ಅತೀತಲೋಕದ ಮಹಾವಿಜ್ಞಾನಿ ಶ್ರೀ ರಾಮಕೃಷ್ಣರು

Ramakrishna Paramahamsa
Published on
ಹೊಂಬೆಳಕು
ಈ ಸೃಷ್ಟಿ ಏಕಾಗಿ ಬಂದಿದೆ? ಅದರ ಉದ್ದೇಶವೇನು? ಅದರ ಭಾಗವೇ ಆಗಿರುವಂಥ ಮನುಷ್ಯನ ಅಸ್ತಿತ್ವಕ್ಕೆ ಕಾರಣಗಳೇನು? ಈ ಮನುಷ್ಯನಿಗೆ ಕೆಲವೊಮ್ಮೆ ದುಃಖಗಳು, ಕೆಲವೊಮ್ಮೆ ಸುಖಗಳು ಏಕೆ ಉಂಟಾಗುತ್ತವೆ? ಈ ಪ್ರಪಂಚದಲ್ಲಿ ನಡೆಯುವ ಹಲವಾರು ವಿಚಿತ್ರ ಘಟನೆಗಳಿಗೆ ಕಾರಣಗಳೇನು? ಯಾವ ಕಾರಣಗಳಿಂದ ಯಾವ್ಯಾವ ಘಟನೆಗಳಾಗುತ್ತವೆ? ಈ ಪ್ರಶ್ನೆಗಳು ನಿಜಕ್ಕೂ ಅಂದಿನಿಂದ ಇಂದಿ ನವರೆಗೆ ಮನುಷ್ಯನ ಆಸಕ್ತಿಯನ್ನು ಕೆರಳಿಸಿವೆ; ಆಲೋಚನಾಪರನನ್ನಾಗಿ ಮಾಡಿವೆ. ಇದಕ್ಕೆಲ್ಲಾ ಉತ್ತರಗಳನ್ನು ಕಂಡುಕೊಳ್ಳಬೇಕಾದ್ದು ಮನುಷ್ಯನ ಉದ್ಧಾರಕ್ಕೆ, ಉನ್ನತಿಗೆ ಅನಿವಾರ್ಯ ಕೂಡ. ಏಕೆಂದರೆ ಜೀವನಕ್ಕೊಂದು ಅರ್ಥ ಬರಬೇಕಾದರೆ ಸಾಧನೆ ಸಮೃದ್ಧಿಗಳನ್ನು ಒಳಗೊಳ್ಳಬೇಕೆಂದರೆ ಈ ವಿಷಯಗಳಲ್ಲಿ ಸ್ಪಷ್ಟ ಜ್ಞಾನ ಬೇಕೇ ಬೇಕು.

ಚಿಂತಕನಾದ ಮನುಷ್ಯ ಈ ದಿಕ್ಕಿನಲ್ಲಿ ಪಯಣಿಸಿದಾಗ ಅವನಿಗೆ ನೂರೆಂಟು ಬೆಳಕುಗಳು ಗೋಚರಿಸಿದವು. ಅವೇ ಚಿಂತನ ಜಗತ್ತಿನ ಸಾರ. ವಿಜ್ಞಾನಗಳು, ರಾಜ್ಯಶಾಸ್ತ್ರಗಳು, ನ್ಯಾಯಶಾಸ್ತ್ರಗಳು, ತಂತ್ರಜ್ಞಾನಗಳು, ಅರ್ಥಶಾಸ್ತ್ರಗಳು ಇವೆಲ್ಲ ತಮ್ಮ ಮೂಲದಲ್ಲಿ ಮೇಲೆ ಹೇಳಿದ ಪ್ರಶ್ನೆಗಳಿಗೆ ಉತ್ತರಗಳೇ! ಕ್ರಮೇಣ ದಿನಗಳೆದಂತೆ ಮನುಷ್ಯನಿಗೆ ಗೋಚರಿಸಿದ್ದು ಕೇವಲ ಈ ಉತ್ತರಗಳು. ಈ ಉತ್ತರ ರೂಪದ ಆವಿಷ್ಕಾರಗಳೇ ಸಾಕಾಗವು. ಇನ್ನೂ ಏನೋ ಬಹಳ ಗಹನವಾದ, ಬೃಹತ್ತಾದ, ಮಹತ್ತಾದ ವಿಷಯದ ಬಗ್ಗೆ ತಾನು ಪಡೆಯಬೇಕಾದ ಜ್ಞಾನದ ಕೊರತೆ ಇದೆ ಎಂದು. ಆಗ ಅವನ ಗಮನಹರಿದಿದ್ದು ತನ್ನ ಆಂತರ್ಯದ ಕಡೆಗೆ. ತನ್ನೊಳಗೆಯೇ ಯಾವುದೋ ಒಂದು ತನ್ನನ್ನು ಕಾಡುತ್ತಿದೆ, ತನಗೆ ಸಂಕಟವನ್ನೀಯುತ್ತಿದೆ ಎಂದು. ಈ ಪ್ರಕ್ರಿಯೆಯಲ್ಲಿ ಅವನು ಗಮನ ಕೊಟ್ಟು ಅಧ್ಯಯನಿಸಿದ್ದು ತನ್ನ ಮನಸ್ಸನ್ನು, ಆಸೆ-ಆಕಾಂಕ್ಷೆಗಳನ್ನು, ಆದ್ಯತೆಗಳನ್ನು ಮತ್ತು ಹೀಗೆಯೇ ತನ್ನ ಮೇಲೆ ಪ್ರಭಾವ ಬೀರುತ್ತಿರುವ ಹತ್ತಾರು, ನೂರಾರು ಅಂತಃಸಾಮಗ್ರಿಗಳನ್ನು! ಈ ಪ್ರಯಾಣದ ಕೊನೆಯ ಹಂತವನ್ನು ತಲುಪಿದ್ದು - ತಾನು ಯಾರು ಎಂದು ತಿಳಿಯಲು ಪ್ರಯತ್ನಿಸಿದಾಗ ಮತ್ತು ನೂರಾರು, ಸಹಸ್ರಾರು ವರ್ಷಗಳ ನಂತರ ಸಹಸ್ರಾರು ವ್ಯಕ್ತಿಗಳ ಸಮಗ್ರ, ಅಮೂಲ್ಯ ಆತ್ಯಂತಿಕ ಪ್ರಯತ್ನಗಳ ಫಲವಾಗಿ ನಿಖರವಾದ ಉತ್ತರವನ್ನು ಕಂಡುಕೊಂಡಾಗ. ಈ ಮೇಲಿನ ಎಲ್ಲ ಘಟನೆಗಳೂ ಇಡೀ ಮಾನವನ ಇತಿಹಾಸದಲ್ಲಿ ಅತ್ಯಂತ ಮೊದಲು, ಅತ್ಯಂತ ರೋಚಕವಾಗಿ, ಅತ್ಯಂತ ಫಲಪ್ರದವಾಗಿ ನಡೆದಿದ್ದು ಜಗತ್ತೇ ಬೆರಗಾಗುವಂತೆ ಉತ್ತರಗಳನ್ನು ಕಂಡುಕೊಂಡಿದ್ದು, ಈ ಉತ್ತರಗಳಿಂದ ತಾವು ಮಾತ್ರ ಪ್ರಯೋಜನವನ್ನು ಪಡೆಯದೇ ಇಡೀ ವಿಶ್ವದಾದ್ಯಂತ ಅದನ್ನು ಹರಡಿ ಜಗತ್ತಿಗೆ ಇನ್ನಿಲ್ಲದಂತೆ ಬೆಳಕು ಕೊಟ್ಟು ಉಪಕಾರಗೈದ ಜನಾಂಗ ನಮ್ಮ ಹೆಮ್ಮೆಯ ಭಾರತ ವರ್ಷ. ಈ ಪ್ರಶ್ನೆಗಳ, ಉತ್ತರಗಳ ಮೂಲರೂಪವೇ ವೇದಗಳು. ಆ ಉತ್ತರಗಳಿಗೆ ಹೊಂದುವ ಜೀವನ ರಚನೆಯೇ ಧರ್ಮ. ಹೀಗಾಗಿ ಧರ್ಮ ತನ್ನ ಸಮಗ್ರವಾದ, ಸರ್ವತೋಮುಖವಾದ ಉದ್ಧಾರವನ್ನು ಬಯಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನವನ್ನು ಮಾಡುತ್ತಿರುವ ಯಾವುದೇ ವ್ಯಕ್ತಿಗಾಗಲಿ ಅನಿವಾರ್ಯ. ಇದನ್ನು ಜಗತ್ತಿಗೆ ಘೊಷಿಸಿದ್ದು ಭಾರತ - ಈ ವಾಕ್ಯದ ಮೂಲಕ. ಧಾರಣಾತ್ ಧರ್ಮ ಇತ್ಯಾಹುಃ ಧರ್ವೇ ರಕ್ಷತಿ ರಕ್ಷಿತಃ| ಅರ್ಥಾತ್ ಧರ್ಮ ನಮ್ಮನ್ನೆತ್ತಿ ಹಿಡಿಯುತ್ತದೆ. ನಮ್ಮನ್ನು ಉದ್ಧರಿಸುತ್ತದೆ. ಧರ್ಮವನ್ನು ಪಾಲಿಸಿದವನನ್ನು ಅದು ಪಾಲಿಸುತ್ತದೆ ಎಂದು.

ನಾನು ಮತ್ತು ನನ್ನದು ಎಂಬ ಎರಡು ಅತ್ಯಂತ ಪ್ರಭಾವಶಾಲಿ ಸರ್ವನಾಮಗಳು ಮತ್ತು ವ್ಯಾಖ್ಯೆಗಳು ನಡೆಸುವ ಮಹಾ ಸಂಚಿನ ಫಲವಾಗಿ ಕೇವಲ ದ್ರವ್ಯ ಪ್ರಪಂಚ ಅಥವಾ ವಸ್ತು ಪ್ರಪಂಚ ಪ್ರಪಾತಗಳನ್ನು ಮುಟ್ಟಿದೆ. ಅಷ್ಟೇ ಅಲ್ಲ, ಅವು ತತ್ವ ಪ್ರಪಂಚದಲ್ಲೂ ಇನ್ನಿಲ್ಲದ ಬಿರುಗಾಳಿ, ವಿಧ್ವಂಸಕತೆ ಮತ್ತು ವಿನಾಶಗಳಿಗೆ ಕಾರಣವಾಗಿವೆ. ಆ ಪ್ರಕ್ರಿಯೆಯಲ್ಲಿ ಈ ಧರ್ಮ ಎನ್ನುವ ವ್ಯಾಖ್ಯೆ (ಕಾನ್ಸೆಪ್ಟ್) ಕೂಡ ಸಾಕಷ್ಟು ನಲುಗಿ ‘ಅದೇ ಧರ್ಮವೇಕೆ? ಇದ್ಯಾಕೆ ಧರ್ಮವಲ್ಲ?’ ಎಂಬ ಧೋರಣೆ ಸೈರಣೆಯಿಲ್ಲದ, ತಪಸ್ಸಿಲ್ಲದ, ವಿಜ್ಞಾನವಿಲ್ಲದ ಮನಸ್ಸುಗಳನ್ನು ಹೊಕ್ಕಿ ಕೇವಲ ತಾನು ತನ್ನದು ಎಂಬ ಹೆಂಡದ ಅಮಲಿಗೆ ತುತ್ತಾಗಿ ಧರ್ಮ ಅಥವಾ ಶುದ್ಧಧರ್ಮಕ್ಕೆ ಹಲವು ಕೊಳಕುಗಳು ಸೇರಿಕೊಂಡು ಜನಸಾಮಾನ್ಯರನ್ನು ಗೊಂದಲಕ್ಕೆ ತಳ್ಳಿ ಎಷ್ಟೋ ಸಲ ದೋಷಪೂರ್ಣ ಚೌಕಟ್ಟು ಶುದ್ಧ ಚೌಕಟ್ಟನ್ನೇ ನಿರ್ವೀರ್ಯವನ್ನಾಗಿಸುವ ಸ್ಥಿತಿಯನ್ನು ತಲುಪಿವೆ. ಇದನ್ನೇ ಕೃಷ್ಣ ಗೀತೆಯಲ್ಲಿ ಧರ್ಮಗ್ಲಾನಿ ಎಂದು ಕರೆಯುತ್ತಾನೆ. ಈ ಸಂದರ್ಭದಲ್ಲಿ ಶುದ್ಧೀಕರಣ ಕಾರ್ಯ ಸಾಮಾನ್ಯರಿಗೆ ಸಾಧ್ಯವಿಲ್ಲದ ಮಾತು. ಏಕೆಂದರೆ ಮನುಷ್ಯನ ಮೇಲೆ ಪ್ರಭಾವ ಬೀರುವ ಅತ್ಯಂತ ಪ್ರಬಲ ವಿಷಯಗಳಲ್ಲಿ ಅಗ್ರಸ್ಥಾನ ಧರ್ಮಕ್ಕೆ. ದೇಶ, ಭಾಷೆ, ಗಡಿ ಇದೆಲ್ಲವನ್ನೂ ಪಕ್ಕಕ್ಕಿಟ್ಟು ಮನುಷ್ಯನನ್ನು ಕಾರ್ಯತತ್ಪರನನ್ನಾಗಿಸುವ, ಪ್ರಾಣವನ್ನೇ ಪಣಕ್ಕಿಡಲು ಸಿದ್ಧನನ್ನಾಗಿಸುವ ಅಮಲು ಧರ್ಮಕ್ಕಿದೆ. ಆದ್ದರಿಂದಲೇ ಕೆಲವು ಪಾಶ್ಚಾತ್ಯ ನಾಸ್ತಿಕ ಚಿಂತಕರು ಧರ್ಮವನ್ನು ಮಾದಕ ವಸ್ತು ಓಪಿಯಂಗೆ ಹೋಲಿಸಿದ್ದಾರೆ.

19ನೇ ಶತಮಾನದ ಆದಿಭಾಗದಲ್ಲಿ ಭಾರತ ಈ ದುಃಸ್ಥಿತಿಗೆ ಒಳಗಾಗಿತ್ತು. ಬ್ರಿಟಿಷರಾಗಲಿ, ಯಾವುದೇ ಕ್ರಿಶ್ಚಿಯನ್ ರಾಷ್ಟ್ರವಾಗಲಿ ಆಕ್ರಮಣಕಾರಿಗಳಾಗಿ ಹೊರ ಹೊರಟರೆ ಅಲ್ಲಿ ಎರಡು ಗುರಿಗಳು ಸ್ಪಷ್ಟ. ರಾಜ್ಯ ವಿಸ್ತರಣೆ ಮತ್ತು ಧರ್ಮ ವಿಸ್ತರಣೆ. ಅರ್ಥಾತ್ ಆಕ್ರಮಿತ ದೇಶವನ್ನು ಧ್ವಂಸ ಮಾಡುವುದಷ್ಟೇ ಅಲ್ಲ, ಅವರ ಧರ್ಮವನ್ನೂ ಕೊಂದು ಹಾಕಿಬಿಡುವುದು. ಅದು ಕೊಲಂಬಸ್ ಇರಲಿ, ವಾಸ್ಕೋಡಗಾಮ ಇರಲಿ, ರಾಬರ್ಟ್ ಕ್ಲೈವ್ ಇರಲಿ, ಘೊರಿ ಮೊಹಮ್ಮದ್ ಇರಲಿ, ಬಾಬರ್ ಇರಲಿ ಇದು ಹೀಗೆಯೇ. ಪ್ರಕೃತಿ ವೈವಿಧ್ಯವನ್ನು ಸೃಷ್ಟಿಸುವುದು ಉಲ್ಲಾಸ, ಉತ್ಕರ್ಷಗಳಿಗಾಗಿ. ಬೇರೆ ಬೇರೆ ಧಾನ್ಯಗಳು, ಹಣ್ಣು, ತರಕಾರಿ, ಹೂವು, ಪ್ರಾಣಿ, ಪಕ್ಷಿ ಎಲ್ಲದರಲ್ಲೂ ಈ ವೈವಿಧ್ಯ ಹಿತಕರ, ಉಲ್ಲಾಸಕಾರಕ. ಏಕತಾನತೆ ಆತ್ಮಹತ್ಯೆ! ಹಾಗೆಯೇ ಅಧ್ಯಯನ ವಸ್ತುಗಳು ಕೂಡ. ಒಂದೊಂದು ವಿಷಯವೂ ತನ್ನದೇ ಸೌಂದರ್ಯವನ್ನು ಹೊಂದಿದೆ. ಸಂಗೀತ, ಸಾಹಿತ್ಯ, ಕಲೆ, ಶಿಲ್ಪಕಲೆ, ಭೌತಶಾಸ್ತ್ರ, ಖಗೋಳಶಾಸ್ತ್ರ, ವೈದ್ಯಕೀಯ ಇತ್ಯಾದಿ.

