ವೈದ್ಯಕೀಯ ಕಾರಣಕ್ಕೆ ಗೈರು: ನಿಯಮ ಏನು ಹೇಳುತ್ತದೆ? | ಸರ್ಕಾರಿ ಕಾರ್ನರ್​

corner
Published on
ದಿನದ ಪ್ರಶ್ನೆ 

ನಾನು ಸರ್ಕಾರಿ ನೌಕರನಾಗಿದ್ದು, 2021ರ ಜು.5ರಿಂದ ಆ.25ರ ವರೆಗೆ 46 ದಿನ ಗೈರಾಗಿ ವೈದ್ಯಕೀಯ ಕಾರಣ ನಿಮಿತ್ತ ರಜೆ ಮಂಜೂರು ಮಾಡಲು ವಿನಂತಿಸಿದ್ದೆ. ಆದರೆ ಶಿಸ್ತು ಪ್ರಾಧಿಕಾರಿಯವರು ಇಲಾಖಾ ವಿಚಾರಣೆ ನಡೆಸಿ ದಿನಾಂಕ: 1-07-2022ರಿಂದ ಜಾರಿಯಾಗುವಂತೆ ಗೈರು ಹಾಜರಿ ಅವಧಿಯನ್ನು ವೇತನರಹಿತ ರಜೆಯಾಗಿ ಪರಿಗಣಿದ್ದಾರೆ. ಅಲ್ಲದೆ, ನನ್ನ ನಡವಳಿಕೆಯನ್ನು ದುರ್ನಡತೆ ಎಂದು ತಿಳಿಸಿ, ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮರಹಿತವಾಗಿ ತಡೆಹಿಡಿದ್ದಾರೆ. ಇದು ಸರಿಯೇ? ನಾನು ಮೇಲ್ಮನವಿ ಸಲ್ಲಿಸಬಹುದೇ?

| ನಂದೀಶ್ ಶಿವಮೊಗ್ಗ

ನೀವು ಸಕಾಲಿಕವಾಗಿ ಅಧಿಕೃತ ವೈದ್ಯಾಧಿಕಾರಿಯಿಂದ ಪ್ರಮಾಣಪತ್ರ ಪಡೆದು ಸಲ್ಲಿಸಿದ್ದರೆ, ವೈದ್ಯಕೀಯ ಕಾರಣಗಳಡಿ ನೀವು ಗೈರಾಗಿದ್ದರೆ ಅದನ್ನು ದುರ್ನಡತೆ ಎಂದು ಪರಿಗಣಿಸಿ ದಂಡನೆ ವಿಧಿಸುವಂತಿಲ್ಲ. ಸವೋಚ್ಚ ನ್ಯಾಯಾಲಯವು ಭಗವನ್​ಲಾಲ್ ಅಯ್ಯರ್ ವರ್ಸ್​ಸ್ ದೆಹಲಿ ಪೊಲೀಸ್ ಸಿವಿಲ್ ಅರ್ಜಿ ಸಂಖೆ್ಯೆ 1625/2004 ರಲ್ಲಿ ದಿನಾಂಕ: 16-03-2004 ರಂದು ಈ ಬಗ್ಗೆ ತೀರ್ಪಿತ್ತಿದೆ. ನೀವು ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ‘ಎಂ.ಉಮೇಶ್ ಅವರ ಸಿಸಿಎ ನಿಯಾಮಾವಳಿ -ಸಮಗ್ರ ಕೈಪಿಡಿ’ ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net