ಹೊಸ ಪರ್ವಕ್ಕೆ ಸವಿಸವಿ ಕ್ಯಾರೆಟ್ ಖೀರು

ಅಎತಅಎಯ
Published on
ಬೇಕಾಗುವ ಸಾಮಾನುಗಳು: 5 ಕ್ಯಾರೆಟ್, 2 ಲೋಟ ಹಾಲು, 5 ಚಮಚ ಹಾಲಿನ ಪುಡಿ, 1 ಕಪ್ ಸಕ್ಕರೆ, ಸ್ವಲ್ಪ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ತುಪ್ಪ.

ಮಾಡುವ ವಿಧಾನ: ಕ್ಯಾರೆಟನ್ನು ಬೇಯಿಸಿಕೊಂಡು ಪೇಸ್ಟ್ ಮಾಡಿ. ಅದನ್ನು ಒಂದು ಪಾತ್ರೆಗೆ ಹಾಕಿ ಹಾಲನ್ನು ಬೆರೆಸಿ ಒಂದು ಕುದಿ ಕುದಿಸಿರಿ. ಹಾಲಿನ ಪುಡಿಗೆ ಸ್ವಲ್ಪ ಹಾಲು ಅಥವಾ ನೀರನ್ನು ಹಾಕಿ ಚೆನ್ನಾಗಿ ಕಲಸಿ ಕುದಿಯುತ್ತಿರುವ ಕ್ಯಾರೆಟ್ ಮಿಶ್ರಣಕ್ಕೆ ಹಾಕಿ ಕೈ ಆಡಿಸಿ. ಸಕ್ಕರೆ ಹಾಕಿ, ತುಪ್ಪದಲ್ಲಿ ಹುರಿದ ಒಣದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net