ಹೊಸ ಪರ್ವಕ್ಕೆ ಸವಿಸವಿ ಸೇಬು ಖೀರು

ಕಎರರು
Published on
ಬೇಕಾಗುವ ಸಾಮಾನುಗಳು: ಒಂದು ಕಪ್ ತುರಿದ ಸೇಬುಹಣ್ಣು, ಅರ್ಧ ಲೀಟರ್​ ಕಾಯಿಸಿದ ಹಾಲು, ಒಂದು ಕಪ್ ಸಕ್ಕರೆ, 4-5 ಕೇಸರಿದಳ, ತುಪ್ಪದಲ್ಲಿ ಹುರಿದದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ.

ಮಾಡುವ ವಿಧಾನ: ತುರಿದ ಸೇಬುಹಣ್ಣನ್ನು ಬಾಣಲೆಗೆ ಹಾಕಿ ಅದಕ್ಕೆ ಸಕ್ಕರೆಯನ್ನು ಹಾಕಿ ಬಾಡಿಸಿ. ಇನ್ನೊಂದು ಪಾತ್ರೆಯಲ್ಲಿ ಅರ್ಧಲೀಟರ್ ಹಾಲನ್ನು ಕಾಯಿಸಲು ಇಡಿ, ಅದುಕಾಲು ಲೀಟರ್ ಆಗುವ ತನಕ ಕುದಿಸಿರಿ. ಕೇಸರಿ ದಳ ಹಾಕಿ. ಬಾಡಿಸಿದ ಸೇಬುಹಣ್ಣು, ಕೇಸರಿಯನ್ನು ಅದಕ್ಕೆ ಹಾಕಿ ಮತ್ತೆ ಒಂದು ಲೋಟ ಹಾಲನ್ನು ಹಾಕಿ ಚೆನ್ನಾಗಿಕುದಿಯಲು ಬಿಡಿ. ಕೊನೆಗೆ ತುಪ್ಪದಲ್ಲಿ ಹುರಿದ ಮೇಲಿನ ಎಲ್ಲಾ ಒಣಹಣ್ಣುಗಳನ್ನು ಹಾಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net