

‘ಭಾರತೀಯ ಮೂಲವಾದದ್ದನ್ನು ಮೊದಲು ಒಪ್ಪಿಕೊಳ್ಳಿ, ನಂತರ ಪರೀಕ್ಷೆಗೆ ಒಳಪಡಿಸಿ; ಪಾಶ್ಚಿಮಾತ್ಯ ಮೂಲವಾದದ್ದನ್ನು ಮೊದಲು ಪರೀಕ್ಷಿಸಿ ನಂತರ ಒಪ್ಪಿಕೊಳ್ಳಿ’ ಎನ್ನುವ ಸ್ವಾಮಿ ವಿವೇಕಾನಂದರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅದಕ್ಕೆ ಪೂರ್ತಿ ವಿರುದ್ಧವಾಗಿ ನಡೆದುಕೊಂಡು ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ 20 ಶತಮಾನಗಳಿಗಿಂತ ದೀರ್ಘಕಾಲ ‘ಸುವರ್ಣಯುಗ’ವನ್ನು ಕಂಡು ಮೆರೆದಿದ್ದ ಭಾರತವನ್ನು ಇಂದು ಸಾಧಾರಣ ಸ್ಥಿತಿಯಲ್ಲೇ ಮುಂದುವರಿಯುವಂತೆ ಮಾಡಿದ್ದೇ ನಮ್ಮ ಸಾಧನೆ. ಪ್ರಪ್ರಥಮ ಏಷ್ಯನ್ ನೊಬೆಲ್ ವಿಜೇತ, ರವೀಂದ್ರನಾಥ ಟ್ಯಾಗೋರ್ ಅವರ ‘ಭಾರತವನ್ನು ಅರಿಯಬೇಕಾದರೆ ವಿವೇಕಾನಂದರನ್ನು ಅಧ್ಯಯನಿಸಿ. ಅವರಲ್ಲಿ ಪ್ರತಿಯೊಂದೂ ಸಕಾರಾತ್ಮಕ; ನಕಾರಾತ್ಮಕವಾದದ್ದು ಯಾವುದೂ ಇಲ್ಲ’ ಎನ್ನುವ ಕರೆಯೂ ನಮ್ಮ ಕಿವಿಗಳನ್ನು ಮುಟ್ಟದಿದ್ದುದು ಸೋಜಿಗ!
ಶಂಕರರನ್ನು ಕುರಿತು ಬರೆಯುವಾಗ ಒಂದಷ್ಟು ಹಿನ್ನೆಲೆಯನ್ನು ಹೇಳಬೇಕಾದದ್ದು ಅನಿವಾರ್ಯ. ಇಡೀ ಮನುಕುಲಕ್ಕೆ ಅತ್ಯುನ್ನತ ಜ್ಞಾನವನ್ನು ಹಂಚಿದ ಭಾರತ ‘ಧರ್ಮ’ ಎನ್ನುವ ಮೌಲ್ಯವನ್ನು ಕಂಡುಹಿಡಿದದ್ದು ಅದರ ಮೇರುಸಾಧನೆಗಳಲ್ಲೊಂದು. ಇದು ಇಂಗ್ಲಿಷಿನ "Religion' ಅಲ್ಲ, ಆಸ್ತಿಕತೆಯೂ ಅಲ್ಲ. ದೇವರನ್ನು ಕುರಿತ ವರ್ಣನೆಯೂ ಅಲ್ಲ. ಅದೊಂದು ಶಿಸ್ತು. ಅನಂತತೆಯನ್ನು, ಸರ್ವಶಕ್ತಿತ್ವವನ್ನು ಸಾಧಿಸುವ ತರಬೇತಿ. ಅದಕ್ಕೆ ಬೇಕಾದದ್ದು ಸತ್ಯಪ್ರಿಯತೆ; ಸತ್ಯದೆಡೆಗಿನ ನಿಷ್ಠೆ, ಸತ್ಯವನ್ನೇ ಅರಸಿ, ಅದಕ್ಕೆ ಬದ್ಧರಾಗಿ, ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗುವ ಗುಂಡಿಗೆ. ಭಾರತೀಯ ಸಂಹಿತೆಯಲ್ಲಿ ‘ಧೀರ’ ಎನ್ನುವ ಶಬ್ದಕ್ಕೆ ಇದೇ ಅರ್ಥ.
ಇಲ್ಲಿ ‘ಧೀ’ ಎನ್ನುವ ಅಕ್ಷರ ಇರುವುದನ್ನು ಗಮನಿಸಿ. ‘ಧೀ’ ಎಂದರೆ ವಿವೇಕಪೂರ್ಣ ಬುದ್ಧಿ. ದೇಶಗಳನ್ನು ಗೆಲ್ಲುವುದು kindergarten ಬುದ್ಧಿಗೆ ಮೀಸಲಾದ ಗುರಿ. ವಿಲಾಸ, ಭೋಗ, ಅಧಿಕಾರಗಳ ಪೊಳ್ಳುತನವನ್ನು ರಾಮ, ನಚಿಕೇತ, ಯಯಾತಿಗಳ ಮೂಲಕ ಹೇಳಿಸಿ ಅಲೆಗ್ಸಾಂಡರ್ಗಳು, ಸೀಸರ್ಗಳು, ಶಾಲ್ಮರ್ಗಳು ಕನ್ನಡಿ ಹುಡುಕುವಂತೆ ಮಾಡಿದೆ ಭಾರತ. ಅದೆಲ್ಲ ಹುಡುಗು ಬುದ್ಧಿ, ಅಪಕ್ವ ಮನಸ್ಸು. ಏಕೆಂದರೆ ‘ಸತ್ಯಾನ್ವೇಷಣೆ’ ಒಂದರಿಂದಲೇ ವಿವೇಕಾನಂದರ ಮಾತಿನಲ್ಲಿ ಹೇಳಬೇಕೆಂದರೆ power (ಅಧಿಕಾರ), purity (ಪಾವಿತ್ರ್ಯ), glory (ಭವ್ಯತೆ), goodness (ಸಜ್ಜನಿಕೆ), everything that is excellent (ಶ್ರೇಷ್ಠವಾದ ಪ್ರತಿಯೊಂದೂ) ಲಭ್ಯವಿರುವಾಗ ಒಂದೊಂದರ ಹಿಂದೆಯೂ ಹೋಗಿ ಕಾಲ, ಶಕ್ತಿ ವ್ಯರ್ಥಮಾಡುವುದರಲ್ಲಿ ಏನರ್ಥ ಇದೆ?! ಈ ಸತ್ಯಾನ್ವೇಷಣೆಯ ಒಂದು ತುಣುಕು ಇಂದಿನ ವಿಜ್ಞಾನ. The Tao of Physics ನ ಕರ್ತೃ Fritjof Capra, ಅಣು ವಿಜ್ಞಾನಿ ಓಪನೀಮರ್, ಕ್ವಾಂಟಮ್ ವಿಜ್ಞಾನ ಜನಕ ಷ್ರೋಡಿಂಗರ್, ನೀಲ್ ಬೋರ್, ನೊಬೆಲ್ ಪುರಸ್ಕೃತ ಜಾನ್ ವ್ಹೀಲರ್ ಇವರೆಲ್ಲ ಭಾರತೀಯ ಚಿಂತನೆ, ಭಾರತೀಯ ಸಂಸ್ಕೃತಿ, ಉಪನಿಷತ್, ವೇದಗಳ ಅವಲೋಕನದಿಂದ ದಿš್ಮೂಢರಾಗಿ ಈ ದೇಶದ, ಅದರ ಚಿಂತನೆಯ ಆಳ-ಅಗಲಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದ್ದರೆ, ಎಮರ್ಸನ್, ಮ್ಯಾಕ್ಸ್ ಮುಲ್ಲರ್ಗಳು ‘ನಾವು ಕೂಡ ಭಾರತೀಯ ಋಷಿಸಂತಾನವೇ, ಪೂರ್ವಜನ್ಮ, ಪುನರ್ಜನ್ಮಗಳಲ್ಲಿ ನಮಗೆ ನಂಬಿಕೆ ಇದೆ’ ಎಂದು ಹೇಳಿ ಸಾರ್ಥಕ್ಯ ಭಾವವನ್ನು ಹೊರಗೆಡುಹಿದ್ದಾರೆ.
ಸತ್ಯದ ಅನ್ವೇಷಣೆಯಲ್ಲಿ ಮೊದಲ ಹೆಜ್ಜೆಯೇ (ಆಧುನಿಕ ವಿಜ್ಞಾನ) ಮನುಷ್ಯನ ಕೈಯಲ್ಲಿ ಇಷ್ಟು ಶಕ್ತಿಗಳನ್ನು (ತಾಂತ್ರಿಕತೆಯ ರೂಪದಲ್ಲಿ) ಇಟ್ಟಿರುವಾಗ ಪೂರ್ಣಸತ್ಯವನ್ನು ಪಡೆದಲ್ಲಿ ಮನುಷ್ಯ ಏನಾಗಲಾರ?! ಈ ಸ್ಥಿತಿಯನ್ನೇ ‘ಮುಕ್ತಿ’ ಎನ್ನುವುದು. ಉಪನಿಷತ್ ಹೇಳುತ್ತದೆ ಈ ಮಹಾನ್ ಗುರಿಯಲ್ಲಿ ಎಲ್ಲೋ ಒಬ್ಬೊಬ್ಬರು ಆಸಕ್ತಿ, ಬದ್ಧತೆ, ನಿಷ್ಠೆಯನ್ನು ಉಳ್ಳವರಾಗಿರುತ್ತಾರೆ ಎಂದು. ಆದರೆ ಒಂದು ರೀತಿಯ ತರಬೇತಿಯಿಂದ ಈ ಪರಿಸ್ಥಿತಿಯನ್ನು ಸುಧಾರಿಸಬಹುದು. ಆ ತರಬೇತಿಯೇ ‘ಧರ್ಮ’. ಆದ್ದರಿಂದ ಭಾರತ ಈ ಧರ್ಮ ಎನ್ನುವ ಪದವನ್ನು ತನ್ನ ಅಸ್ತಿತ್ವದ ಬುನಾದಿಯನ್ನಾಗಿಸಿಕೊಂಡಿತು. ‘ಧರ್ಮಕ್ಕೋಸ್ಕರ ಯಾವ ತ್ಯಾಗಕ್ಕೂ ಸಿದ್ಧರಾಗಿ’ ಎನ್ನುವುದನ್ನು ತನ್ನ ಧ್ಯೇಯವಾಕ್ಯವನ್ನಾಗಿಸಿಕೊಂಡಿತು. ಇಡೀ ವೇದ, ಮಹಾಭಾರತ ಇತ್ಯಾದಿ ನೂರಾರು ಪರಿಕರಗಳ ಮೂಲಕ ಈ ಸಂದೇಶವನ್ನು ಸಾರಿತು.
‘ಸತ್ಯಾನ್ವೇಷಣೆ’ ಎಂಬ ಗುರಿ ಒಂದೇ ಆದರೂ ‘ಧರ್ಮ’ ಎನ್ನುವ ಶಿಸ್ತು ಇದಕ್ಕೆ ಉಪಕರಣವಾದರೂ ಭಿನ್ನ ರೀತಿಯ ಮನುಷ್ಯರ ವಿಭಿನ್ನ ಸಾಮರ್ಥ್ಯಗಳಿಂದಾಗಿ ‘ಧರ್ಮ’ವನ್ನು ಶ್ರೇಣೀಕೃತವಾಗಿಸಬೇಕಾದ್ದು ಸನಾತನ ಧರ್ಮಕ್ಕೆ ಅನಿವಾರ್ಯವಾಯಿತು. ಈ ಸಂಕೀರ್ಣ ವ್ಯವಸ್ಥೆಯೇ ವೇದಗಳ ವಸ್ತು. ಈ ವ್ಯವಸ್ಥೆ ಋಗ್ವೇದದ ಕಾಲದಿಂದ ಮಹಾಭಾರತದವರೆಗೆ ಒಂದು ರೀತಿಯಲ್ಲಿ ನಡೆದರೆ, ನಂತರದ ರಚನೆ-ರೀತಿಗಳು ಬೇರೆಯೇ ಆದವು.
