

ಹೃದಯ ಮುದ್ರಾ ಅಭ್ಯಾಸದಲ್ಲಿನ ಕೈ ಸೂಚಕವು ಹೆಬ್ಬೆರಳು (ಅಗ್ನಿ ಅಂಶ), ಉಂಗುರ ಬೆರಳು (ಭೂಮಿಯ ಅಂಶ) ಮತ್ತು ಮಧ್ಯದ ಬೆರಳು (ಬಾಹ್ಯಾಕಾಶ ಅಂಶ) ಒತ್ತುವ ಮೂಲಕ ಹೃದಯ ಚಕ್ರವನ್ನು (ಅನಾಹತ ಚಕ್ರ) ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಈ ಬೆರಳುಗಳ ತುದಿಯಲ್ಲಿರುವ ಒತ್ತಡವು ದೇಹವನ್ನು ನಿರ್ವಿಷಗೊಳಿಸಲು ಮತ್ತು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಕ್ಕೆ ಹೆಚ್ಚಿನ ಆಮ್ಲಜನಕದ ಪೂರೈಕೆಯೊಂದಿಗೆ ಹೃದಯದ ಶಕ್ತಿ ಮತ್ತು ಕಾರ್ಯವನ್ನು ಹೆಚ್ಚಿಸುತ್ತದೆ.
ಹೃದಯ ಮುದ್ರೆಯಲ್ಲಿ ತೋರುಬೆರಳು ಹೆಬ್ಬೆರಳಿನ ಮೂಲವನ್ನು ರ್ಸ³ಸುವಂತೆ ಒಳಮುಖವಾಗಿ ಸುರುಳಿಯಾಗಿರುತ್ತದೆ. ಇತರ ಬೆರಳುಗಳು (ಹೆಬ್ಬೆರಳು, ಉಂಗುರ ಮತ್ತು ಮಧ್ಯ) ತುದಿಗಳಲ್ಲಿ ಪರಸ್ಪರ ವಿರುದ್ಧವಾಗಿ ಒತ್ತಿದರೆ, ಕಿರುಬೆರಳನ್ನು ಚಾಚಲಾಗುತ್ತದೆ. ಹೃದಯ ಮುದ್ರೆಯನ್ನು ಅಪಾನ ವಾಯು ಮುದ್ರೆ ಅಥವಾ ಮೃತಸಂಜೀವಿನಿ ಮುದ್ರೆ ಎಂದೂ ಕರೆಯುತ್ತಾರೆ. ಇದು ಹೃದಯಾಘಾತಕ್ಕೆ ಪ್ರಥಮ ಚಿಕಿತ್ಸೆಯಾಗಿ ಸಹಕಾರಿಯಾಗುತ್ತದೆ. ಅನಾರೋಗ್ಯಕರ ಆಹಾರದ ಆಯ್ಕೆಗಳೊಂದಿಗೆ ಕಾರ್ಯನಿರತ ಮತ್ತು ಜಡ ಜೀವನಶೈಲಿಯು ನಮ್ಮನ್ನು ಹಲವಾರು ಹೃದ್ರೋಗಗಳಿಗೆ ಗುರಿಯಾಗುವಂತೆ ಮಾಡಿದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜತೆಗೆ, ಮುದ್ರೆಗಳು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆೆ.
ಮುದ್ರೆಗಳು ದೇಹದ ಅಂಶಗಳನ್ನು ಸಮತೋಲನ ಸ್ಥಿತಿಗೆ ತರುತ್ತವೆ. ದೇಹದಲ್ಲಿರುವ ಅಧಿಕ ವಾಯು ಕಡಿಮೆಯಾಗುತ್ತದೆ. ಗಂಟಲಿನ ಊತ ಕಡಿಮೆಯಾಗುತ್ತದೆ. ದುರ್ಬಲ ನಾಡಿ ಬಡಿತದ ಸಂದರ್ಭದಲ್ಲಿ ಈ ಮುದ್ರೆಯು ಸಹಕಾರಿಯಾಗುತ್ತದೆ.
