

ಪ್ರಶ್ನೆ: ನಾನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ 30 ವರ್ಷ ಕೆಲಸ ನಿರ್ವಹಿಸಿದ್ದು, 2020ರ ಆಗಸ್ಟ್ನಲ್ಲಿ ಮುಖ್ಯೋಪಾಧ್ಯಾಯರ ಹುದ್ದೆಗೆ ಪದೋನ್ನತಿ ನೀಡಲಾಗಿತ್ತು. ಆದರೆ, ವೈಯಕ್ತಿಕ ತೊಂದರೆಗಳಿಂದ ಅದನ್ನು ನಿರಾಕರಿಸಿದೆ. ನನ್ನ ನಿವೃತ್ತಿಗೆ ಮೊದಲು ಈ ಪದೋನ್ನತಿ ಕೊಡುತ್ತಾರೆಯೇ?
| ನಾರಾಯಣ ಹೆಗಡೆ ಶಿರಸಿ
ಉತ್ತರ: 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ನಿಯಮ 4ಎ(2) ರಂತೆ ಸರ್ಕಾರಿ ನೌಕರನು ಪದೋನ್ನತಿಯನ್ನು ನಿರಾಕರಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಮತ್ತೆ ಪರಿಗಣಿಸತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಆದ್ದರಿಂದ ನಿವೃತ್ತಿಗೆ ಮೊದಲು ನಿಮಗೆ ಪದೋನ್ನತಿ ನೀಡಲು ಅವಕಾಶವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಕೃತಿ ನೋಡಬಹುದು.