ಚರಮ ಸತ್ಯವನ್ನು, ಅದರ ಅನ್ವೇಷಣೆಯ ರೀತಿನೀತಿಗಳನ್ನು ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ‘ಭಗವಾನ್ ಬುದ್ಧ’ ಒಂದು ವಿಶಿಷ್ಟಮಾರ್ಗವನ್ನವಲಂಬಿಸಿದ. ಉಪನಿಷತ್ ಚಿಂತನೆಗಳ ನೈತಿಕ ಆಯಾಮಗಳಿಗೆ ಹೆಚ್ಚು ಒತ್ತು ಕೊಟ್ಟು ದಾರ್ಶನಿಕ, ತಾತ್ವಿಕತೆಗಳ ರ್ತಾಕ ನೆಲೆಗಟ್ಟುಗಳನ್ನು ಪಕ್ಕಕ್ಕಿಟ್ಟ. ಈ ಸಂದರ್ಭದಲ್ಲಿ ಕೆಲ ಮುಖ್ಯ ತತ್ತ ್ವಳ ಬಗ್ಗೆ ಮೌನವಾಗಿರಬೇಕಾದದ್ದು ಅನಿವಾರ್ಯವಾಯಿತು. ಈ ಮೌನಕ್ಕೆ ತೆತ್ತ ಬೆಲೆ ಬಹಳವಾಯ್ತು. ರಾಜಾಶ್ರಯ, ಸಂಖ್ಯಾಬಾಹುಳ್ಯಗಳು ಕೈವಶವಾದಮೇಲಂತೂ ಪ್ರಪಂಚದ ಮೊಟ್ಟಮೊದಲ ಜಿಞಟಛ್ಟಿಜಿಚ್ಝಜಿಠಠಿಜ್ಚಿ ್ಟ್ಝಜಜಿಟ್ಠಠ ಜಿಞಟ್ಠ್ಝಛಿ ತನ್ನನ್ನು ಆವರಿಸಿಕೊಂಡಿದ್ದು ಬೌದ್ಧಧರ್ಮಕ್ಕೆ ಗೊತ್ತೇ ಆಗಲಿಲ್ಲ.
ಅಶೋಕನ ರಾಜಕೀಯ ಮಹತ್ವಾಕಾಂಕ್ಷೆ ಧಾರ್ವಿುಕ ಮಹತ್ವಾಕಾಂಕ್ಷೆಯಾಗಿ ಪರಿವರ್ತಿತವಾದದ್ದು ಅದಕ್ಕೆ ಇನ್ನಷ್ಟು ಇಂಬು ಕೊಟ್ಟಿತು ಮತ್ತು ಈ ಜಿಞಟಛ್ಟಿಜಿಚ್ಝಜಿಠಠಿಜ್ಚಿ ಜಿಞಟ್ಠ್ಝಛಿನ ಮೂಲವು ಅದೇ. ಇದರ ಮೊದಲ ಬಲಿಯೇ ಮಾತೃಧರ್ಮವಾದ ವೇದಧರ್ಮ. ಇಂಥದ್ದೇ ಸಂದರ್ಭಗಳು ಎದುರಾಗಿ ತನ್ನಿಂದಲೇ ಸಿಡಿದೆದ್ದ ಇಸ್ಲಾಂ ಧರ್ಮದಿಂದ ಪಾರಸೀಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದಿಂದ ಯೆಹೂದ್ಯಧರ್ಮ ನುಂಗಹಾಕಲ್ಪಟ್ಟಿದ್ದು ಅಧ್ಯಯನಯೋಗ್ಯ. ಅಸಂಖ್ಯಾತ ಭಿಕ್ಷುಗಳು, ಜಾಗತಿಕ ವ್ಯಾಪ್ತಿ, ವಿಪುಲ ರಾಜಾಶ್ರಯಗಳಿಂದ ಮೆರೆಯುತ್ತಿದ್ದ ಈ ಸಾರ್ವಭೌಮ ಧರ್ಮಕ್ಕೆ ಇದ್ದ ಒಂದೇ ಸವಾಲೆಂದರೆ ಆಂತರಿಕ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು, ಮೂಲತತ್ತ ್ವೇ
