ಭಾರತರಕ್ಷಕ ಸರದಾರ: ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ

Sardar Vallabha
Published on

"ಒಂದೊಮ್ಮೆ ಪಟೇಲರೇ ಪ್ರಧಾನಿಯಾಗಿರುತ್ತಿದ್ದರೆ...', "ಪಟೇಲರು ಇನ್ನೊಂದಷ್ಟು ವರ್ಷಗಳ ಕಾಲ ಬದುಕಿರುತ್ತಿದ್ದರೆ...' ಎಂಬ ದೇಶವಾಸಿಗಳ ಭಾವನೆಯೇ ವಲ್ಲಭಭಾಯಿ ಪಟೇಲರ ಸಾರ್ಥಕ ಬದುಕಿಗೆ ಸಾ. ಅಜೇಯ ಭಾರತದ ಗೆಲುವಿಗಾಗಿ ಸದಾ ಶ್ರಮಿಸಿ ಅಸುನೀಗುವವರೆಗೂ ಭಾರತಸ್ಮರಣೆಗೆದ ಉಕ್ಕಿನ ಮನುಷ್ಯ ಪಟೇಲರ "ಭಾರತ ವಂದನಮಂತ್ರ' ನಮ್ಮ ಬಾಳಿಗೆ ಬೆಳಕಾಗಲಿ.

ಬದುಕುವ ಪಾಠವನ್ನು ಜಗತ್ತಿಗೆ ತಿಳಿಹೇಳಿದ ವಿಶ್ವದ ಸುಂದರನೆಲ ಭಾರತವನ್ನು ವಿಭಜಿಸಿ ಅಪಾರ ಸಾವುನೋವುಗಳಿಗೆ ಕಾರಣರಾದ ಬ್ರಿಟಿಷರು ರಕ್ತದೋಕುಳಿಯ ಆಟ ನೋಡಿ ಸಂಭ್ರಮಿಸುತ್ತಿದ್ದರೆ, ಇನ್ನೊಂದೆಡೆ ಅನೇಕ ರಾಜಕೀಯ ಮಹತ್ವಾಕಾಂಗಳ ಬೆಂಬಲದೊಂದಿಗೆ ಪೂರ್ತಿ ಹಿಂದುಸ್ಥಾನವನ್ನೇ ಕಬಳಿಸಲು ಪ್ರಕ್ರಾಂತಿಯ ಹೊಂಚುಹಾಕಿದ್ದ ಪಾಕಿಸ್ತಾನದ ಅಟ್ಟಹಾಸ. ಈ ಎರಡು ಧ್ರುವಗಳ ಅನ್ಯಾಯವನ್ನು ಮಟ್ಟ ಹಾಕಲು ಸಿದ್ಧತೆ ನಡೆಸುತ್ತಿರುವಾಗಲೇ ಐವತೆದು ಕೋಟಿ ರೂಪಾಯಿಯ ಬಹತ್​ ಮೊತ್ತವನ್ನು ಪಾಕಿಗಳಿಗೆ ಕೊಡಲೇಬೇಕೆಂದು ಹಠಹಿಡಿದು ಉಪವಾಸ ಕುಳಿತ ಗಾಂಧೀಜಿ ಜಿದ್ದು ಮತ್ತೊಂದೆಡೆ. ಪಾಕಿಸ್ತಾನಕ್ಕೆ ನೀಡುವ ಒಂದೊಂದು ಪೆಸೆಯೂ ಭಾರತೀಯ ನಾಗರಿಕರ, ಸೆನಿಕರ ಸಾವಿಗೆ ನಾವೇ ಕೆಯಾರೆ ಕೊಡುವ ಶುಲ್ಕವೆಂಬ ಪರಿಪರಿಯ ವಿನಂತಿಯನ್ನು ಅರ್ಥೈಸಿಕೊಳ್ಳದೆ ತಮ್ಮ ನಿಲುವಿಗೆ ಅಂಟಿದ ಗಾಂಧಿಯವರೊಡನೆ ಮಾತಿಗೆ ಕುಳಿತುಕೊಳ್ಳಲು ಹೊರಡುವಷ್ಟರಲ್ಲಿ, ಚೆನ್ನಾಗಿ ಇಂಗ್ಲಿಷ್​ ಮಾತನಾಡಬಲ್ಲರೆಂಬ ಒಂದೇ ಕಾರಣದಿಂದ ಪ್ರಧಾನಿಯಾದ ನೆಹರು ಎಡಬಿಡಂಗಿತನದಿಂದ ದೇಶವನ್ನು ರಸಲೇಬೇಕಾದ ಅನಿವಾರ್ಯತೆ ಧುತ್ತನೆ ಪ್ರತ್ಯ. ದೇಸೀ ಸಂಸ್ಥಾನಗಳನ್ನು ಒಗ್ಗೂಡಿಸಿ ಎಲ್ಲರ ವಿಶ್ವಾಸಗಳಿಸಿ ಸುಂದರ ಸ್ವತಂತ್ರ ರಾಷ್ಟ್ರ ನಿರ್ಮಿಸುವ ಹೊಣೆಗಾರಿಕೆ ಒಂದು ಭುಜದ ಮೇಲಿದ್ದರೆ, ತಮ್ಮದೇ ನೆಲದಲ್ಲಿ ನಿರ್ಗತಿಕರಾದ ಲಾಂತರ ಹಿಂದೂಗಳ ಆಕ್ರಂದನದ ಸವಾಲುಗಳನ್ನು ನಿಭಾಯಿಸುವ ದಾಯಿತ್ವ ಇನ್ನೊಂದು ಭುಜದ ಮೇಲೆ. ಅನಂತ ಸವಾಲುಗಳೆದುರಾದರೂ ಸರಿ, ದೇಶದ ಮಾನಸಮ್ಮಾನ, ನತೆ, ಗೌರವಗಳು ಮಣ್ಣುಪಾಲಾಗಲು ಬಿಡೆನೆಂದು ನೆಲಕಚ್ಚಿ ಹೆಬ್ಬಂಡೆಯಂತೆ ನಿಂತ ಭಾರತ ಮಹಾರಕ ವಲ್ಲಭಭಾಯಿ ಪಟೇಲರು ಕಾಯೇನ ವಾಚಾ ಮನಸಾ ಸರ್ವಶ್ರೇಷ್ಠ, ಸರ್ವೋತ್ಕ ಷ್ಟ, ಸರ್ವೋಚ್ಚ ಭಾರತದ ಕನಸುಕಂಡ ಸರದಾರ.

ಕಷ್ಟಪರ್ವತ ಹತ್ತಿಳಿದು...

ಉಕ್ಕಿನ ಮನುಷ್ಯ, ಭಾರತ ಸಂರಕ, ಏಕೀಕರಣದ ರೂವಾರಿ ಎಂಬೆಲ್ಲ ಉಪಾಧಿ, ಗೌರವಗಳಿಂದ ಅಲಂಕತರಾದ ಪಟೇಲರ ಬದುಕು ನಾವಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ನೋವು, ಅವಮಾನ, ಸಾಹಸ, ಕಷ್ಟಪರ್ವತಗಳನ್ನು ಹತ್ತಿಳಿದು ಏಗಿದವನು ಮಾತ್ರವೇ ತನ್ನವರ ಕಷ್ಟಗಳನ್ನು ತಲೆಮೇಲೆ ಹೊತ್ತು ತಿರುಗಾಡಬಲ್ಲನೆಂಬ ಹಿರಿಯರ ಮಾತು ಪಟೇಲರಿಗೆ ಒಪು$್ಪತ್ತದೆ. ಗುಜರಾತಿನ ಸಾಮಾನ್ಯ ಕುಟುಂಬದಲ್ಲಿ ಜನನ. ಮೋಸ, ಅಪ್ರಾಮಾಣಿಕತೆಯನ್ನು ಮುಲಾಜಿಲ್ಲದೆ ಖಂಡಿಸುತ್ತಿದ್ದ ಹುಡುಗನ ಉಕ್ಕುತನ ಜನ್ಮಜಾತಗುಣ. ಅಸಾಮಾನ್ಯ ನೋವಿಗೆ ಕಾರಣವಾಗಿ ಕಂಕುಳ ಕೆಳಗೆ ಬೆಳೆದಿದ್ದ ಕಜ್ಜಿಯ ಬೊಬ್ಬೆಯನ್ನು ಗುಣಪಡಿಸಲು ಎಲ್ಲ ವಿಧದ ಔಷಧಗಳೂ ವಿಲವಾದಾಗ ಕೊನೆಗೆ ಉಳಿದದ್ದು ಕಾದ ಕಬ್ಬಿಣ ಸಲಾಕೆಯ ಬರೆ ಮಾತ್ರ. ಎಳೆಯ ವಯಸ್ಸಿನ ಕೋಮಲ ಶರೀರದ ಮೇಲೆ ಬರೆ ಎಳೆಯುವುದು ಹೇಗೆಂದು ಕುಲುಮೆಯವ ಯೋಚಿಸುತ್ತಿದ್ದಾಗ ಥಟ್ಟನೆ ಮೇಲೆದ್ದ ಬಾಲಕ ಪಟೇಲ್​ ಕೆಂಬಣ್ಣದ ಸಲಾಕೆಯನ್ನು ಕಜ್ಜಿಯ ಮೇಲಿಟ್ಟರು. ಸುತ್ತ ನೆರೆದಿದ್ದವರ ಕಣ್ಣು ಒದ್ದೆಯಾಯಿತೇ ವಿನಾ ಪಟೇಲರು ಏನೂ ಆಗಿಲ್ಲವೆಂಬಂತೆ ಸುಮ್ಮನಿದ್ದರು. ಅನ್ಯಾನ್ಯ ಕಾರಣಗಳಿಂದ ಶಾಲಾಶಿಣ ತಡವಾದುದರಿಂದ ಮೆಟ್ರಿಕ್​ ಮುಗಿಸುವ ವೇಳೆ ಮೀಸೆ ಮೂಡಿತ್ತು. ಸ್ವಾತಂತ್ರ$್ಯ ಹೋರಾಟ, ಬ್ರಿಟಿಷರ ಆಕ್ರಮಣ, ಆಂದೋಲನದ ಬಗ್ಗೆ ಅಷ್ಟೇನೂ ಯೋಚಿಸದಿದ್ದ ಪಟೇಲರಿಗೆ ಆಂಗ್ಲ ಅಧಿಕಾರಿಯ ಕೊರಳಪಟ್ಟಿ ಹಿಡಿದು ದಬಾಯಿಸುವ ಅವಕಾಶವೊಂದು ತಾನಾಗಿಯೇ ಒದಗಿ ಬಂದಿತು. ತಮ್ಮೂರಿನ ರೆತನನ್ನು ಬೆದರಿಸಿ, ಬೆಳೆ ಹೊತ್ತೊಯ್ಯುವ ದಬ್ಬಾಳಿಕೆ ನಡೆಸಿ, ಮನೆಯೊಳಗೆ ನುಗ್ಗಿ ಅನ್ಯಾಯವೆಸಗಿದ ಅಧಿಕಾರಿಗಳ ದರ್ಪವನ್ನು ಕಂಡ ಜನತೆ ಕೆಕಟ್ಟಿ ಕುಳಿತರೆ ಸ್ಥಳಕ್ಕಾಗಮಿಸಿದ ದಢಕಾಯ ಪಟೇಲರು ಪೊಲೀಸನ ಅಂಗಿ ಹಿಡಿದೆಳೆದು ಆತನನ್ನು ಮೇಲೆತ್ತಿ ಧೊಪ್ಪನೆ ಕೆಳಗುರುಳಿಸಿದರು. ರೆತನ ಮೆ ಕೇಳುವವರೆಗೂ ಬಿಡದೆ ಕಾಡಿದ ಸರದಾರ, ಮುಂದೊಂದು ದಿನ ತಮ್ಮೆದುರು ನಿಲ್ಲಬಲ್ಲ ಶತ್ರುಗಳೆದೆ ಬಗೆಯಲು ಸಿದ್ಧತೆ ನಡೆಸುತ್ತಿದ್ದರೋ ಏನೋ!

