ಬೇರೊಂದು ಹುದ್ದೆಗೆ ಬದಲಾವಣೆ ಮಾಡಿಕೊಳ್ಳಬಹುದೇ? | ಸರ್ಕಾರಿ ಕಾರ್ನರ್​

sarkari corner4
Published on

ಪ್ರಶ್ನೆ: ನಾನು, ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕನಾಗಿ 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ನನಗೀಗ ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದು, ನಾನು ಲಿಪಿಕ ವೃಂದದ ಹುದ್ದೆಗೆ ಬದಲಾವಣೆ ಮಾಡಿಕೊಳ್ಳಬಹುದೇ? ನನ್ನ ವೇತನ ಶ್ರೇಣಿ 33,650-65,250 ರೂ. ಆಗಿದ್ದು, ನಿಯಮಾನುಸಾರ ಬದಲಾವಣೆ ಸಾಧ್ಯವೇ?

| ಪುನೀತ್, ಚಿತ್ರದುರ್ಗ

ಉತ್ತರ: ದಿನಾಂಕ: 6-7-2021ರ ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಿಆಸುಇ 179 ಸೇನೆನಿ 2020ರ ಮೂಲಕ ಕರ್ನಾಟಕ ಸರ್ಕಾರಿ (ಸಾಮಾನ್ಯ ನೇಮಕಾತಿ) ನಿಯಮಗಳು 177ಕ್ಕೆ ತಿದ್ದುಪಡಿ ನಿಯಮ 16-ಎ ಅನ್ನು ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ ನೀವು ಅನಾರೋಗ್ಯ ನಿಮಿತ್ತ ವೃಂದ ಬದಲಾವಣೆ ಮಾಡಿಕೊಳ್ಳಲು ಪ್ರಸ್ತುತ ಅವಕಾಶ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ’ ಕೃತಿಯನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net