ಚರ್ಚಾಸ್ಪದ ವಿಷಯವಾಗಿದ್ದು. ಇವೆಲ್ಲವೂ ಭಿಕ್ಷುಗಳ ಸಂಖ್ಯಾ ಬಾಹುಳ್ಯ ಗುಣಾತ್ಮಕತೆಗೆ ಸವಾಲಾಗಿದ್ದಲ್ಲದೆ ಮೂಲ ಸ್ರೋತಕ್ಕೆ ಸಂಬಂಧವೇ ಇಲ್ಲದ ತಾಂತ್ರಿಕ ಆಚಾರಗಳು ಅಷ್ಟೇ ಬೃಹತ್ತಾಗಿ ಬುಡಕ್ಕೇ ಪೆಟ್ಟು ಕೊಟ್ಟವು. ಈ ಸಂದರ್ಭವನ್ನು ಕುರಿತು ಮಹಾಪ್ರಾಜ್ಞ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ, ‘‘ಬೌದ್ಧಧರ್ಮದ ಅವನತಿಯ ಸಮಯದಲ್ಲಿ ಇದ್ದ ಹೀನ ಆಚಾರ ಅವ್ಯವಹಾರಗಳ ವಿಷಯವನ್ನು ಕುರಿತು ಮಾತನಾಡುವುದಕ್ಕೆ ಇಚ್ಛೆಯಾಗಲಿ ಸಮಯವಾಗಲಿ ಇಲ್ಲ. ಅತಿ ಕುತ್ಸಿತ ಅನುಷ್ಠಾನ ಪದ್ಧತಿ, ಅತ್ಯಂತ ಭಯಾನಕ ಮತ್ತು ಅಶ್ಲೀಲ ಗ್ರಂಥಗಳು ಆ ಸಮಯದಲ್ಲಿ ಬಂದವು. ಮನುಷ್ಯ ಇದುವರೆಗೆ ಇಂತಹುದನ್ನು ಬರೆದಿರಲಿಲ್ಲ. ಇಂತಹುದನ್ನು ಕಲ್ಪಿಸಿಕೊಂಡಿರಲೂ ಇಲ್ಲ. ಇಂತಹ ಭೀಷಣ ಭಯಾನಕ ಅನುಷ್ಠಾನ ಪದ್ಧತಿ ಧರ್ಮದ ಹೆಸರಿನಲ್ಲಿ ಪ್ರಚಲಿತವಾಯಿತು. ಇವೇ ಅಂದಿನ ಬೌದ್ಧ ಧರ್ಮದ ಕೊಡುಗೆ.
ಆದರೆ ಭರತಖಂಡ ಬದುಕಬೇಕಾಗಿತ್ತು. ಪುನಃ ಭಗವಂತನ ಆವಿರ್ಭಾವವಾಯಿತು. ‘ಧರ್ಮಗ್ಲಾನಿಯಾದಾಗ ನಾನು ಬರುತ್ತೇನೆ’ ಎಂದ ಭಗವಂತನು ಈ ವೇಳೆ ದಕ್ಷಿಣದಲ್ಲಿ ಜನ್ಮಧಾರಣೆಯನ್ನು ಮಾಡಿದನು. ಆ ಬ್ರಾಹ್ಮಣ ಯುವಕ ತಲೆ ಎತ್ತಿದನು. ಹದಿನಾರನೆಯ ವರುಷದ ಹೊತ್ತಿಗೆ ಅವನು ಗ್ರಂಥರಚನೆಯನ್ನೆಲ್ಲ ಪೂರೈಸಿದನು. ಇವರೇ ಅದ್ಭುತ ಶಂಕರಾಚಾರ್ಯರು. ಈ ಹದಿನಾರು ವರುಷದ ಯುವಕನ ಗ್ರಂಥಗಳು ಆಧುನಿಕ ಪ್ರಪಂಚದ ಅದ್ಭುತ! ವಿಸ್ಮಯ! ಹಾಗೆಯೇ ಹುಡುಗನೂ ಅದ್ಭುತ ಪ್ರತಿಭಾಶಾಲಿ! ಭರತಖಂಡವನ್ನು ಪ್ರಾಚೀನ ವಿಶುದ್ಧ ಮಾರ್ಗಕ್ಕೆ ತರಬೇಕೆಂದು ಅವರು ಸಂಕಲ್ಪ ಮಾಡಿದರು. ಆದರೆ ಆ ಕಾರ್ಯ ಎಷ್ಟು ಕಠಿಣ ಎಂಬುದನ್ನು ಕುರಿತು ಆಲೋಚಿಸಿ ನೋಡಿ.
ಭರತಖಂಡದ ಇಂದಿನ ಹೀನಸ್ಥಿತಿಯ ವಿಷಯವಾಗಿ ಕೆಲವು ವಿಷಯಗಳನ್ನು ನಾನು ಹೇಳಿರುವೆನು. ಈಗ ಸುಧಾರಿಸಬೇಕೆಂದಿರುವ ಸಂಸ್ಕಾರಗಳೆಲ್ಲ ಬೌದ್ಧಧರ್ಮದ ಅವನತಿಯ ಪರಿಣಾಮ. ಮಾನವ ಕೋಟಿಯ ಭಯಾನಕ ಜನಾಂಗಗಳಾದ ಬಲೂಚಿ, ಟಾರ್ಟರ್ ಮುಂತಾದವರು ಭರತಖಂಡಕ್ಕೆ ಬಂದು ಬೌದ್ಧರಾಗಿ ನಮ್ಮೊಂದಿಗೆ ಬೆರೆತರು. ಅವರು ತಮ್ಮ ದೇಶದ ಆಚಾರಗಳನ್ನು ತಮ್ಮೊಡನೆ ತಂದರು. ಇದರ ಪರಿಣಾಮವಾಗಿ ನಮ್ಮ ರಾಷ್ಟ್ರೀಯ ಜೀವನವು ಅತ್ಯಂತ ಭಯಾನಕ, ಪಶು ಸಹಜ ಆಚಾರಗಳ ಕ್ಷೇತ್ರವಾಗಿ ಪರಿಣಮಿಸಿತು. ಆ ಯುವಕನಿಗೆ ಬೌದ್ಧರಿಂದ ಸಿಕ್ಕಿದ ಪೂರ್ವಿಕರ ಆಸ್ತಿಯೇ ಇದು! ಅಂದಿನಿಂದ ಇಂದಿನವರೆಗೆ ಭರತಖಂಡದಲ್ಲಿ ನಡೆದ ಕಾರ್ಯವೆಲ್ಲ ಬೌದ್ಧಧರ್ಮದಿಂದ ಅವನತಿಹೊಂದಿದ ದೇಶವನ್ನು ವೇದಾಂತದ ಮೂಲಕ ಸುಧಾರಿಸುವುದೇ ಆಗಿದೆ. ಇದು ಇನ್ನೂ ಆಗುತ್ತಿದೆ, ಪೂರ್ಣವಾಗಿಲ್ಲ. ಮಹಾ ತತ್ತ ್ವಜ್ಞಾನಿ ಶಂಕರರು ಬಂದು ಬೌದ್ಧ ಧರ್ಮದಲ್ಲಿ ಮತ್ತು ವೇದಾಂತ ಧರ್ಮದಲ್ಲಿ ತಾತ್ವಿಕವಾಗಿ ಅಷ್ಟೇನೂ ವ್ಯತ್ಯಾಸವಿಲ್ಲ ; ಆದರೆ ಬುದ್ಧನ ಶಿಷ್ಯರು ಗುರುವನ್ನು ಸರಿಯಾಗಿ ತಿಳಿದುಕೊಳ್ಳದೇ ಅವನತಿಗೆ ಇಳಿದು, ಆತ್ಮದ ಮತ್ತು ದೇವರ ಅಸ್ತಿತ್ವವನ್ನು ಅಲ್ಲಗಳೆದು ನಾಸ್ತಿಕರಾದರು ಎಂದು ತೋರಿಸಿದರು. ಬೌದ್ಧರೆಲ್ಲ ತಮ್ಮ ಹಳೆಯ ಧರ್ಮಕ್ಕೆ ಹಿಂತಿರುಗಿ ಬಂದರು’.
