ಕರೆ, 4 ಚಮಚ ತುಪ್ಪ, ಪಿಸ್ತಾ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಅರ್ಧ ಚಮಚ ಕೇಸರಿ ದಳ.

ಮಾಡುವ ವಿಧಾನ: ಅಕ್ಕಿಯನ್ನು ತರಿತರಿಯಾಗಿ ಪುಡಿ ಮಾಡಿ ಅದಕ್ಕೆ ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ. ಅಕ್ಕಿ ಅರ್ಧಬೆಂದ ನಂತರ ಸಕ್ಕರೆ ಹಾಕಿ ಕೈ ಆಡಿಸುತ್ತಿರಿ. ಕೇಸರಿ ದಳವನ್ನು ಹಾಕಿ, ತುಪ್ಪದಲ್ಲಿ ಹುರಿದ ಡ್ರೖೆಫ್ರೂಟ್ಸ್ ಹಾಕಿ ಕುದಿಸಿ. ಖೀರು ದಪ್ಪವಾದರೆ ಸ್ವಲ್ಪ ಹಾಲನ್ನು ಸೇರಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net