ವಿಧಾನ: ತೋರು ಬೆರಳಿನ ಮೇಲೆ ಹೆಬ್ಬೆರಳನ್ನಿಡಬೇಕು ಹಾಗೂ ಮೃದುವಾಗಿ ಒತ್ತಿರಲಿ. ನಂತರ ಮಧ್ಯದ ಬೆರಳು ಮತ್ತು ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಗಿಸಿ. ಕಿರು ಬೆರಳು ನೇರವಾಗಿರಲಿ. ಈ ಮುದ್ರೆಯನ್ನು 10 ನಿಮಿಷದಿಂದ 30 ನಿಮಿಷದ ವರೆಗೆ ಮಾಡಿದರೆ ಒಳ್ಳೆಯದು. ಹೃದಯ ಮುದ್ರೆಯನ್ನು ಅಭ್ಯಾಸ ಮಾಡಿದ ಬೆನ್ನಿಗೆ ಪ್ರಾಣ ಮುದ್ರೆಯನ್ನು 10 ನಿಮಿಷ ಮಾಡಿ. ಎರಡೂ ಕೈಯಲ್ಲಿ ಅಭ್ಯಾಸ ಮಾಡಿ. ಹೃದಯ ಮುದ್ರೆಯಲ್ಲಿ ಇಷ್ಟ ದೇವರು ಅಥವಾ ಓಂ ನಮಃ ಶಿವಾಯ ಎಂದು 108 ಬಾರಿ ಪಠಿಸಿ.
ಪ್ರಯೋಜನಗಳು: ವೇಗವಾಗಿ ಹೃದಯ ಬಡಿತ ಇರುವವರಿಗೆ ಮತ್ತು ಅಪಧಮನಿಗಳೊಳಗಿನ ಅಡೆ ತಡೆಗಳಿಂದ ಉಂಟಾಗುವ ಎದೆ ನೋವಿನಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ, ಗ್ಯಾಸ್ಟ್ರಿಕ್ ಸಮಸ್ಯೆ, ಮೂಲವ್ಯಾಧಿ, ಮೈಗ್ರೇನ್ ತಲೆನೋವಿನ ಸಮಸ್ಯೆ ನಿಯಂತ್ರಣವಾಗುತ್ತದೆ. ಕೆಲಸದೊತ್ತಡದ ವೇಳೆಯಲ್ಲಿ ಅಥವಾ ಮೆಟ್ಟಲುಗಳನ್ನು ಏರುವಾಗ, ಬೆಟ್ಟ ಗುಡ್ಡ ಹತ್ತುವ ಸಂದರ್ಭದಲ್ಲಿ ಹೃದಯ ಮುದ್ರೆ ಮಾಡಿ ಒಂದೆರಡು ನಿಮಿಷ ನಿಂತುಕೊಂಡು ಮತ್ತೆ ಹತ್ತಬೇಕು, ಹೃದಯದ ಜೀವ ಶಕ್ತಿಯನ್ನು ಹೆಚ್ಚಿಸುತ್ತದೆ. ಆಗ ಆಯಾಸ ಪರಿಹಾರವಾಗಿ ದೇಹದಲ್ಲಿ ಚೈತನ್ಯ ಮೂಡುತ್ತದೆ. ಈ ಮುದ್ರೆಯು ಹೃದಯ ರೋಗಗಳಿಗೆ ವರದಾನವಾಗಿದೆ. ದೇಹದ ವಿವಿಧ ಭಾಗಗಳಲ್ಲಿರುವ ಹೆಚ್ಚಿನ ವಾಯುವನ್ನು ನಿವಾರಿಸಲು ಈ ಮುದ್ರೆ ಸಹಕಾರಿ. ದುರ್ಬಲ ಹೃದಯ ಪೀಡಿತರಿಗೆ ಕೂಡ ