ಚಂದ್ರಯಾನಕ್ಕೆ ದೇವಯಾನದ ಶ್ರೀರಕ್ಷೆ ಅದೇ ವಿಜ್ಞಾನ…

chandrayan 3
Published on
ಹೊಂಬೆಳಕು
ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಉಪಗ್ರಹವು ಭಾರತೀಯ ಬಾಹ್ಯಾಕಾಶ ಚರಿತ್ರೆಯಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದು ಹಳೆಯ ಸಂಗತಿ. ಸಂಬಂಧಿಸಿದ ವಿಜ್ಞಾನಿಗಳು, ಸಂಬಂಧಿಸಿದ ಸರ್ಕಾರಗಳು, ಅಷ್ಟೇ ಏಕೆ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯ ಹೆಮ್ಮೆಯಿಂದ ಬೀಗಿದ್ದೂ ಸಂತಸದ ವಿಷಯ. ಅಪಸ್ವರ, ಕುಹಕನಗೆ ಬರಲೇ ಇಲ್ಲವೆಂದೇನಿಲ್ಲ. ಅಲ್ಪ ಮನುಷ್ಯರಿದ್ದಲ್ಲಿ ಅಲ್ಪತನ, ಅಸೂಯೆ, ಸಿನಿಕತನಗಳು ಇಲ್ಲದಿದ್ದರೆ ಹೇಗೆ? ಅಲ್ಲದೆ, ಅಲ್ಪರು ಇಲ್ಲದಿದ್ದಲ್ಲಿ ಹಿರಿತನವೆಂಬ ಸಿರಿತನ ಮೆರೆಯುವುದಾದರೂ ಹೇಗೆ? ಆದರೆ, ಅಧ್ಯಾಪನ ಎಂಬ ಪವಿತ್ರಧಾಮಕ್ಕೂ ಸುಗಂಧಪೂರಿತ ಸೌಧಕ್ಕೂ ಇಂಥ ದುರ್ಗಂಧದ ದುರ್ವಿಧಿಯೇ ಎಂಬುದು ಖೇದಕರ.

ಉಡಾವಣೆಗಿಂತ ಮುಂಚೆ ಸಂಬಂಧಿಸಿದ ವಿಜ್ಞಾನಿಗಳು ದೈವಕೃಪೆ ಬಯಸಿ ತಿರುಪತಿಯೆಡೆಗೆ ಪಯಣಿಸಿದ್ದು ಕೆಲ ಮನಸ್ಸುಗಳಿಗೆ ಅಪಥ್ಯವಾಯಿತು. ಅದನ್ನು ಮೌಢ್ಯವೆಂದು ಹೆಸರಿಸಲಾಯಿತು; ಅಸಾಂವಿಧಾನಿಕ ಎಂದೂ ಪರಿಗಣಿಸಲಾಯಿತು. ಹಲವು ಚರ್ಚೆಗಳೂ ಈ ದಿಕ್ಕಿನಲ್ಲಿ ಹರಿದವು. ಇಷ್ಟೆಲ್ಲಾ ಆದಮೇಲೂ ನನ್ನ ಜಿಜ್ಞಾಸೆಗೆ ಪ್ರಸ್ತುತತೆ ಏನು ಎಂಬ ಪ್ರಶ್ನೆ ಮೂಡಿದರೆ ಲೇಖನದ ಕೊನೆಗೆ ಉತ್ತರ ದೊರಕೀತು.