ಇದನ್ನೆಲ್ಲಾ ಒಪ್ಪಿಕೊಳ್ಳುವ ಮನಸ್ಸು ಧರ್ಮದ ವಿಷಯ ಬಂದರೆ ಮಾತ್ರ ಕೇವಲ ಒಂದೇ ಇರಬೇಕು ಎನ್ನುವ ಹಪಾಹಪಿ ಯಾಕೆ? ಅನಾರ್ಯನ ಈ ಹಪಾಹಪಿ ಹತ್ತಿಕ್ಕಲು ಸಾಧ್ಯವೇ ಇಲ್ಲವೇನೋ ಎನಿಸುತ್ತದೆ ಇತಿಹಾಸವನ್ನು ಒಳಹೊಕ್ಕಿ ನೋಡಿದಾಗ. ನಮ್ಮ ಹೆಮ್ಮೆಯ ಭಾರತ, ನಮ್ಮ ತಾಯ್ನಾಡು, ನಮ್ಮ ತಾಯ್ಮಡಿಲು, ನಮ್ಮೆಲ್ಲರ ಪೊರೆವ ತೊಟ್ಟಿಲು ಈ ಸಮಸ್ಯೆಗೆ ಉತ್ತರವನ್ನು ಕಂಡುಕೊಂಡಿದ್ದು ‘ವಸುಧೈವ ಕುಟುಂಬಕಂ’ ಎಂಬ ಮಂತ್ರವನ್ನು ದೇಶವ್ಯಾಪ್ತಿಗೆ ಸಂಬಂಧಿಸಿದಂತೆ ಮತ್ತು ‘ಏಕಮ್ ಸತ್ ವಿಪ್ರಾಃ ಬಹುಧಾ ವದಂತಿ’ ಎನ್ನುವುದನ್ನು ಧರ್ಮದ ವ್ಯಾಪ್ತಿಗೆ ಸಂಬಂಧಿಸಿದಂತೆ ಕಂಡುಹಿಡಿಯುವುದರ ಮೂಲಕ. ಈ ಕಾರಣದಿಂದ ಭಾರತ ವಿಶ್ವಗುರುವಾಗುವ ಯೋಗ್ಯತೆಯನ್ನು ಹೊಂದಿದ ಏಕಮೇವ ರಾಷ್ಟ್ರವಾಗಿದೆ. ಇದು ವೈಯಕ್ತಿಕ ನೆಲೆಯಲ್ಲಾಗಲಿ, ಸಾರ್ವತ್ರಿಕ ನೆಲೆಯಲ್ಲಾಗಲಿ ಉದ್ಧಾರದ ಪೂರ್ಣ ಚಿತ್ರದ ಪರಿಚಯವೇ ಇಲ್ಲದ ಪಶ್ಚಿಮದಿಂದ ಬಂದ ಆಕ್ರಮಣಕಾರರಿಗೆ ಅದ್ಹೇಗೆ ಅರ್ಥವಾದೀತು?! ಅದ್ವೈತ ತಾತ್ವಿಕ ನೆಲೆಯಲ್ಲಾಗಲಿ ಅನುಷ್ಠಾನದ ನೆಲೆಯಲ್ಲಾಗಲಿ ಭಾರತಕ್ಕೆ ಹೆಗ್ಗಳಿಕೆಯನ್ನು ತಂದುಕೊಟ್ಟಿರುವುದು, ತತ್ವ ಪ್ರಪಂಚದಲ್ಲಿ ನಾಸ್ತಿಕರಿಂದಲೂ ಗೌರವಕ್ಕೊಳಗಾಗಿ ಸರ್ವಮಾನ್ಯವಾಗಿರುವುದು ಈ ಕಾರಣದಿಂದಾಗಿ. ಈ ದೃಷ್ಟಿಗೆ ಸಂಚಕಾರ ಬೃಹತ್ ಪ್ರಮಾಣದಲ್ಲಿ, ಹಲವು ರೀತಿಯಲ್ಲಿ ಬಂದಿದ್ದು ಎರಡನೇ ಸಹಸ್ರಮಾನದ ಉದ್ದಕ್ಕೂ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಷ್ಟ್ರಗಳ ಸಾಮ್ರಾಜ್ಯ ವಿಸ್ತರಣೆ ಮತ್ತು ಧರ್ವಂಧತೆ ಎಂಬ ಪಾಶವಿ ಶಕ್ತಿಗಳ ಅಟ್ಟಹಾಸದಿಂದಾಗಿ. ಇದನ್ನು ತಾತ್ವಿಕ ನೆಲೆಯಲ್ಲಿ ವಿವೇಕಾನಂದರು ಧ್ವಂಸಗೊಳಿಸಿದ್ದು ‘ಅಮೆರಿಕಾದ ಸೋದರ ಸೋದರಿಯರೇ’ ಎಂಬ ವಸುಧೈವ ಕುಟುಂಬಕಂ ಮಂತ್ರವನ್ನು ದ್ವಿಗುಣಗೊಂಡ ಗಾಂಭೀರ್ಯ ಮತ್ತು ಅಧಿಕಾರವಾಣಿಯ ಮೂಲಕ ಪುನರುಚ್ಚರಿಸಿ ಮತ್ತು ಇಂಗ್ಲೆಂಡಿನ ವಿಸ್ತರಣಾ ಹಪಾಹಪಿ ಧ್ವಂಸಗೊಂಡಿದ್ದು ಈ ಚಿಕಾಗೋ ಪಾರ್ಲಿಮೆಂಟ್ ಸಂಭವಿಸಿದ 50 ವರ್ಷಗಳೊಳಗೇ ಸ್ಪೋಟಗೊಂಡ ಎರಡನೇ ಮಹಾಯುದ್ಧದ ಮೂಲಕ. ಈ ಬೃಹತ್ ಕಾರ್ಯಕ್ರಮದ ಅಧ್ವರ್ಯು ಭಗವಾನ್ ಶ್ರೀ ರಾಮಕೃಷ್ಣರು ಮತ್ತು ಅವರು ಈ ಕಾರ್ಯವನ್ನು ನಡೆಸಿದ ರೀತಿ ಒಂದು ಸವಿಸ್ತಾರ ಮತ್ತು ಬೃಹತ್ ಅಧ್ಯಯನಕ್ಕೆ ಶ್ರೇಷ್ಠ ವಸ್ತುವಾಗಬಲ್ಲದು.