ವಜ್ರಾದಪಿ ಕಠೋರಾಣಿ

ಕಷ್ಟಪಟ್ಟು ಆರಂಭಿಕ ಶಿಣ ಮುಗಿಸಿದ ಪಟೇಲರು ಕಳಪೆ ವ್ಯಾಸಂಗ ಸಾಧನೆಯಿಂದ ಕುಟುಂಬಿಕರ ದಷ್ಟಿಯಲ್ಲಿ ಅಸಮರ್ಥರೇ ಆಗಿದ್ದರು. ಆ ಅಪಸವ್ಯದ ನಡುವೆಯೂ ಸ್ವಾಧ್ಯಾಯಿಯಾಗಿ ಕಾನೂನು ಪದವಿ ಪೂರೆಸಿದರು. ಅಪೂರ್ವ ವಾದವೆಖರಿ, ಆಳವಾದ ಜ್ಞಾನದಿಂದ ಪ್ರಸಿದ್ಧರಾದ ಪಟೇಲರು ನ್ಯಾಯಾಪೇಗಳಾಗಿ ಬಳಿಬರುವ ಯಾರಿಗೂ ಅನ್ಯಾಯವಾಗಬಾರದೆಂಬ ನಿಲುವಿನವರು. ಹಣ ಮಾಡುವುದಕ್ಕಾಗಿ ಉದ್ಯೋಗವಲ್ಲ. ಅದೊಮ್ಮೆ ಬಹುಮುಖ್ಯವಾದ ವಾದವಿವಾದ ನಡೆಯುತ್ತಿದ್ದ ಸಂದರ್ಭದಲ್ಲಿ ಸಹಾಯಕನೋರ್ವ ಚೀಟಿ ತಂದು ಪಟೇಲರ ಕೆಗಿತ್ತ. ಅವರು ಚೀಟಿಯ ಮೇಲೊಮ್ಮೆ ಕಣ್ಣಾಡಿಸಿ, ಓದಿ, ವಾದ ಮುಂದುವರಿಸಿ, ಕಾರ್ಯಕಲಾಪಗಳು ಮುಗಿದ ಬಳಿಕವೇ ನ್ಯಾಯಾಲಯದಾವರಣದಿಂದ ಹೊರನಡೆದರು. ತನ್ನ ಪ್ರಿಯಪತ್ನಿಯ ಸಾವಿನ ಸುದ್ದಿ ತಲುಪಿದರೂ ಧತಿಗೆಡದೆ, ಕರ್ತವ್ಯನಿಷ್ಠೆ ತೋರಿದ ಪಟೇಲರು "ವಜ್ರಾದಪಿ ಕಠೋರಾಣಿ, ಮದೂನಿ ಕುಸುಮಾದಪಿ' ವ್ಯಕ್ತಿತ್ವದ ಅರ್ನ್ಯರತ್ನ.

