

ಮನೆಯಲ್ಲಿ ತಮಗಿಷ್ಟವಾದ ಪ್ರಾಣಿ,ಪಕ್ಷಿಗಳನ್ನು ಸಾಕುವುದು ಈಗಿನ ಟ್ರೆಂಡ್. ಅದರಲ್ಲೂ ನಾಯಿ, ಬೆಕ್ಕು, ಹಕ್ಕಿಗಳು ಸಾಕುವುದಕ್ಕೆ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮನೆಮಂದಿಯಲ್ಲಿ ಒಬ್ಬರಂತೆ ಸಾಕುವವರು ಇತ್ತೀಚಿಗೆ ಹೆಚ್ಚಾಗಿದ್ದಾರೆ.
ಪ್ರಾಣಿ ಪಕ್ಷಿಗಳು ಸಾಕುವುದು ಕೆಲವರಿಗೆ ಫ್ಯಾಷನ್ ಆದರೆ, ಇನ್ನು ಕೆಲವರು ವಾಸ್ತು ದೋಷ ನಿವಾರಣೆಗೆ , ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎನ್ನುತ್ತಾರೆ. ಮನೆಯಲ್ಲಿ ಹಕ್ಕಿಗಳ ಕಲರವವಿದ್ದರೆ ಚೆನ್ನ ಎನ್ನುವ ಕಾರಣಕ್ಕಾಗಿಯೇ ಜನರು ಮನೆಯ ಮುಂಭಾಗದಲ್ಲಿ ಗೂಡನ್ನಿಟ್ಟು ವಿವಿಧ ಪಕ್ಷಿಗಳನ್ನು ಸಾಕುತ್ತಾರೆ. ಬಣ್ಣ ಬಣ್ಣದ ಪಕ್ಷಿಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಅವುಗಳ ಕಲರವ ಮನೆಯಲ್ಲಿ ತುಂಬಾ ಜನರಿದ್ದ ಅನುಭವವನ್ನೂ ಕೊಡುತ್ತದೆ. ಜತೆಗೆ ಇವು ಶುಭ ಸೂಚಕ ಎನ್ನುವ ಕಾರಣಕ್ಕೂ ಸಾಕಲು ಇಷ್ಟಪಡುತ್ತಾರೆ.
ಮಾನಸಿಕ ಒತ್ತಡ ನಿವಾರಣೆ: ಕೆಲವರು ಹೆಚ್ಚಿನ ಸಮಯವನ್ನು ಪ್ರಾಣಿ ಪಕ್ಷಿಗಳೊಂದಿಗೆ ಕಳೆಯುತ್ತಾರೆ. ಮನೆಗಳಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದರಿಂದ, ಅವುಗಳೊಂದಿಗೆ ಆಟವಾಡುವುದು, ಮಾತನಾಡುವುದರಿಂದ ನಮ್ಮ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ ಎಂಬುದನ್ನು ಸಂಶೋಧಕರ ಪ್ರತಿವಾದ
ಅಂದರೆ ಅದಕ್ಕಾಗಿ ಮನೆ, ಮಲಗಲು ಹಾಸಿಗೆ, ಆಹಾರ ತಿನ್ನಲು ಆಕರ್ಷಕ ತಟ್ಟೆಗಳು ಇತ್ಯಾದಿ. ಇನ್ನು ಕೆಲವರು ವಾಸ್ತು ನೆಪ ಕೊಟ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ನಾಯಿ, ಬೆಕ್ಕಿನೊಂದಿಗೆ ಮೀನು, ಮೊಲ, ವಿವಿಧ ಜಾತಿಯ ಪಕ್ಷಿಗಳನ್ನು ಸಾಕಲು ಎಲ್ಲರೂ ಇಷ್ಟಪಡುತ್ತಿದ್ದಾರೆ.
ಅಕ್ವೇರಿಯಂ: ಮನೆಯಲ್ಲಿ ಒಂದು ಅಕ್ವೇರಿಯಂ ಇದ್ದರೆ ಅದರ ಕಳೆಯೇ ಬೇರೆ. ಮಕ್ಕಳು ಮುದುಕರೆನ್ನದೆ ಎಲ್ಲರಿಗೂ ಮೀನುಗಳನ್ನು ನೋಡುವುದೆಂದರೆ ಏನೋ ಹಿತ. ಅದರಲ್ಲೂ ಸಣ್ಣ ಸಣ್ಣ ಮಕ್ಕಳಿಗಂತೂ ಬಲು ಆಸೆ. ಅಕ್ವೇರಿಯಂನಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವ ಬಣ್ಣ ಬಣ್ಣದ ಮೀನುಗಳನ್ನು ನೋಡುವುದೇ ಮನಸ್ಸಿಗೆ ಆನಂದ. ಈ ಅಕ್ವೇರಿಯಂ ಅನ್ನು ರೋಮನ್ನರು ಮೊದಲು ಆರಂಭಿಸಿದರು ಎಂದು ಇತಿಹಾಸ ಹೇಳುತ್ತದೆ.