ಬಹಳಷ್ಟು ಜನರಿಗೆ ವಿಗ್ರಹವೊಂದು ಕಲ್ಲಿನಂತೆ ಕಾಣುತ್ತದೆ. ವಿಗ್ರಹಾರಾಧನೆ ಮೌಢ್ಯದ ಪರಾಕಾಷ್ಠೆ ಎಂದು ತಿಳಿದವರು ಮತ್ತು ಅದನ್ನು ರಭಸಪೂರ್ಣ ಭಾಷೆಯಲ್ಲಿ ಪ್ರತಿಪಾದಿಸುವವರು ಕಡಿಮೆ ಸಂಖ್ಯೆಯಲ್ಲೇನಿಲ್ಲ. ಅಷ್ಟೇ, ರಭಸವಾಗಿ ಅದರ ಆರಾಧಕರನ್ನು ಹೀಗಳೆಯುವುದೂ, ಅವರಿಗೆಲ್ಲಾ ಬೌದ್ಧಿಕ ತರಬೇತಿಯ ಕೊರತೆ ಎಂದು ಟೀಕಿಸುವುದೂ ಅವರು ತಮ್ಮ ಕರ್ತವ್ಯವೆಂದೂ ಭಾವಿಸುತ್ತಾರೆ. ವಿಗ್ರಹ ಕಲ್ಲಿನಿಂದ ಆಗಿರಬಹುದು. ಆದರೆ, ವಿಗ್ರಹವನ್ನು ಕಲ್ಲಿಗೆ ಸಮೀಕರಿಸಲಾಗದು. ಹಾಗೆಯೇ ಮಣ್ಣಿನ ಮೂರ್ತಿಯ ವಿಷಯದಲ್ಲಿ ಕೂಡ. ಟೀಕಾಕಾರರ ಪದವಿ ಪ್ರಮಾಣಪತ್ರಗಳು, ಪ್ರಶಸ್ತಿ ಬಿರುದಾವಳಿಗಳೂ ಇವೆಲ್ಲಾ ಕಾಗದದಿಂದ ಮಾಡಲ್ಪಟ್ಟಿವೆ. ಹಾಗೆಂದು ಯಾವುದೋ ಕಾಗದವನ್ನು ಕಸದಬುಟ್ಟಿಗೆ ಎಸೆಯುವಂತೆ ಅದನ್ನು ಕಸದ ಬುಟ್ಟಿಗೆ ಎಸೆಯುವರೇ? ವಿದ್ಯಾರ್ಥಿಯೊಬ್ಬ ತನ್ನ ಅಂಕಪಟ್ಟಿಯನ್ನು (ಮಾರ್ಕ್ಸ್ ಕಾರ್ಡ್) ಅದೊಂದು ಕಾಗದದಿಂದ ಮಾಡಲ್ಪಟ್ಟಿದೆ ಎಂದು ತಿಳಿದು ಕಾಗದದಷ್ಟೇ ಕೇವಲವಾಗಿ ಕಾಣಬಲ್ಲನೇ? ಅಷ್ಟೇ ಏಕೆ, ನಮ್ಮ ದೇಶದ ರಾಜಕಾರಣಿ ಹಾಗೂ ಇನ್ನೂ ವಿಶೇಷವಾಗಿ ಅಧಿಕಾರಿಗಳ ಮನೆಗಳಲ್ಲಿ ಸಿಗುವ ಐವತ್ತು ಕೋಟಿ, ಐನೂರು ಕೋಟಿ ನೋಟಿನ ರಾಶಿಗಳು ಕೇವಲ ಕಾಗದದ ರಾಶಿಗಳೇ? ಇವೆಲ್ಲಾ ಹೌದೆಂದಾದರೆ ವಿಗ್ರಹವನ್ನೂ ಕಲ್ಲೆಂದೋ ಮಣ್ಣೆಂದೋ ಪರಿಗಣಿಸೋಣ! ಹೇಗೆ ವಿದ್ಯಾರ್ಥಿಯೊಬ್ಬ ಅಂಕಪಟ್ಟಿಯಲ್ಲಿ ತನ್ನ ಭವಿಷ್ಯದ ಕೀಲಿಕೈ ಕಾಣುತ್ತಾನೋ, ವರ್ಷಗಳಗಟ್ಟಲೇ ಬೆವರುಸುರಿಸಿ, ನಿದ್ದೆಗೆಟ್ಟು, ಅಧ್ಯಯನ ಮಾಡಿ ಸಾಧಿಸಿದ ಶೈಕ್ಷಣಿಕ ಸಾಧನೆಗಳನ್ನು (ಅಕಾಡೆಮಿಕ್ ಅಚೀವ್​ವೆುಂಟ್) ಕಾಣುತ್ತಾನೋ ಮತ್ತು ಕವಿ, ಸಾಹಿತಿ, ಸಾಧಕರು ತಮ್ಮ ಪ್ರಶಸ್ತಿ ಪತ್ರದಲ್ಲಿ ಜೀವಮಾನದ ಸಾಧನೆಯ ಪ್ರತಿಫಲನ, ಪ್ರತಿಧ್ವನಿಗಳನ್ನು