ಜನರ ಕಣ್ಮಣಿ

ಲಂಡನ್ನಿನಲ್ಲಿ ಉನ್ನತಾಧ್ಯಯನ ನಡೆಸುವ ಅವಕಾಶದ ಪುನ@ಪ್ರಾಪ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಭಾರತಕ್ಕೆ ಮರಳಿ ವತ್ತೀಜಿವನ ಮುಂದುವರಿಸಿದ ಪಟೇಲರು ಗಾಂಧೀಜಿ ಭೇಟಿಯಿಂದ ಪ್ರಭಾವಿತರಾದರು. ಉಡುಗೆ, ತೊಡುಗೆಗಳಲ್ಲಿ ಪಶ್ಚಿಮದ ಪ್ರಭಾವ ಗೋಚರಿಸಿದರೂ ಭಾರತೀಯತ್ವದ ಅಂತ@ಸತ್ವ ಮತ್ತಷ್ಟು ಗಟ್ಟಿಗೊಂಡಿತ್ತು. ವೆಯಕ್ತಿಕ ಸುಖಾಪೇೆಗಳಿಗಿಂತಲೂ ರಾಷ್ಟ್ರಹಿತವೇ ಮುಖ್ಯವೆಂದು ಸ್ವಾತಂತ್ರ$್ಯ ಚಳವಳಿಗೆ ಧುಮುಕಿ ರೆತಪರ ಹೋರಾಟದಲ್ಲಿ ಭಾಗವಹಿಸಿ ಗುಜರಾತಿನ ಅನಭಿಷಿಕ್ತ ನಾಯಕರಾಗಿ ಬೆಳೆದರು. ಅಸಹಕಾರ ಆಂದೋಲನದ ಮುಂದಾಳತ್ವ ವಹಿಸಿ ವಿದೇಶೀ ಜೀವನಶೆಲಿಗೆ ವಿದಾಯಹೇಳಿ ಖಾದಿಧಾರಿಯಾಗಿ, ಬಾರ್ಡೋಲಿ ಸತ್ಯಾಗ್ರಹದ ವಿಜಯದಿಂದ ದೇಶದ ಮನೆಮಾತಾದರು. ಕರ ನಿರಾಕರಣೆ, ಉಪ್ಪಿನ ಸತ್ಯಾಗ್ರಹ, ದಂಡಿ ಯಾತ್ರೆಯಿಂದಾರಂಭಿಸಿ ಚಲೇ ಜಾವ್​ ಚಳವಳಿಯವರೆಗೆ ಗಾಂಧೀಜಿಯ ಪ್ರತಿ ಹೆಜ್ಜೆಗೂ ಆಸರೆಯಾದರು. ಪಟೇಲರು ಜಾತೀಯತೆ, ಅಸ್ಪ ಶ್ಯತೆಗಳನ್ನು ಖಂಡಿಸಿ, ಪಾನನಿಷೇಧದ ಸರ್ಕಾರಿ ಅಂಕಿತಕ್ಕೆ ಆಗ್ರಹಿಸಿ, ಸ್ತ್ರೀ ಸಬಲೀಕರಣದ ಹಕ್ಕೊತ್ತಾಯ ಮಂಡಿಸಿದರು. ಬ್ರಿಟಿಷ್​ ಸರ್ಕಾರ ಬಾಲಿಶ ನೆಪವೊಡ್ಡಿ ಅವರಿಗೆ ಜೆಲುಶಿೆ ವಿಧಿಸಿತು. "ನನ್ನನ್ನು ಸೆರೆಮನೆಗೆ ಕಳುಹಿಸುವುದರಿಂದ ಸಮಸ್ಯೆ ಪರಿಹಾರವಾಯಿತೆಂದು ಭಾವಿಸಿದರೆ ಅದು ನಿಮ್ಮ ಹುಚ್ಚುತನ. ನಾವು ಅಹಿಂಸೆಯ ಬಗ್ಗೆ ಮಾತನಾಡುತ್ತಿರುವೆವೆಂದರೆ ಅದು ನಮ್ಮ ಹೇಡಿತನವಲ್ಲ' ಎಂದು ಗುಡುಗಿದ ಪಟೇಲರು, ಚಲೇಜಾವ್​ ಚಳವಳಿಯ ನಾಯಕತ್ವ ವಹಿಸಿ ಗಾಂಧೀಜಿಯ ಕಣ್ಣುಗಳಂತೆ ಕಾರ್ಯನಿರ್ವಹಿಸಿ ನಾಡಿನ ಮೂಲೆಮೂಲೆಗಳಲ್ಲಿ ಆಂಗ್ಲವಿರೋಧೀ ಭಾವನೆಯನ್ನು ಪಸರಿಸಿದರು. ಮತ್ತೆ ಜೆಲುಪಾಲಾಗಿ ಹೊರಬಂದ ಎಪ್ಪತ್ತರ ತರುಣ ಪಟೇಲರೆದುರಿದ್ದುದು ಸಂರ್ಷ, ಸವಾಲುಗಳು ಮಾತ್ರ. ಸ್ವಾತಂತ್ರ$್ಯ, ದಾಸ್ಯಮುಕ್ತ ಭಾರತದ ಸುಂದರ ಕನಸುಗಳನ್ನು ಪೋಣಿಸಿದ್ದ ಕಾಂಗ್ರೆಸ್​ ಬ್ರಿಟಿಷರ ನಿರ್ಗಮನದ ಹೊತ್ತಲ್ಲಿ ಅಧಿಕಾರದ ಸುತ್ತ ಗಿರಕಿ ಹೊಡೆಯುವಲ್ಲೇ ನಿರತವಾಗಿತ್ತು. ದೇಶನಿಷ್ಠರನ್ನು ಕಡೆಗಣಿಸಿ, ಹೊಗಳು ಭಟ್ಟಂಗಿಗಳನ್ನು ಆಯಕಟ್ಟಿನ ಜಾಗದಲ್ಲಿ ತಂದು ನಿಲ್ಲಿಸಿದ ನೆಹರು ಪ್ರಮಾದ ಮುಂದೊಂದು ದಿನ ಸ್ವತಂತ್ರ ಭಾರತದ ಕುತ್ತಿಗೆಗೆ ನೇಣಿನ ಕುಣಿಕೆಯಾಗುವುದೆಂಬ ಪಟೇಲವಾಣಿಯನ್ನು ತಿರಸ್ಕರಿಸಿದ ಗಾಂಧೀಜಿ, ನೆಹರು ನಾಯಕತ್ವಕ್ಕೆ ಜೆಕಾರ ಬರೆದರು.

ಕಠಿಣ ನಿಲುವು, ದೇಶದ ಒಲವು

ಇಡಿಯಾದರೂ ಸರಿ, ತುಂಡಾದರೂ ಸರಿ. ಒಟ್ಟಿನಲ್ಲಿ ದಿಲ್ಲೀಶ ತಾನಾಗಬೇಕೆಂಬ ನೆಹರು ಹಪಾಹಪಿತನಕ್ಕೆ ವೇದಭೂಮಿ ತುಂಡಾದಾಗ ಕಣ್ಣೀರಿಟ್ಟ ಪಟೇಲರು ಉಳಿದ ಭಾರತದ ಅಖಂಡತೆಯ ರೆಗಾಗಿ ಪಣತೊಟ್ಟರು. ವಿಭಜನೆಯ ಶಾಪದಿಂದ ಅನಾಥರಾದ ಲಾಂತರ ಅಸಹಾಯಕ ಹಿಂದೂಗಳ ಆಕ್ರಂದನದ ನಡುವೆ ಸ್ವತಂತ್ರಗೊಂಡ ಭಾರತದ ಉಪಪ್ರಧಾನಿ, ಗಹಸಚಿವರಾಗಿ ನಿಯುಕ್ತರಾದ ಪಟೇಲರು ಅಂದು ಕೆಗೊಂಡ ಅನೇಕ ಕಟುನಿಲುವಿನಿಂದ ಭಾರತ ಇಂದಿಗೂ ಭಾರತವಾಗಿಯೇ ಉಳಿದಿದೆ. ನಿರಾಶ್ರಿತರ ವಸತಿ, ಜೀವರಣೆಯಲ್ಲಿ ವ್ಯಸ್ತರಾಗಿದ್ದ ಪಟೇಲ್​ ಉಸಿರು ತೆಗೆದುಕೊಳ್ಳುವಷ್ಟರಲ್ಲಿ ಪಾಕ್​ ಧನಸಹಾಯದ ಪ್ರಸ್ತಾಪವಾಯಿತು. ಪಾಕಿಸ್ತಾನದಿಂದ ರೆಲುಗಳಲ್ಲಿ ರವಾನೆಯಾದ ತುಂಬಿ ತುಳುಕುತ್ತಿದ್ದ ಹಿಂದೂಹೆಣಗಳ ಅಂತ್ಯಕ್ರಿಯೆ ಮುಗಿಯುವ ಮೊದಲೇ, ಪಾಕಿಸ್ತಾನ ಭಾರತದ ವಿರುದ್ಧ ಸಮರ ಸಾರಿತು. ಪ್ರಧಾನಿಯ ಔದಾಸೀನ್ಯದ ಅರಿವಿದ್ದ ಪಟೇಲರು ತಾವೇ ರಣಾ ಸಚಿವರಿಗೆ ಹಾಗೂ ಸೇನಾ ಮಹಾದಂಡನಾಯಕರಿಗೆ ಆಜ್ಞಾಪಿಸಿ ಪಾಕಿಸ್ತಾನದ ಸೊಕ್ಕು ಮುರಿದರು. ಆದರೆ ಶಾಂತಿದೂತ ತಾನಾಗಬೇಕೆಂಬ ನೆಹರು ಅಚಾತುರ್ಯಕ್ಕೆ ಕಾಶ್ಮೀರ ಬಲಿಯಾಯಿತು. ಗಾಂಧಿಹತ್ಯೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ ಪಟೇಲರು ನಿಜಾರ್ಥದ ಉಕ್ಕಿನ ಮನುಷ್ಯ. ಐದುನೂರ ಅರುವತ್ತು ಯೋಚನೆಗಳ ಸಂಸ್ಥಾನಗಳ ಮುಖ್ಯಸ್ಥರೆಲ್ಲರೂ ಭಾರತಕ್ಕೆ ಜೆ ಅಂದರೂ ಜುನಾಗಡ, ಹೆದರಾಬಾದಿನ ಮುಸಲ್ಮಾನ ಮುಖ್ಯಸ್ಥರು ಭಾರತಸೇರ್ಪಡೆಗೆ ನಕಾರ ವ್ಯಕ್ತಪಡಿಸಿ ಸಂಪತ್ತನ್ನು ಪಾಕಿಸ್ತಾನಕ್ಕೆ ಸಾಗಿಸಿ, ಹಿಂದೂಗಳ ನರಮೇಧಕ್ಕೆ ಮುಂದಡಿಯಿಟ್ಟರು. ಹಿಂದುಗಳ ಚಳವಳಿ ತೀವ್ರಗೊಂಡಾಗ ಸಮರ ಸಾರುವ ಸೂಚನೆಯಿತ್ತ ಪಟೇಲರನ್ನು ಅಡ್ಡಿಪಡಿಸಿದ ನೆಹರು, ಹಿಂದು&ಮುಸ್ಲಿಂ ದಂಗೆಯ ನೆಪವೊಡ್ಡಿ ಭಯ ಹುಟ್ಟಿಸಿದರು. "ಕಾಶ್ಮೀರ ಹೇಗೆ ಭಾರತದ ಅವಿಭಾಜ್ಯ ಅಂಗವೋ ಹಾಗೆಯೇ ಹೆದರಾಬಾದ್​ ಹಾಗೂ ಜುನಾಗಢ. ನಮ್ಮವರ ಮೇಲೆ ಆಕ್ರಮಣ ನಡೆದು ನೆತ್ತರ ಕೋಡಿ ಹರಿಯುತ್ತಿರುವಾಗ ಅದನ್ನು ನೋಡಿ ಸುಮ್ಮನಿರಲು ನಾನು ಮೂಕನೂ ಅಲ್ಲ, ಕಿವುಡನೂ ಅಲ್ಲ' ಎಂದುತ್ತರಿಸಿ ನೆಹರುವಿರೋಧ ಲೆಕ್ಕಿಸದೆ ದಂಡಪ್ರಯೋಗಿಸಿದ ಪಟೇಲರ ಪೆಟ್ಟಿಗೆ ಸಂಸ್ಥಾನಾಧೀಶರು ತತ್ತರಿಸಿದರು. ಕಾಶ್ಮೀರದ ರಾಜ ಹರಿಸಿಂಗರ ಗೊಂದಲ ಪರಿಹರಿಸಿ ಬೆಂಗಾವಲಾದ ಪರಿಣಾಮ ಕಣಿವೆ ರಾಜ್ಯ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಿತು. ಐಸಿಎಸ್​ ಪರೀೆಗೆ ಸೆಡ್ಡು ಹೊಡೆಯು ವಂತೆ ಆಡಳಿತವ್ಯವಸ್ಥೆಯ ಸುಧಾರಣೆಗೆ ದೇಶವ್ಯಾಪಿ ಒಂದು ಪರೀೆ, "ಭಾರತದ ಯಾರೊಬ್ಬನೂ ಹಸಿವಿನಿಂದ ಮಲಗಬಾರದೆಂಬ' ಕಷಿಕಲ್ಯಾಣ ನೀತಿ, ಗೋ ಆಧಾರಿತ ಆರ್ಥಿಕತೆ, ಚೀನಾದ ಕುಟಿಲನೀತಿಯ ಎಚ್ಚರಿಕೆಯೇ ಮೊದಲಾಗಿ ರಾಷ್ಟ್ರದ ಅಖಂಡತೆಗಾಗಿ ಸರ್ವಸ್ವವನ್ನೂ ಸಮರ್ಪಿಸಿದ ಪಟೇಲರು ಮನಸ್ಸು ಮಾಡಿದ್ದರೆ ತಮ್ಮ ಪುತ್ರಿಯ ರಾಜಕೀಯ ಭವಿಷ್ಯ ಅತ್ಯುನ್ನತ ದರ್ಜೆಗೆ ಏರಿಸಬಹುದಾಗಿತ್ತು. ರಾಜಕಾರಣ ವೆಂಬುದು ಲೋಕೋದ್ಧಾರಕ್ಕೆಯೇ ಹೊರತು ಸ್ವಜನೋದ್ಧಾರಕ್ಕಲ್ಲವೆಂದು ಸಾರಿದರು.

(ಲೇಖಕರು ಉಪನ್ಯಾಸಕರು, ವಾಗ್ಮಿ)

ಭಾರತದ ಮಣ್ಣಿನಲ್ಲಿ ನಿಜಕ್ಕೂ ಏನೋ ವಿಶೇಷವಿದೆ. ಹಾಗಾಗಿಯೇ, ಯಾವಾಗಲೂ ಮಹಾಪುರುಷರ ಜನ್ಮಸ್ಥಾನ ಮತ್ತು ಆವಾಸಸ್ಥಾನವಾಗಿದೆ. ಭಾರತದ ಈ ಶಕ್ತಿಯನ್ನು ಹಿರಿಯರು ಮನಗಂಡಿದ್ದಾರೆ. ರಾಷ್ಟ್ರದ ಅಂತ@ಶಕ್ತಿಯನ್ನು ಹೀಗೇ ಕಾಪಾಡಿ ಕೊಳ್ಳುವ ಹೊಣೆ ದೇಶವಾಸಿಗಳ ಮೇಲಿದೆ.

ನೀನು ಭಾರತಮಾತೆಯ ಪಾದದ ಬಳಿಯಿರುವೆ; ಕೆಲಕ್ಷಣದವರೆಗೆ ನಿನ್ನ ಕಣ್ಣುಗಳನ್ನು ಮುಚ್ಚಿಕೊಂಡು ಇಲ್ಲಿಂದಾಚೆಗೆ, ಮಹಾನ್​ ಹಿಮಾಲಯ ಪರ್ವತಶ್ರೇಣಿಯವರೆಗೆ ಏನು ನೆಲೆಗೊಂಡಿದೆ ಎಂಬುದನ್ನು ಒಮ್ಮೆ ಅವಲೋಕಿಸು ಮತ್ತು ಒಂದೊಂದು ಎಳೆಯೂ ಸೇರಿ ಹೇಗೆ ವಿಶಾಲ ಬಟ್ಟೆಯಾಗಿ ನೇಯಲ್ಪಟ್ಟಿತು ಎಂಬುದರ ಕುರಿತು ಧ್ಯಾನಿಸು. |ಸರ್ದಾರ್​ ವಲ್ಲಭಭಾಯಿ ಪಟೇಲ್​ (ಕನ್ಯಾಕುಮಾರಿಗೆ ಭೇಟಿ ನೀಡಿದಾಗ ಹೇಳಿದ್ದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net