ಇಂದು ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ದಿನ: ಕೆಲಸದ ಆಮಿಷದ ಎಚ್ಚರವಿರಲಿ, ಕನಸು ಕಾಣಲು ಮಿತಿ ಇರಲಿ

Sex Worker 2 March 20
Published on

ವೇಶ್ಯಾವಾಟಿಕೆಗೆ ಮುಗ್ಧ ಹೆಣ್ಣುಮಕ್ಕಳನ್ನು ದೂಡುವುದಕ್ಕೆ ಪಿಂಪ್ಸ್, ಏಜೆಂಟ್​ಗಳಿಗೆ ಅಸ್ತ್ರವಾಗಿರುವುದು ಕೆಲಸದ ಆಮಿಷ. ಈ ಆಮಿಷ ಬಡ, ಮಧ್ಯಮ ವರ್ಗದ ಹೆಣ್ಣುಮಕ್ಕಳು ಮಾತ್ರವಲ್ಲದೇ ಸುಶಿಕ್ಷಿತರು ಎನಿಸಿಕೊಂಡವರನ್ನೂ, ಶ್ರೀಮಂತ ಮನೆತನದ ಯುವತಿಯರನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ.

ಜೀವನ ನಿರ್ವಹಣೆಗೆ ಹಣ ಸಂಪಾದನೆ ಮಾಡಲು ಬಯಸುವ ಬಡ, ಮಧ್ಯಮ ವರ್ಗದವರಿಗೆ ಮಹಾನಗರಗಳ ಆಸೆ ತೋರಿಸಿ, ಅಲ್ಲಿ ಒಳ್ಳೆಯ ಸಂಪಾದನೆ ಮಾಡಬಹುದು ಎಂದು ನಂಬಿಸಿ ಮೋಸ ಮಾಡುವುದು ಒಂದೆಡೆಯಾದರೆ, ಸಿನಿಮಾ, ಕಿರುತೆರೆ, ಮಾಡೆಲಿಂಗ್, ಜಾಹೀರಾತು ಎಂದೆಲ್ಲಾ ಬಣ್ಣದ ಲೋಕದ ಕನಸು ಕಾಣುತ್ತಿರುವ ಯುವತಿಯರಿಗೆ ಒಳ್ಳೆಯ ಅವಕಾಶ ನೀಡುವ ಆಮಿಷ ತೋರಿಸಲಾಗುತ್ತದೆ. ಯಾವುದಾದರೂ ಸೆಲೆಬ್ರಿಟಿಗಳ ಜತೆ ಎಂದಿಗೋ ತೆಗೆಸಿಕೊಂಡಿರುವ ಫೋಟೋಗಳನ್ನು, ಅವರ ವಿಸಿಟಿಂಗ್ ಕಾರ್ಡ್ ಗಳನ್ನು ತೋರಿಸಿ ಅವರು ತಮಗೆ ತೀರಾ ಪರಿಚಯದವರು ಎಂಬ ಮಾತಿಗೆ ಹೆಣ್ಣುಮಕ್ಕಳನ್ನು ಮೋಡಿ ಮಾಡಲಾಗುತ್ತದೆ. ಒಮ್ಮೆ ಅವರ ಮಾತು ನಂಬಿ ಅವರ ಜತೆ ನಡೆದರೆ ಮುಗಿಯಿತು, ಮತ್ತೆ ಹಿಂದಿರುಗುವ ಪ್ರಶ್ನೆಯೇ ಇಲ್ಲ!

ಆದ್ದರಿಂದ ಅಪರಿಚಿತರು ಬಂದು ಇಂಥ ಯಾವುದೇ ರೀತಿಯ ಆಮಿಷ ಒಡ್ಡಿದರೂ ಅದಕ್ಕೆ ಮರುಳಾಗದೇ ತಮ್ಮ ಸುರಕ್ಷತೆಯನ್ನು ತಾವೇ ಮಾಡಿಕೊಳ್ಳುವ ದೊಡ್ಡ ಜವಾಬ್ದಾರಿ ಇಂದಿನ ಹೆಣ್ಣುಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಇದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net