ಶಂಕರರು ವಿಜ್ಞಾನವೂ ನಾಚುವಂತಹ ಸಾರ್ವತ್ರಿಕ ಅನುಷ್ಠಾನಯೋಗ್ಯ, ಕಲ್ಯಾಣಕರ ವಿಚಾರಗಳನ್ನು ಉಪನಿಷತ್, ಗೀತೆ ಬ್ರಹ್ಮಸೂತ್ರಭಾಷ್ಯ, ಮೊದಲಾದ ಹತ್ತಾರು ಅದ್ಭುತ ಚಿಂತನೆಗಳ ಮೂಲಕ ಜಗತ್ತಿಗೆ ನೀಡಿ ಉಪಕರಿಸಿದ ಪರಿಯು ಮತ್ತೊಬ್ಬ ಶಂಕರರಂತೆಯೇ ಇದ್ದ ವಿವೇಕಾನಂದರಿಗೆ ಮಾತ್ರ ಅರ್ಥವಾಗುವಂಥದ್ದು.
ಈ ಜಗತ್ತಿಗೆ ಕಾರಣವಾದ ಮಾಯೆ, ದೃಕ್-ದೃಶ್ಯ-ವಿವೇಕ, ಲೋಕ-ಲೋಕಗಳು ಚಲಿಸಿ ಕಣ್ಮರೆಯಾಗುತ್ತಿವೆ ಎಂಬ (ಲೋಕತ್ರಯಂ ಪ್ರವ್ಯಥಿತಂ ಪ್ರಚಲಿತಂ) ಚಿಂತನೆ, ಸಾಪೇಕ್ಷತೆಯೇ ಸೃಷ್ಟಿಯ ಮೂಲ ಸ್ರೋತ, ಸೃಷ್ಟಿಯ ವೈಚಿತ್ರ್ಯಗಳು, ಇತ್ಯಾದಿಗಳ ಕುರಿತ ಅವರ ಚಿಂತನೆಗಳು ಹೇಗೆ ಅಧ್ಯಾತ್ಮ, ವಿಜ್ಞಾನ ಕ್ಷೇತ್ರದಲ್ಲಿ ಪ್ರತಿಧ್ವನಿತಗೊಂಡಿವೆ ಎಂದರೆ ಐನ್ಸ್ಟೀನ್ರ ನಂತರ ಅವರ ಸ್ಥಾನವನ್ನು ಅಲಂಕರಿಸಿದ ನೊಬೆಲ್ ಪುರಸ್ಕೃತ ಜಾನ್ ವ್ಹೀಲರ್ ‘ವೇದಾಂತವನ್ನು ಭಾಷಾಂತರಿಸಿದರೆ ಸಾಕು ನಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ಸಿಕ್ಕಂತೆಯೇ’ ಎಂದು ಹೇಳುತ್ತಾರೆ.
ಅಷ್ಟೇ ಅಲ್ಲ, ಮುಂದುವರಿದು ಈ ಕಾಲದ ವಿಜ್ಞಾನ ದಿಗ್ಗಜಗಳಾದ ನೀಲ್ ಬೋರ್, ಓಪನೀಮರ್, ಷ್ರೋಡಿಂಗರ್ ಇವರೆಲ್ಲ ಉಪನಿಷತ್ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡದ್ದನ್ನು ನಮ್ಮ ಗಮನಕ್ಕೆ ತಂದಿದ್ದಾರೆ. (ಜಗತ್ತಿನ ಬಗ್ಗೆ ಏನೂ ಹೇಳಲಾರೆವು ಮತ್ತು ಅದರ ಜ್ಞಾನ ಅದನ್ನು ಅಧ್ಯಯನಿಸುವವನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿದೆ ಎನ್ನುವುದು, ತುರೀಯಾವಸ್ಥೆಯೇ ಸತ್ಯವನ್ನು ಅರಿಯಬಲ್ಲ ಯೋಗ್ಯ ಸ್ಥಿತಿ ಇವೆಲ್ಲವೂ ತಾತ್ವಿಕ ಪ್ರಪಂಚದ ರತ್ನಗಳು).
ಹತ್ತಾರು ಗ್ರಂಥಗಳು, ನೂರಾರು ಸ್ತೋತ್ರಗಳು, ದೇಶದ ನಾಲ್ಕು ಮೂಲೆಯಲ್ಲಿ ನಾಲ್ಕು ಆಮ್ನಾಯ ಮಠ, ವೇದಗಳ ಪುನರುತ್ಥಾನ, ದಶನಾಮೀ ಸಂನ್ಯಾಸ ಪದ್ಧತಿ, ಸಂನ್ಯಾಸಿ ಆಖಾಡಗಳ ರಚನೆ, ಭಾರತದ ಭಾವೈಕ್ಯತೆಗೆ ಸುಭದ್ರ ಅಡಿಪಾಯ ಇವುಗಳ ಜೊತೆಗೇ ಧೀರತನದ, ಏಕತ್ವವನ್ನೇ ಬುನಾದಿಯಾಗುಳ್ಳ, ತನ್ನನ್ನು ಪಾಪಿ ಎಂದು ಭಾವಿಸದೆ, ‘ನಾನೇ ಎಲ್ಲವೂ’ ಎನ್ನುವ ಮಹಾಸತ್ಯಗಳನ್ನು ನಾಡಿನಾದ್ಯಂತ ಪ್ರಚಾರಗೈದಿದ್ದು ಇವೇ ಮೊದಲಾದ್ದು ಶಂಕರರ ಸಾಧನೆಗಳ ಕಿರುನೋಟ ಮಾತ್ರ. ವಿವೇಕಾಂದರ ಈ ಮಾತನ್ನು ಗಮನಿಸಿ, "India does not need so much of religion as a little of Advaita to be brought into practice' ಅರ್ಥಾತ್ ‘ಒಂದಿಷ್ಟು ಅದ್ವೆ ೖತದ ಅನುಷ್ಠಾನದ ಹೊರತು ಭಾರತಕ್ಕೆ ಮತ್ತಾವ ಧರ್ಮದ ಅವಶ್ಯಕತೆಯೂ ಇಲ್ಲ’. ಈ ಅದ್ವೆ ೖತ ತತ್ವದ ವ್ಯವಸ್ಥಿತ ನಿರ್ಮಾಣ ಮತ್ತು ಪ್ರಚಾರವೇ ಶಂಕರರ ಪ್ರಧಾನ ಸಾಧನೆ. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯ ಪೀಠಿಕೆಯಲ್ಲಿ ನಿವೇದಿತೆ ಇದನ್ನು ಚೆನ್ನಾಗಿ ವಿವರಿಸುತ್ತಾಳೆ. ಇದರ ಸಾರಾಂಶ, ಇದೊಂದು ವೈಜ್ಞಾನಿಕ, ತತ್ತಾ ್ವಾರ, ವಿಶ್ವಧರ್ಮ. ಇವೆಲ್ಲವನ್ನೂ ಅವರು ಸಾಧಿಸಿದ್ದು 32 ವರ್ಷಗಳ ಒಳಗೆ. ನಾನೀ ಪಾಲ್ಖೀವಾಲರ ಈ ಹೇಳಿಕೆ ಎಷ್ಟು ಸತ್ಯ- ‘ಮಾನವ ಚರಿತ್ರೆಯಲ್ಲಿ ಐದು ಮಹೋನ್ನತ ಸಾಧಕರ ಪಟ್ಟಿ ಮಾಡಿದರೆ ಅದರಲ್ಲಿ ಶಂಕರರೂ ಒಬ್ಬರಾಗಿರುತ್ತಾರೆ’.
ವೇದಗಳಿಂದ ಪ್ರಾರಂಭಗೊಂಡು ಋಷಿ ಪರಂಪರೆ, ಭಗವಾನ್ ಶ್ರೀಕೃಷ್ಣ, ಭಗವಾನ್ ಬುದ್ಧ, ಶ್ರೀಶಂಕರ, ಇನ್ನಿತರ ಆಚಾರ್ಯರು, ಅನುಭಾವಿಗಳು, ಸಂತರು, ಶರಣರು ಇವರೆಲ್ಲರ ಮೂಲಕ ಹರಿದು ಬಂದ ತತ್ವ ಗಂಗೆ ಸಾಗರೋಪಾದಿಯಲ್ಲಿ ವಿಸ್ತರಿಸಿ ವಿಶ್ವಧರ್ಮವಾಗಿ ಪರಿವರ್ತಿತಗೊಳ್ಳುತ್ತಿರುವುದು ಭಗವಾನ್ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಉಪದೇಶ ಮಾಲೆಗಳಲ್ಲಿ. (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)