ಕಾಣುತ್ತಾರೋ ಹಾಗೆಯೇ ಭಕ್ತನೊಬ್ಬ ವಿಗ್ರಹದಲ್ಲಿ ತನ್ನ ರಕ್ಷಕನನ್ನು, ಅಸಾಧ್ಯವಾದದ್ದನ್ನು ಸಾಧ್ಯವಾಗಿಸಬಲ್ಲ ಸರ್ವಶಕ್ತನನ್ನು ಕಾಣುತ್ತಾನೆ. ಜಡವಸ್ತು ಹೇಗೆ ಸರ್ವಶಕ್ತವಾಗಬಲ್ಲದು? ಮನುಷ್ಯನ ಸ್ಪರ್ಶಕ್ಕೆ ಬಂದ ಯಾವ ಜಡವಸ್ತುವೂ ಅದ್ಭುತಶಕ್ತಿಯನ್ನು ಪ್ರದರ್ಶಿಸಬಲ್ಲದು ಎಂಬುದು ಯಾವ ದಡ್ಡನಿಗಾದರೂ ಅರ್ಥವಾಗುವಷ್ಟು ಸರಳ ವಿಷಯ. ಇಂದು ವೈಜ್ಞಾನಿಕ ಯುಗದ ಞಚ್ಟಡಛ್ಝಿಠ ಆಗಿರತಕ್ಕಂಥ ಮೊಬೈಲ್ ಫೋನಿನಿಂದ ಹಿಡಿದು ಕಂಪ್ಯೂಟರ್ ಅಷ್ಟೇಕೆ ಚಂದ್ರಯಾನವನ್ನು ಕೈಗೊಂಡ ಉಪಗ್ರಹ, ಛಿಞಚಜ್ಝಿ, ದೂರದರ್ಶನಗಳು ಮನುಷ್ಯನಿಗೇ ಅಸಾಧ್ಯವಾದದ್ದೆಂದು ಕೆಲ ದಿನಗಳ ಹಿಂದೆ ಪರಿಗಣಿಸಲ್ಪಟ್ಟಿದ್ದ ಕೆಲಸಗಳನ್ನು ಇಂದು ಲೀಲಾಜಾಲವಾಗಿ ಮಾಡುತ್ತಿವೆಯಲ್ಲಾ? ಅದೆಲ್ಲಾ ಸಾಧ್ಯವಾಗಿದ್ದು ಮನುಷ್ಯನ ಬುದ್ಧಿಯಲ್ಲಡಗಿರುವ ಮತ್ತು ಅವನ ಸ್ವಭಾವವೇ ಆಗಿರುವ ಸರ್ವಶಕ್ತಿತ್ವವನ್ನು ವ್ಯಕ್ತಪಡಿಸುವುದಕ್ಕೆ ಯೋಗ್ಯವಾದ ಮಾಧ್ಯಮವೊಂದು ಸಂಶೋಧಿಸಲ್ಪಟ್ಟ ಮೇಲೆ. ಇವೆಲ್ಲವೂ ಮನುಷ್ಯನ ಬುದ್ಧಿಶಕ್ತಿಯ ಅಸೀಮಿತೆಯನ್ನು ತೋರಿಸುವ ಕೆಲವು ಹೊಳಹುಗಳು ಮಾತ್ರ. ಅರ್ಥಾತ್ ಅವನಲ್ಲಡಗಿರುವ ಅಸೀಮ ಜ್ಞಾನದ ಕೆಲವು ಅಲೆಗಳು ಮಾತ್ರ. ಈ ಅಸೀಮಜ್ಞಾನದ ಅನಾವರಣ ಯೋಗ್ಯ ದಿಕ್ಕಿನಲ್ಲಿ ಮುನ್ನಡೆಯುತ್ತಿರುವಾಗ ಅದರ ್ಞಠ್ಠಿ್ಟ್ಝ ್ಚ್ಞಛಿಟ್ಠಿಛ್ಞಿ್ಚಠ ಸ್ವಾಭಾವಿಕ ಪರಿಣಾಮವೆಂಬಂತೆ ಹೃದಯದಲ್ಲಿ ಅಡಗಿರುವ ಪ್ರೇಮ ಅಥವಾ ಭಾವಸಾಗರ ತನ್ನ ಅಲೆಗಳನ್ನು ಹೊರಹೊಮ್ಮಿಸುವುದಕ್ಕೆ ಪ್ರಾರಂಭಿಸುತ್ತದೆ. ಇದು ಒಂದು ರೀತಿಯಲ್ಲಿ ಅನಿವಾರ್ಯ. ಇದನ್ನೇ ಶ್ರೀ ರಾಮಕೃಷ್ಣರು ಬ್ರಹ್ಮಜ್ಞಾನ ಮತ್ತು ಪರಾಭಕ್ತಿ ಎರಡೂ ಒಂದೇ ಎಂದು ಹೇಳಿದ್ದಾರೆ. ಬುದ್ಧನಿಗೆ ಸಿಕ್ಕಿದ್ದು ಜ್ಞಾನೋದಯ ಅರ್ಥಾತ್ ಜ್ಞಾನದ ಉದಯ. ಆದರೆ ಅದು ಪರ್ಯಾವಸಾನವಾಗಿದ್ದು ಜಗತ್ತಿನೆಡೆಗೆ ಅವನು ಹರಿಸಿದ ಅಸೀಮ ಪ್ರೇಮದಲ್ಲಿ. ಜ್ಞಾನ ಪ್ರೇಮವಾಗಿ ಪರಿವರ್ತನೆಯಾಗುವುದು ಹೀಗೆಯೇ. ಹೀಗೆಯೇ ನಡೆದಿದ್ದು ವಿವೇಕಾನಂದರ ಜೀವನದಲ್ಲಿ. ನಿರ್ವಿಕಲ್ಪ ಸಮಾಧಿಯ ರುಚಿ ನೋಡಿದ ನರೇಂದ್ರ ಕೊನೆಗೆ ಮನುಷ್ಯನನ್ನು ಬಿಟ್ಟು ಬೇರೆ ದೇವರೇ ಇಲ್ಲ ಎಂದು ಘೊಷಿಸುವುದರಲ್ಲಿಯೇ ಸಮಯ ಕಳೆದ. ಕ್ರಿಸ್ತನಾದರೋ ಶ್ರೀರಾಮಕೃಷ್ಣರಂತೆ ಜೀವ ಮತ್ತು ದೇವ ಇಬ್ಬರೆಡೆಗೂ ತನ್ನ ಭಾವಸಾಗರವನ್ನು ಹರಿಸಿದ. ಇಲ್ಲಿ ಕೆಲವರು ಬುದ್ಧನಂತೆ ಜ್ಞಾನದಿಂದ ಪ್ರೇಮದಡೆಗೆ ಬಂದರೆ ಮತ್ತೆ ಕೆಲವರು ಪ್ರೇಮದಿಂದ ಜ್ಞಾನದೆಡೆಗೆ ಬರುವರು. ಜ್ಞಾನದಿಂದ ಪ್ರೇಮದಡೆಗೆ ಪಯಣಿಸಿದಾಗ ಜ್ಞಾನಯೋಗವೆಂದು, ಪ್ರೇಮದಿಂದ ಜ್ಞಾನದೆಡೆಗೆ ಪಯಣಿಸಿದಾಗ ಭಕ್ತಿ ಯೋಗವೆಂದು ಕರೆಯಲಾಗುತ್ತದೆ. ಇಲ್ಲಿ ಯೋಗ ಎಂಬ ಪದ ನೋಡಿ ಯಾರೂ ಗಾಬರಿಯಾಗಬೇಕಿಲ್ಲ. ಯೋಗ ಎಂದರೆ ಸೇರಿಕೊಳ್ಳುವುದು. ಯಾವುದು ಯಾವುದರಲ್ಲಿ ಸೇರಿಕೊಳ್ಳುವುದು? ಸಾಂತ ಅನಂತದಲ್ಲಿ ಸೇರಿಕೊಳ್ಳುವುದು. ಊಜ್ಞಿಜಿಠಿಛಿ, ಜ್ಞಿ್ಛ್ಞಠಿಛಿನಲ್ಲಿ ಸೇರಿಕೊಳ್ಳುವುದು. ಬೇಕಿದ್ದೋ ಬೇಕಿಲ್ಲದೆಯೋ, ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರತಿ ವಸ್ತುವೂ, ಗಮನಿಸಿ ಪ್ರತೀ ಜೀವಿಯೂ ಅಂತ ಹೇಳುತ್ತಿಲ್ಲ ನಾನು! ಪ್ರತಿ ವಸ್ತುವೂ ಒಂದು ದಿನ ಅನಂತದೆಡೆಗೆ ಪಯಣಿಸಲೇಬೇಕು ಅರ್ಥಾತ್ ಯೋಗದೆಡೆಗೆ ಸಾಗಲೇಬೇಕು. ಇದನ್ನೇ ವಿಜ್ಞಾನ ’ವಿಕಾಸವಾದ’ ಅಥವಾ ಖಜಛಿಟ್ಟಢ ಟ್ಛ ಛಿಡಟ್ಝ್ಠಜಿಟ್ಞ ಎನ್ನುತ್ತದೆ. ಕೇವಲ ಭಗವತ್ಪ್ರೇಮದಿಂದ ನಿರಾಕಾರವೂ ಸರ್ವಜ್ಞನೂ ಅಗ್ರಾಹ್ಯವೂ ಆದ ಪರಮಾತ್ಮನನ್ನು ಕಲ್ಲು ವಿಗ್ರಹದ ಮೂಲಕ ಪ್ರೀತಿಸಿ ಆರಾಧಿಸಿ ಮನುಷ್ಯ ಅನಂತ ಮಹಿಮೆ ಅನಂತ ಶಕ್ತಿಗಳನ್ನು ಹೇಗೆ ನಿಸ್ಸಂಶಯವಾಗಿ ಹೊಂದಬಹುದು ಎಂಬುದನ್ನು ಆಧುನಿಕ ಯುಗದಲ್ಲಿ ಶ್ರೀರಾಮಕೃಷ್ಣರಿಗಿಂತಲೂ ಚೆನ್ನಾಗಿ ತೋರಿಸಿಕೊಟ್ಟವರಾರು! ತನ್ನ ಹೆಸರನ್ನೇ ಸರಿಯಾಗಿ ಬರೆಯುವುದಕ್ಕೆ ಬಾರದಿದ್ದ ರಾಮಕೃಷ್ಣರನ್ನು ವಿವೇಕಾನಂದರು ಬಣ್ಣಿಸಿದ್ದು ಅವರು ಒಂದು ಹಿಡಿ ಮಣ್ಣಿನಿಂದ ಸಾವಿರ ವಿವೇಕಾನಂದರನ್ನು ಸೃಷ್ಟಿಸಬಲ್ಲರು ಎಂದು. ಇಂದು ವಿವೇಕಾನಂದರು ಏನೇನು ಬರೆದಿದ್ದಾರೋ ಏನೇನು ಮಾತನಾಡಿದ್ದಾರೋ ಅವೆಲ್ಲ ಶ್ರೀರಾಮಕೃಷ್ಣರ ಮಾತುಗಳ ವಿಸõತ ರೂಪ ಮಾತ್ರ. ಸ್ವಾಮಿ ತುರೀಯಾನಂದರು ಒಮ್ಮೆ ಹೇಳಿದ್ದುಂಟು. ಖಡಿಚಞಜ್ಜಿಜಿ ್ಞಡಛ್ಟಿ ಠಟಟkಛಿ ಚ ಠಜ್ಞಿಜ್ಝಛಿ ಡಿಟ್ಟಛ ಟ್ಛ ಜಜಿಠ ಟಡ್ಞಿ ಎಂದು. ಇವೆಲ್ಲಾ ವಿಗ್ರಹಾರಾಧನೆಯ ಫಲವೇ.

ವಿಗ್ರಹಾರಾಧನೆಯನ್ನು ನರೇಂದ್ರ ಕೂಡ ಮೊದಲು ಒಪ್ಪಿಕೊಂಡಿರಲಿಲ್ಲ. ಬ್ರಹ್ಮ ಸಮಾಜದ ಪ್ರಭಾವ. ಅದೊಂದು ಆಧುನಿಕ ವಿದ್ಯಾವಂತರಂತೆ ಅಂದಿನ ವಿದ್ಯಾವಂತರು (ಪಾಶ್ಚಾತ್ಯ ಅರ್ಥದಲ್ಲಿ) ನಿರ್ವಿುಸಿಕೊಂಡಿದ್ದ ಒಂದು ವೇದಿಕೆ. ಆದರೆ, ಅತ್ಯಂತ ವೈಜ್ಞಾನಿಕ ಪ್ರವೃತ್ತಿಯ, ಪೂರ್ವಾಗ್ರಹರಹಿತನಾದ ನರೇಂದ್ರನಿಗೆ ಮನುಷ್ಯನ ಮನಸ್ಸಿಗೆ ಸಾಕಾರದ ಮೂಲಕ ಮಾತ್ರ ನಿರಾಕಾರ, ಅನಂತದ ಅನುಭವವಾಗಬಲ್ಲದು ಎಂಬುದು ಬೇಗ ಗೊತ್ತಾಯಿತು. ಮನುಷ್ಯನ ಮನಸ್ಸು ಅನಂತವನ್ನು ಊಹಿಸಲೇ ಆಗದು. ಏಕೆಂದರೆ ಮನಸ್ಸೇ ಶಾಂತ ಅಷ್ಟೇ ಅಲ್ಲ ಅದು ‘ಇದೆ’ ಮತ್ತು ‘ಇಲ್ಲ’ದರ ನಡುವೆ ಇರುವ ವಿಚಿತ್ರ ಶಕ್ತಿ. ಇದೆಲ್ಲಾ ಗೊತ್ತಾದ ಮೇಲೆ ಸ್ವಾಮಿ ವಿವೇಕಾನಂದರು ನಿರೂಪಿಸಿದ್ದು. ‘ನಾನೂ ಒಮ್ಮೆ ವಿಗ್ರಹಾರಾಧನೆಯನ್ನು ವಿರೋಧಿಸುತಿದ್ದೆ. ಅದರ ಫಲವಾಗಿ ಯಾರು ವಿಗ್ರಹಾರಾಧನೆಯ ಮೂಲಕವೇ ಸರ್ವಜ್ಞತ್ವವನ್ನು ಪಡೆದುಕೊಂಡರೋ ಅವರ ಪಾದದಡಿಯಲ್ಲಿ ಕುಳಿತು ಪ್ರತಿಯೊಂದನ್ನೂ ಕಲಿಯಬೇಕಾಯಿತು’ ಎಂದು.

ಇನ್ನು ವಿಗ್ರಹ ರೂಪವನ್ನು ಬಿಡೋಣ. ಈ ನಿರಾಕಾರ ಅನಂತ ಮೊದಲಾದ ಗುಣವಾಚಕಗಳಿಂದ ನಾನು ಸೂಚಿಸುತ್ತಿರುವ ಆ ಪರತತ್ವ ಅಥವಾ ಪರಮಾತ್ಮ ಎನ್ನುವುದಾದರೂ ಇದೆಯೇನು? ವಿಜ್ಞಾನ ಅಂಥದ್ದೊಂದನ್ನು ಒಪ್ಪುತ್ತದೆಯೇನು? ಈ ಪ್ರಶ್ನೆಗಳೇನಾದರೂ ಬಂದರೆ ವಿಜ್ಞಾನ ಪರತತ್ವವನ್ನು ಒಪ್ಪುವಷ್ಟು ಸ್ಪಷ್ಟವಾಗಿ ಈ ಪ್ರಪಂಚದ ಯಾವ ಧರ್ಮವೂ ಒಪ್ಪುವುದಿಲ್ಲ ಎನ್ನುವುದೇ ಉತ್ತರ. ಐನ್​ಸ್ಟೀನ್ ಸಾಪೇಕ್ಷ ವಾದವನ್ನು ಅರ್ಥ ಮಾಡಿಕೊಂಡವರಾರೂ ನಾಸ್ತಿಕರಾಗಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲ! ಅವರು ಭಾರತೀಯ ವೇದಾಂತವನ್ನು ಆ ಕ್ಷಣದಿಂದಲೇ ಅಧ್ಯಯನ ಮಾಡಲು ವ್ರತಬದ್ಧರಾಗಿ ಬಿಡುತ್ತಾರೆ.

ಸಾಪೇಕ್ಷ ವಾದವು ಆಸ್ತಿಕತೆಯನ್ನು ಹೇಗೆ ಎತ್ತಿ ಹಿಡಿಯುತ್ತದೆ ಎಂಬುದನ್ನು ನೋಡೋಣ. ಈ ವಾದದ ಪ್ರಕಾರ ಒಂದು ವಸ್ತು ಬದಲಾವಣೆಯಾಗುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಬೇಕಾದರೆ ಅದಕ್ಕಿಂತಲೂ ಕಡಿಮೆ ಬದಲಾವಣೆ ಹೊಂದುತ್ತಿರುವ ಅಥವಾ ಬದಲಾವಣೆಯೇ ಇಲ್ಲದ ಇನ್ನೊಂದು ವಸ್ತುವಿನ ಹಿನ್ನೆಲೆ ಅದಕ್ಕೆ ಇರಬೇಕು. ಬದಲಾವಣೆಯೇ ಇಲ್ಲದ (ಜಿಞಞ್ಠಠಿಚಚ್ಝಿಛಿ) ವಸ್ತು ಎಂದೆಂದಿಗೂ ಅನಂತ (ಜ್ಞಿ್ಛ್ಞಠಿಛಿ). ಅಲ್ಲದೆ, ಕಡಿಮೆ ಬದಲಾವಣೆಯ ಹಿನ್ನೆಲೆ ಇದೆ ಎಂದು ಹೇಳುವುದಾದರೆ ಕಡಿಮೆಯೋ ಹೆಚ್ಚೋ ಒಟ್ಟಿನಲ್ಲಿ ಅದೂ ಬದಲಾವಣೆ ಹೊಂದುತ್ತಿರುವ ವಸ್ತುವೇ ತಾನೇ? ಅದರ ಬದಲಾವಣೆಯಾದರೂ ಹೇಗೆ ತಿಳಿಯಿತು ನಿಮಗೆ. ಹೇಗೆಂದರೆ ಅದಕ್ಕಿಂತಲೂ ಕಡಿಮೆ ಬದಲಾವಣೆಗೊಳಗಾದ ವಸ್ತುವಿನ ಹಿನ್ನೆಲೆ ಅದಕ್ಕಿರುವುದರಿಂದ. ಈ ತರ್ಕವನ್ನು ಹೀಗೆಯೇ ನಿರಂತರ ಮುಂದುವರಿಸಿದರೆ (ಚಛ ಜ್ಞಿ್ಛ್ಞಠ್ಠಿಞ) ಒಂದಕ್ಕಿಂತ ಒಂದು ಕಡಿಮೆ ಬದಲಾವಣೆ ಹೊಂದುತ್ತಿರುವ ಹಿನ್ನೆಲೆಗಳನ್ನೆಲ್ಲಾ ದಾಟಿಕೊಂಡು ಹೋಗಿ ಮುಂದೆ ಬದಲಾವಣೆ ರಹಿತ ವಸ್ತುವನ್ನು ನೀವು ತಲುಪಬೇಕಾಗುತ್ತದೆ. ಅರ್ಥಾತ್ ಪ್ರಪಂಚದ ಯಾವುದೇ ಬದಲಾವಣೆ, ನಮ್ಮ ಗ್ರಹಿಕೆಗೆ ಬರಬೇಕಾಗಿದ್ದರೆ ನಾವು ಅನಂತ, ಯಾವ ಬದಲಾವಣೆಯೂ ಇಲ್ಲದ ವಸ್ತುವೊಂದರ ಅಸ್ತಿತ್ವವನ್ನು ಒಪ್ಪಲೇಬೇಕು. ಅದು ಅನಂತ, ನಿರಾಕಾರ, ನಿರವಯವ, ನಿರ್ಗಣ, ಇದೇ ಚಚಿಠಟ್ಝ್ಠಛಿ. ಸಂಪೂರ್ಣ ಅರ್ಥದಲ್ಲಿ ಇದು ಚಚಿಠಟ್ಝ್ಠಛಿ ಅಥವಾ ನಿರಪೇಕ್ಷ. ಆದ್ದರಿಂದಲೇ ಈ ವಿಶ್ವ ಸಾಪೇಕ್ಷ ಅಥವಾ ್ಟ್ಝಠಿಜಿಡಛಿ. ಇದು ಅನಂತವಾದ್ದರಿಂದ ಇದರ ಆಚೆಗೆ ಬೇರೇನೂ ಇಲ್ಲವಾದ್ದರಿಂದ ಇದೇ ಇಡೀ ಸೃಷ್ಟಿಯ ಮೂಲವಸ್ತು. ಇದರ ಬೃಹತ್ತತೆ, ಅಗಾಧತೆಯನ್ನು ಕಂಡ ವೇದಕಾಲದ ಋಷಿಗಳು ಇದನ್ನು ’ಬ್ರಹ್ಮ’ ಎಂದು ಕರೆದರು. ಇದೇ ಸೃಷ್ಟಿಗೆ ಮೂಲ ಎಂಬುದನ್ನು ’ಜನ್ಮಾದ್ಯಸ್ಯ ಯತಃ’ ಮತ್ತು ’ಸರ್ವಂ ಖಲ್ವಿದಂ ಬ್ರಹ್ಮ’ ಎಂದು ಸೂಚಿಸಿದರು. ಅದ್ವೈತಿಗಳು ಬೌದ್ಧರ ವಾದವನ್ನು ಬುಡಮೇಲು ಮಾಡಿದ್ದು ಇಲ್ಲಿಯೇ.

ಆದರೆ, ಈ ಪರಿಣಾಮರಹಿತ ನಿರ್ಗಣ ಬ್ರಹ್ಮ ಜಗತ್ತಾಗಿ ಪರಿಣಾಮ ಹೊಂದುವುದಾದರೂ ಹೇಗೆ? ಅದು ಹೇಗೆ ಸಾಧ್ಯವಾದೀತು? ಬ್ರಹ್ಮ ಮತ್ತಾವ ವಸ್ತುವಾಗಿಯೂ ಪರಿಣಾಮ ಹೊಂದಲೇ ಬಾರದಲ್ಲ ಎನ್ನುವ ಪ್ರಶ್ನೆಗೆ ಉತ್ತರ ಅವನು ಸರ್ವಶಕ್ತ; ಅಸಾಧ್ಯವಾದದ್ದನ್ನು ಸಾಧ್ಯವಾಗಿಸುತ್ತಾನೆ, ‘ಅಘಟಿತ ಘಟನಾ ಪಟೀಯಸಿ’ ಘಟಿಸಲಾಗದ್ದನ್ನು ಘಟಿಸುವಂತೆ ಮಾಡಬಲ್ಲ ಎಂಬ ಆರ್ಯ ಚಿಂತನೆಯೇ. ಆ ಕಾರಣಕ್ಕಾಗಿಯೇ ಇಡೀ ಮನುಕುಲ ಅವನ ಮುಂದೆ ಬಗ್ಗುತ್ತದೆ. ಅವನನ್ನು ಪ್ರಾರ್ಥಿಸುತ್ತದೆ. ಯಾವುದೋ ಹೆಸರಿನಿಂದ ಯಾವುದೋ ರೀತಿಯಲ್ಲಿ ಇಡೀ ಪ್ರಪಂಚ ಅವನನ್ನು ಆರಾಧಿಸುತ್ತದೆ. ಏಕೆಂದರೆ, ಅವನು ಸರ್ವಶಕ್ತ, ಸರ್ವವ್ಯಾಪಿ, ಸರ್ವಜ್ಞ, ದೈವಶ್ರದ್ಧೆ ಇಷ್ಟೊಂದು ವೈಜ್ಞಾನಿಕವಾಗಿದೆ. ಅದು ಮೌಢ್ಯವಾದರೆ ಐನ್​ಸ್ಟೀನರ ವಾದವೂ ಮೌಢ್ಯವೇ, ನ್ಯೂಟನ್ನಿನ ಚಲನೆಯ ನಿಯಮಗಳೂ ಮೌಢ್ಯವೇ. ಪಾಶ್ಚಿಮಾತ್ಯ ಮೂಲದಿಂದ ಬಂದ ಮೌಢ್ಯಗಳನ್ನು ವೈಜ್ಞಾನಿಕವೆಂತಲೂ ಭಾರತೀಯ ಮೂಲದ, ವಿಜ್ಞಾನಕ್ಕೇ ಸವಾಲೆಸೆಯುವ ವಿಜ್ಞಾನಕ್ಕೇ ಆಧಾರವಾಗಬಲ್ಲ ಆಧ್ಯಾತ್ಮಿಕತೆಯನ್ನು ಮೌಢ್ಯವೆಂತಲೂ ಭಾವಿಸುವ ಮಹಾಮೌಢ್ಯ, ಮೌಢ್ಯಾತಿಮೌಢ್ಯದಿಂದ ನಾವು ಪಾರಾಗುವುದು ಒಳ್ಳೆಯದು. ಇಲ್ಲವೇ ನಗೆಪಾಟಲಿಗೆ ಒಳಗಾಗುತ್ತೇವೆ. ಈಗಾಗಲೇ ಒಳಗಾಗುತ್ತಿದ್ದೇವೆ. ಇದನ್ನೆಲ್ಲಾ ನೋಡಿದಾಗ ಆಂಗ್ಲ ಗಾದೆಯೊಂದು ನೆನಪಿಗೆ ಬರುತ್ತದೆ. ಉಡಛ್ಟಿಢ ್ಛಟ್ಝ ಜಚಠ ್ಛlಟಡಿಛ್ಟಿಠ ಚ್ಞಛ ್ಛಟ್ಝಠ ಜಚಡಛಿ ಞಟ್ಟಛಿ ್ಛlಟಡಿಛ್ಟಿಠ. ಈ ಹಿನ್ನೆಲೆಯಲ್ಲೇ ವಿವೇಕಾನಂದರು ಹೇಳಿದ್ದು, ‘ಭಾರತೀಯರೇ ನಿಮ್ಮೆಲ್ಲರ ಒಳಿತಿಗಾಗಿ ನಾನು ಒಂದು ಮಾತು ಹೇಳುತ್ತೇನೆ. ಭಾರತೀಯ ಮೂಲವಾದದ್ದನ್ನು ಮೊದಲು ಒಪ್ಪಿಕೊಳ್ಳಿ. ನಂತರ ಪರೀಕ್ಷಿಸಿ. ಪಾಶ್ಚಾತ್ಯ ಮೂಲವಾದದ್ದನ್ನು ಮೊದಲು ಪರೀಕ್ಷಿಸಿ ನಂತರ ಒಪ್ಪಿಕೊಳ್ಳಿ. ಚಂದ್ರಯಾನಕ್ಕೆ ಮೊದಲು ನಡೆದ ದೇವಯಾನ ಸರಿಯಾಗಿಯೇ ಇದೆ. ಅದೇ ವಿಜ್ಞಾನ. ಮತ್ತು ಇದೇ ಸಾಂವಿಧಾನಿಕ. ಏಕೆಂದರೆ ಸತ್ಯಾನ್ವೇಷಣೆ, ಸತ್ಯನಿಷ್ಠೆ ಮತ್ತು ಸತ್ಯಗಳ ಆಚರಣೆಯೇ ಎಂದೂ ತಿದ್ದುಪಡಿಗೊಳಗಾಗದ ಸಾರ್ವಕಾಲಿಕ ಸಂವಿಧಾನ. ಭಾರತೀಯ ಚಿಂತಕರು ಅನಾದಿಕಾಲದಿಂದ ಅನುಸರಿಸಿಕೊಂಡು ಬರುತ್ತಿರುವುದೂ ಇದನ್ನೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net