ಶ್ರೀ ರಾಮಕೃಷ್ಣರ ವ್ಯಕ್ತಿತ್ವವನ್ನು ಅವರ ಶಿಷ್ಯ ಕೋಟಿ ವರ್ಣಿಸಿದ್ದು ಏಛಿ ಜಿಠ ಠಿಜಛಿ ್ಚ್ಞ್ಠಞಚಠಿಜಿಟ್ಞ ಟ್ಛ ಠಿಡಿಟ ಠಿಜಟ್ಠಠಚ್ಞಛ ಢಛಿಚ್ಟಠ ಟ್ಛ ಠಟಜ್ಟಿಜಿಠ್ಠಿಚ್ಝ ಟ್ಟಚ್ಚಠಿಜ್ಚಿಛಿಠ ಟ್ಛ ಠಿಜ್ಟಛಿಛಿ ಜ್ಠ್ಞ್ಟಛ ಞಜ್ಝಿ್ಝಟ್ಞ ಟಛಿಟಟ್ಝಛಿ ಅರ್ಥಾತ್ ಮುನ್ನೂರು ಮಿಲಿಯನ್ ಭಾರತೀಯರ ಎರಡು ಸಾವಿರ ವರ್ಷಗಳ ಆಧ್ಯಾತ್ಮಿಕ ಸಾಧನೆಗಳ ಫಲವೇ ಶ್ರೀ ರಾಮಕೃಷ್ಣರ ಆವಿರ್ಭಾವ ಎಂದು. ಉಪನಿಷತ್ತುಗಳ ಧ್ಯೇಯ ವಸ್ತುವಾದ, ಪ್ರಚಲಿತ ಎಲ್ಲಾ ಜಾಗತಿಕ ಧರ್ಮಗಳ ಧ್ಯೇಯ ವಸ್ತುವೂ ಆದ ನಿರ್ಗಣ ನಿರಾಕಾರ ಬ್ರಹ್ಮನೇ ಮೂರ್ತಿವೆತ್ತು ಶ್ರೀ ರಾಮಕೃಷ್ಣರಾದದ್ದು. ಆದ್ದರಿಂದಲೇ ಕೇವಲ ಹಿಂದೂ ಧರ್ಮವಷ್ಟೇ ಅಲ್ಲದೇ ಎಲ್ಲ ಧರ್ಮಗಳ ಧ್ಯೇಯವನ್ನೂ ಸಾಕ್ಷಾತ್ಕರಿಸಿಕೊಂಡರು. ಅದು ಅವರಿಗೆ ಒಂದು ಪ್ರಕೃತಿ ಸಹಜ ಕ್ರಿಯೆ. ಅಲ್ಪ ವಸ್ತುವಿಗಾಗಿ ಅಮೂಲ್ಯ ಮಾನವ ಜನ್ಮವನ್ನು ಹಾಳು ಮಾಡುವುದೇಕೆ? ಅಲ್ಪವನ್ನು ದಾಟಿ ಹೋಗದೆ ಬೃಹತ್ ಸಿಗುವುದೇ? ಇದೇ ಉಪನಿಷತ್ ಪಲ್ಲವಿ. ಬೃಹತ್ತನ್ನು ಗುರಿಯಾಗಿಟ್ಟುಕೊಂಡಾಗ ಸಿಕ್ಕಿದ್ದು ಅಲ್ಪವೇ ಆದರೂ ಅದು ಅಲ್ಪವನ್ನೇ ಗುರಿಯಾಗಿಟ್ಟುಕೊಂಡು ಅದನ್ನು ಪೂರ್ಣವಾಗಿ ಪಡೆದುಕೊಂಡದ್ದಕ್ಕಿಂತ ಹೆಚ್ಚು ಸುಖದಾಯಕ, ಶಾಂತಿದಾಯಕ ಮತ್ತು ಸಾರ್ಥಕ. ಇಲ್ಲಿ ರಾಮಕೃಷ್ಣರು ತಿದ್ದಿದ್ದು ಗುರಿ ಯಾವುದಿರಬೇಕು ಎನ್ನುವಲ್ಲಿ. ಹೆಂಡತಿ, ಮಕ್ಕಳು, ಕೀರ್ತಿ, ಹೆಸರು ಇವುಗಳಿಗಾಗಿ ಕಣ್ಣೀರು ಹಾಕುವ ಮನುಷ್ಯ ಈ ಎಲ್ಲವೂ ಏನನ್ನು ಕೊಡುವುದೋ ಅದರ ಸಹಸ್ರದಷ್ಟು ಕೊಡುವ ವಿಷಯಕ್ಕಾಗಿ ಏಕೆ ಕಣ್ಣೀರು ಹಾಕುತ್ತಿಲ್ಲ ಮತ್ತು ಮನುಷ್ಯನ ಶಾರೀರಕ, ಮಾನಸಿಕ, ಬೌದ್ಧಿಕ ರಚನೆಗಳು ಈ ಪೂರ್ಣವನ್ನು ಪಡೆದುಕೊಳ್ಳುವುದಕ್ಕೆ ಅವಶ್ಯವಾದ ಎಲ್ಲಾ ಸಾಮರ್ಥ್ಯಗಳೂ ಎಟುಕುವಂತೆಯೇ ನಿರ್ವಣವಾಗಿದೆ. ಅವುಗಳಲ್ಲಿ ಸ್ವಲ್ಪವನ್ನೇ ಉಪಯೋಗಿಸಿಕೊಂಡು ಅದರ ಪ್ರಧಾನ ಅಂಶವನ್ನು ವ್ಯರ್ಥ ಮಾಡುವುದರಲ್ಲಿ ಯಾವ ಪುರುಷಾರ್ಥವಿದೆ? ಇದೇ ಶ್ರೀ ರಾಮಕೃಷ್ಣರ ಉಪದೇಶದ ಸಾರ. ಈ ತತ್ವವನ್ನು ಯಾವ ವ್ಯಕ್ತಿ ಯಾವ ಕ್ಷೇತ್ರಕ್ಕಾದರೂ ಅನ್ವಯಿಸಬಹುದಷ್ಟು ಸಾರ್ವತ್ರಿಕತೆ(್ಞಡಛ್ಟಿಠಚ್ಝಜಿಠಿಢ)ಯನ್ನು ಮತ್ತು ಅನ್ವಯಶೀಲತೆ(ಚಛಚಟಠಿಚಚಿಜ್ಝಿಜಿಠಿಢ)ಯನ್ನು ಹೊಂದಿದೆ. ಎತ್ತರಕ್ಕೇರಲು ಹಂಬಲಿಸು. ದೊಡ್ಡ ಸಾಧನೆಯೆಡೆಗೆ ಗುರಿಯಿಡು. ಪಡೆದುಕೊಳ್ಳಬೇಕಾದ್ದನ್ನೆಲ್ಲಾ ಪಡೆಯಬಲ್ಲದ್ದನ್ನೆಲ್ಲಾ ಪಡೆದುಕೋ. ಇದಕ್ಕೆ ಬೇಕಾದ್ದೇ ಬುದ್ಧಿ ಮತ್ತು ಭಾವನೆಗಳಿಗೆ ತರಬೇತಿ. ಈ ಜಗತ್ತಿನಲ್ಲಿ ಈ ಎರಡನ್ನೂ ಮೀರಿಸಿದ ಶಕ್ತಿಗಳೇ ಇಲ್ಲ. ಇವೆರಡನ್ನೂ ಅದರ ಪರಾಕಾಷ್ಠೆಗೆ ಏರಿಸು. ಈ ಅಸ್ತ್ರಗಳು ನಿನ್ನ ಬತ್ತಳಿಕೆಯಲ್ಲಿದ್ದರೆ ನಿನಗೆಟುಕದ ಸಿದ್ಧಿಯೇ ಇಲ್ಲ. ಅದೇ ಸಾಧನೆ. ಈ ಸಾಧನೆ ಇದ್ದಲ್ಲಿ ಎಲ್ಲವೂ ಸಾಧ್ಯ. ಬುದ್ಧಿಯ ಪರಾಕಾಷ್ಠೆಯನ್ನು ಸನಾತನ ಧರ್ಮ ಬ್ರಹ್ಮಜ್ಞಾನ ಎಂದು ಕರೆದರೆ ಹೃದಯ, ಭಾವನೆಗಳ ಪರಾಕಾಷ್ಠೆಯನ್ನು ಪರಾಭಕ್ತಿ ಎಂದು ಕರೆಯುತ್ತದೆ. ಬ್ರಹ್ಮಜ್ಞಾನವನ್ನೋ ಪರಾಭಕ್ತಿಯನ್ನೋ ಮೊದಲು ಪಡೆದುಕೋ. ಆಮೇಲೆ ಸಂಸಾರದಲ್ಲಿಯಾದರೂ ಇರು, ಸಂನ್ಯಾಸಿಯಾದರೂ ಆಗು ಎನ್ನುವ ಶ್ರೀ ರಾಮಕೃಷ್ಣರ ಈ ಉಪದೇಶದಲ್ಲಿ ನಮಗೆ ಒಂದು ್ಚಞಟ್ಠ್ಝಜಿಟ್ಞನ್ನೂ ಇದೆ, ಸ್ವಾತಂತ್ರ್ಯವೂ ಇದೆ. ಹಾಗೆಯೇ ವಿಚಾರಿಸಿ ನೋಡಿ. ವಿಜ್ಞಾನಗಳು, ರಹಸ್ಯಭೇದಕ ಸಂಶೋಧನೆಗಳು ಬ್ರಹ್ಮಜ್ಞಾನದ ಅಸ್ಪಷ್ಟ ಪ್ರತಿಧ್ವನಿಗಳಾದರೆ ಲಲಿತಕಲೆಗಳು, ಸಾಹಿತ್ಯ, ಸಂಗೀತ, ಶಿಲ್ಪಕಲೆ, ಮನೋಲ್ಲಾಸ, ಆಹ್ಲಾದಕತೆ, ಭಾವೋತ್ಕರ್ಷತೆ, ಪರಿಶುದ್ಧ ಪ್ರೇಮ, ನಿಸ್ವಾರ್ಥ ಸಂಬಂಧ, ಮಮತೆ, ವಾತ್ಸಲ್ಯಗಳ ಹರಿವು ಇವೆಲ್ಲಾ ಪರಾಭಕ್ತಿಯ ಪ್ರಾರಂಭಿಕ ಅಭಿವ್ಯಕ್ತತೆ. ಈ ಜ್ಞಾನ ಮತ್ತು ಭಕ್ತಿಗಳ ಪರಾಕಾಷ್ಠತೆ ಜೀವನವನ್ನು ಉಜ್ಜೀವನವನ್ನಾಗಿಸಬಲ್ಲವು. ಬಾಳನ್ನು ನಿತ್ಯೋತ್ಸವವನ್ನಾಗಿಸಬಲ್ಲವು. ಶ್ರೀ ರಾಮಕೃಷ್ಣರ ಇಡೀ ಜೀವನದಲ್ಲಿ ಪ್ರತಿನಿತ್ಯವೆಂಬಂತೆ ನಾವಿದನ್ನು ಕಾಣಬಹುದಿತ್ತು. ಸಮನ್ವಯ ಮಿಶ್ರಣಕ್ಕಿಂತ ಶ್ರೇಷ್ಠ ಜೀವನ ಯಾವುದಿದೆ; ಇದೇ ಪರಿಪೂರ್ಣ ಸಂಸ್ಕೃತಿ; ಉಚ್ಛೇದನ.

