ಸರ್ಕಾರಿ ಕಾರ್ನರ್​: ಪಿಂಚಣಿ ವರ್ಗಾವಣೆಗೆ ಇದೆ ಅವಕಾಶ

sarkari pension
Published on

ಪ್ರಶ್ನೆ: ನಾನು ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದ್ದು, ಮೈಸೂರಿನಲ್ಲಿ ಪಿಂಚಣಿ ಪಡೆಯುತ್ತಿದ್ದೇನೆ. ಈಗ ಪಿಂಚಣಿಯನ್ನು ಮೈಸೂರಿನಿಂದ ಕೆ. ಆರ್​. ನಗರಕ್ಕೆ ವರ್ಗಾವಣೆ ಮಾಡಿಕೊಳ್ಳಲು ನಿಯಾಮಾವಳಿಗಳಲ್ಲಿ ಅವಕಾಶವಿದೆಯೇ?

| ಶಿವರಾಮು ಮೈಸೂರು

ಉತ್ತರ: ಕರ್ನಾಟಕ ಖಜಾನೆ ಸಂಹಿತೆಯ ಅನುಚ್ಛೇದ 199ರಂತೆ ನೀವು ಮೈಸೂರು ಉಪ ಖಜಾನಾಧಿಕಾರಿಗೆ ನಿಮ್ಮ ಪಿಂಚಣಿ ದಾಖಲೆಗಳನ್ನು ಜಿಲ್ಲಾ ಖಜಾನಾಧಿಕಾರಿಗೆ ಕಳುಹಿಸಲು ವಿನಂತಿಸಬೇಕು. ಈ ವಿನಂತಿ ಪತ್ರದೊಡನೆ ನಿಮ್ಮ ಪಿಂಚಣಿ ಪಾವತಿ ಆದೇಶ (ಪಿಪಿಒ) ಹಾಗೂ ಕೆ. ಆರ್​. ನಗರದಲ್ಲಿನ ನಿಮ್ಮ ಬ್ಯಾಂಕ್​ ಖಾತೆ ವಿವರಗಳನ್ನು ಸಲ್ಲಿಸಿ, ವರ್ಗಾವಣೆ ಮಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net