ಸರ್ಕಾರಿ ಕಾರ್ನರ್​: ಅನುಕಂಪದ ನೌಕರಿ ಪಡೆಯಬಹುದೆ?

sarkari corner4
Published on

ಪ್ರಶ್ನೆ: ನನ್ನ ತಂದೆ ಸರ್ಕಾರಿ ನೌಕರರಾಗಿದ್ದು, ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಶಾಶ್ವತ ಮಾನಸಿಕ ಅಸ್ವಸ್ಥರಾಗಿದ್ದಾರೆ. ಈಗ ಅವರ ಅವಲಂಬಿತರು ಅನುಕಂಪದ ನೌಕರಿ ಪಡೆಯಲು ಅರ್ಹರಾಗುವರೇ?

| ರಾಜೇಶ್​ ಕೋಲಾರ

ಉತ್ತರ: ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕಾತಿ) ನಿಯಮಾವಳಿ&1996ರ ನಿಯಮ 3ಎ ಪ್ರಕಾರ ಶಾಶ್ವತ ಅಸಮರ್ಥತೆಯಿಂದಾಗಿ ವೈದ್ಯಕಿಯ ಕಾರಣಗಳ ಮೇರೆಗೆ ನಿವೃತ್ತಿ ಹೊಂದಿದ ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ನೇಮಕಾತಿ ಹೊಂದಲು ಅರ್ಹರಾಗುತ್ತಾರೆ. ಈ ನೇಮಕಾತಿಗೆ ಸರ್ಕಾರಿ ನೌಕರ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶಾಶ್ವತ ಅಸಮರ್ಥತೆ ಉಂಟಾಗಿರಬೇಕಾಗಿರುತ್ತದೆ. "ಕರ್ತವ್ಯದ ಮೇಲಿರುವಾಗ' ಎಂಬ ಪದ ಮನೆಯಿಂದ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ನೌಕರ ಹೋಗಿ ಬರುವ ಪ್ರಯಾಣದ ಸಂದರ್ಭಕ್ಕೂ ಅನ್ವಯಿಸುತ್ತದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ "ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ' ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net