ಈ ಬ್ರಹ್ಮಜ್ಞಾನ ಮತ್ತು ಪರಾಭಕ್ತಿಗಳನ್ನು ಪಡೆದುಕೊಳ್ಳುವುದಕ್ಕೆ ವೇದಕಾಲದಲ್ಲೇ ಸಾಕಷ್ಟು ಸಂಶೋಧನೆ, ಅಧ್ಯಯನ, ಚರ್ಚೆ, ಪ್ರಯೋಗಗಳ ಪ್ರವಾಹವೇ ಹರಿದಿದ್ದರೂ ಅನಾದಿಯಾದ ಮಾಯೆಯೆಂಬ ಸಮ್ಮೋಹಕ ಶಕ್ತಿಯ ಎರಡು ಪ್ರಬಲ ಬಾಹುಗಳಾದ ‘ನಾನು, ನನ್ನದು’ಗಳ ಅಬ್ಬರದಿಂದಾಗಿ, ಅಟ್ಟಹಾಸದಿಂದಾಗಿ ಮತ್ತೆ ಮತ್ತೆ ಸಾಕಷ್ಟು ಕೊಳೆ ಸೇರಿಕೊಳ್ಳುವುದೂ, ಅದನ್ನು ಪರಮಾತ್ಮ ಅವತರಿಸಿ ಬಂದು ಶುಚಿಗೊಳಿಸುವುದೂ ನಡೆದೇ ಇದ್ದರೂ ಆಧುನಿಕ ಕಾಲದ ಕಲ್ಪತರು ಎಂದು ಪರಿಗಣಿಸಲ್ಪಟ್ಟ ವಿಜ್ಞಾನವೇ ಧರ್ಮಕ್ಕೆ ಸವಾಲಾಗಿ ನಿಂತಿದ್ದು ಆಧುನಿಕ ಯುಗದ ಬಿಡಿಸಲಾಗದ ಕಗ್ಗಂಟಾಗಿದ್ದು ಒಂದು ವಿಪರ್ಯಾಸವೇ ಸರಿ. ‘ನಾವು ಹೇಗೆ ಪ್ರಯೋಗಶಾಲೆಯಲ್ಲಿ ಪ್ರಯೋಗ ಮಾಡಿ ಪ್ರತಿಯೊಂದು ವಿಚಾರವನ್ನೂ ಸಾಬೀತುಪಡಿಸುತ್ತೇವೆಯೋ ಹಾಗೆಯೇ ಓ ಧರ್ಮವೇ ನೀನು ಕೂಡ ನಿನ್ನ ಪ್ರತಿಯೊಂದು ಚಿಂತನೆಯನ್ನು ಸಾಬೀತು ಪಡೆಸಬಲ್ಲೆಯಾ? ಕೇವಲ ಹೇಳಿದರೆ ಸಾಲದು. ಪುಸ್ತಕದಲ್ಲಿದ್ದರೆ ಸಾಲದು’ ಎಂದು ವಿಜ್ಞಾನ ಮತ್ತು ವಿಜ್ಞಾನಿಗಳು ಧರ್ಮಕ್ಕೆ ಬೆದರಿಕೆ ಹಾಕಿದ್ದು ಒಂದೆರಡು ರೀತಿಯಲ್ಲಲ್ಲ, ಒಂದೆರಡು ಸಂದರ್ಭಗಳಲ್ಲಲ್ಲ. ಅದು ಧರ್ಮವನ್ನು ಕರೆದದ್ದು ಅಪಾಯಕಾರಿ ಅನೃತ (ಛಚ್ಞಜಛ್ಟಿಟ್ಠಠ ಛ್ಟಿ್ಟ್ಟ ಎಂದು. ಗಮನಿಸಿ ಕೇವಲ ಛ್ಟಿ್ಟ್ಟ ಅಲ್ಲ, ಛಚ್ಞಜಛ್ಟಿಟ್ಠಠ ಛ್ಟಿ್ಟ್ಟ ಈ ಸವಾಲನ್ನು ಕೈಗೆತ್ತಿಕೊಂಡು ತಮ್ಮ ಇಡೀ ಆಧ್ಯಾತ್ಮಿಕ ಸಾಧನಾ ಪರ್ವವನ್ನು ಪ್ರಯೋಗಗಳ ಸರಮಾಲೆಯನ್ನೆ ಆಗಿಸಿ ಪ್ರತಿ ಹಂತದಲ್ಲೂ ಸತ್ಯದ ಪೂರ್ಣರೂಪವನ್ನು ಆನಂದಿಸಿ ವಿಜ್ಞಾನ ಕೇವಲ ಸತ್ಯದ ವ್ಯಕ್ತತೆಯನ್ನು ತಿಳಿದರೆ ಆಧ್ಯಾತ್ಮ ಸಮಗ್ರ ಸತ್ಯವನ್ನೇ ಅನಾವರಣಗೊಳಿಸುತ್ತದೆ ಮತ್ತು ಅನುಭವ ವೇದ್ಯವಾಗಿಸುತ್ತದೆ ಎಂದು ಜಗತ್ತಿನ ಮುಂದೆ ಸಂಶಯಕ್ಕೆಡೆಯಿಲ್ಲದಂತೆ ತೋರಿದವರು ಶ್ರೀ ರಾಮಕೃಷ್ಣರು.