ಇದೀಗ ಪ್ರಪಂಚದಾದ್ಯಂತ ತನ್ನ ವಿಸ್ತಾರವನ್ನು ಹರಡಿಕೊಂಡು ಎಲ್ಲರಿಗೂ ಇಷ್ಟವಾಗುತ್ತಿದೆ. ಅಕ್ವೇರಿಯಂ ಬರಿ ಸೌಂದರ್ಯಕ್ಕಷ್ಟೇ ಅಲ್ಲ, ಅದರಿಂದ ಇನ್ನಿತರ ಹಲವು ಪ್ರಯೋಜನಗಳಿವೆ.ಅಕ್ವೇರಿಯಂನ್ನು ಮಕ್ಕಳು ನೋಡುವುದರಿಂದ ಅವರ ಕ್ರಿಯಾಶೀಲತೆ ಹೆಚ್ಚುತ್ತದೆ. ಮೆದುಳಿನ ಕಾರ್ಯದಕ್ಷತೆ ಹೆಚ್ಚುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಒತ್ತಡ, ಬೇಸರಗಳಿದ್ದರೆ ಅವುಗಳಿಗೂ ಬ್ರೇಕ್ ನೀಡಲು ಅಕ್ವೇರಿಯಂ ವೀಕ್ಷಣೆ ಬಹಳ ಲಾಭದಾಯಕ ಎಂದು ಮನೆಯಲ್ಲಿ ಅಕ್ವೇರಿಯಂಗಳನ್ನು ವಿವಿಧ ಬಣ್ಣ, ಜಾತಿಗಳ ಮೀನುಗಳನ್ನು ಸಾಕುವುದು ಸಾಮಾನ್ಯ
ಜಾಗರೂಕತೆಯಿಂದ ನಿರ್ವಹಿಸಿ: ಮನೆಯಲ್ಲಿ ನಾಯಿ, ಬೆಕ್ಕು ಮೊದಲಾದ ಪ್ರಾಣಿಗಳನ್ನು ಸಾಕುವ ಜನರೇ ಹೆಚ್ಚು. ಪಕ್ಷಿಗಳನ್ನು ಸಾಕುವವರ ಸಂಖ್ಯೆ ಕಡಿಮೆ. ಅದನ್ನು ಮನೆ ಒಳಗೆ ಸಾಕುವುದು, ನಿರ್ವಹಣೆ ಮಾಡುವುದು ಕಷ್ಟ ಎಂಬ ಕಾರಣಕ್ಕಾಗಿಯೇ ಪಕ್ಷಿ ಸಾಕಾಣಿಕೆಗೆ ಜನ ಹಿಂದೆ ಸರಿಯುತ್ತಾರೆ.
ಪ್ರಾಣಿಗಳಿಗಿಂತಲೂ ಪಕ್ಷಿಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ನಮ್ಮ ಆರೈಕೆಯಲ್ಲಿ ತುಸು ಏರುಪೇರಾದರೂ ಅದನ್ನು ಗಂಭೀರವಾಗಿ ಸ್ವೀಕರಿಸುವ ಪಕ್ಷಿಗಳಿಗೆ ಮನುಷ್ಯರಂತೆಯೇ ಜ್ವರದಂತಹ ರೋಗಗಳು ಬೇಗನೆ ಬಾಧಿಸುವುದಿದೆ. ಹೀಗಾಗಿ ಈ ಕುರಿತು ಬಹಳಷ್ಟು ಎಚ್ಚರಿಕೆಯಿಂದ ಇವುಗಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ.
ಪ್ರಾಣಿ ಪಕ್ಷಿ ವ್ಯಾಪಾರಸ್ಥರು ಲಾಭದಾಯಕ
ಲವ್ ಬರ್ಡ್ಸ್, ಗಿಳಿ, ಪಾರಿವಾಳ, ಕಾಕ್ಟೈಲ್, ಗುಬ್ಬಚ್ಚಿ ಮೊದಲಾದ ಪಕ್ಷಿಗಳು ಹಾಗೂ ವಿವಿದ ಜಾತಿಯ ಶ್ವಾನಗಳಿಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಾಗಿದೆ. ಇದನ್ನು ವ್ಯಾಪಾರ ಮಾಡುವವರ ಸಂಖ್ಯೆಯೂ ದಿನೆ ದಿನೇ ಹೆಚ್ಚಾಗುತ್ತಿದೆ. ಲವ್ಬರ್ಡ್ಸ್ ಸಾಗಣೆಯಲ್ಲೇ ಹಲವರು ತಿಂಗಳಿಗೆ 10 ರಿಂದ 15 ಸಾವಿರ ದುಡಿಯುತ್ತಿದ್ದಾರೆ. ಇದೊಂದು ಲಾಭದಾಯಕವಾದ ಸಾಗಣೆ ಎನ್ನುವುದು ಸಾಗಣೆದಾರರ ಅಭಿಪ್ರಾಯ. ಒಟ್ಟಿನಲ್ಲಿ ಪ್ರಾಣಿ ಪಕ್ಷಿಗಳನ್ನು ಮನೆಗಳಲ್ಲಿ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ವ್ಯಾಪಾರಸ್ಥರಿಗೂ ಇದರಿಂದ ಒಳಿತಾಗಿದೆ.
ಮನೆಗೂ ಆಕರ್ಷಣೆ
ಮನೆಯಲ್ಲಿ ಹೆಚ್ಚಾಗಿ ಲವ್ ಬರ್ಡ್ಸ್, ಗಿಳಿ, ಪಾರಿವಾಳ, ಕಾಕ್ಟೈಲ್, ಗುಬ್ಬಚ್ಚಿ ಮೊದಲಾದ ಪಕ್ಷಿಗಳನ್ನು ಸಾಕಲಾಗುತ್ತದೆ. ಲವ್ ಬರ್ಡ್ಸ್ ಮತ್ತು ಗಿಳಿಗಳಲ್ಲಿ ಹಲವು ಬಣ್ಣ, ಜಾತಿಯವುಗಳಿವೆ. ಕೆಲವು ಪಕ್ಷಿಗಳು ನಾವು ಮಾತನಾಡುವುದಕ್ಕೆ ಪ್ರತಿಕ್ರಿಯೆಯನ್ನೂ ಕೊಡುವುದರಿಂದ ಮನೆಯಲ್ಲಿ ಸಾಕುವುದು ಖುಷಿ ಕೊಡುತ್ತದೆ.
| ದ್ವಾರಕಾನಾಥ್ ಎಲ್.