ವಿಜ್ಞಾನದ ಉದ್ಧಟತೆಯನ್ನು ನಮ್ರತೆಯನ್ನಾಗಿಸಿ ಧರ್ಮದ ಸರ್ವಶಕ್ತಿತ್ವ ಮತ್ತೊಮ್ಮೆ ಮುಂಚೂಣಿಗೆ ಬರುವಂತೆ ಶ್ರೀ ರಾಮಕೃಷ್ಣರು ಮಾಡಿದ್ದು ತಮ್ಮ ಪ್ರಿಯ ಶಿಷ್ಯ ವಿವೇಕಾನಂದರ ಮೂಲಕ. ಇದರ ಪುರಾವೆಯೇ ನಿಕೊಲಾ ಟೆಸ್ಲಾ, ಹಿರಮ್ ಮ್ಯಾಕ್ಸಿಂ ಮುಂತಾದ ಖ್ಯಾತ ವಿಜ್ಞಾನಿಗಳು ಅವರ ಪದತಲದಲ್ಲಿ ಕುಳಿತಿದ್ದು ಮತ್ತು ಇದೇ ಪ್ರವೃತ್ತಿಯ ಮಹಾನ್ ತತ್ವಜ್ಞರು, ವಿದ್ವಾಂಸರು, ಕವಿಗಳು ಅಷ್ಟೇ ಏಕೆ, ಅಂದಿನ ಸುಪ್ರಸಿದ್ಧ ಅಜ್ಞೇಯತಾವಾದಿ ರಾಬರ್ಟ್ ಇಂಗರ್​ಸಾಲ್, ಮನಶಾಸ್ತ್ರಜ್ಞರು, ವಿಶ್ವವಿದ್ಯಾಲಯಗಳ ದಿಗ್ಗಜರು ಎಲ್ಲರೂ ವಿವೇಕಾನಂದರ ಸಾರ್ವಭೌಮತ್ವವನ್ನು ಒಪ್ಪಿಕೊಂಡ ಸಾಮಂತ ರಾಜರೇ. ಅಗ್ರಮಾನ್ಯ ಶ್ರೀಮಂತ ರಾಕ್ಪೆಲರ್ ಕೂಡ. ಧರ್ಮದ ಬುನಾದಿಗೆ ಲಗ್ಗೆಯಿಟ್ಟ ಡಾರ್ವಿನ್​ನ ವಿಕಾಸವಾದದ ತವರು ನೆಲ ಲಂಡನ್ನಿನಲ್ಲೇ ‘ವಿಜ್ಞಾನವನ್ನು ಒಳಗೊಂಡ ಮಹಾ ವಿಜ್ಞಾನವೇ ಧರ್ಮ’ ಎಂಬುದನ್ನು ಹಂತ ಹಂತವಾಗಿ ವಿವರಿಸಿ ವಿಜ್ಞಾನಿಗಳು ಹೊಸ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವಂತೆ ಮಾಡಿದ್ದು ಅವರ ಇನ್ನೊಂದು ಸಾಧನೆ. ಇದೆಲ್ಲಾ ಬ್ರಹ್ಮಜ್ಞಾನದ ಹೊರ ಹೊಳಹುಗಳು ಮಾತ್ರ. ರಾಮಕೃಷ್ಣರು ಈ ಜಗತ್ತಿಗೆ ಕೊಟ್ಟ ಮಹಾನ್ ಕೊಡುಗೆಯೇ ‘ಬ್ರಹ್ಮಜ್ಞಾನ ಮತ್ತು ಪರಾಭಕ್ತಿಗಳು ಕೇವಲ ತೀವ್ರ ಹಂಬಲದಿಂದಲೇ ಲಭಿಸುತ್ತವೆ’ ಎಂಬ ಸರಳ ಸೂತ್ರವನ್ನು ನೀಡಿದ್ದು. ಇದಕ್ಕೆ ಜಗತ್ತೇ ಅವರಿಗೆ ಚಿರಕಾಲ ಕೃತಜ್ಞತೆಯನ್ನು ಸಲ್ಲಿಸಬೇಕು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net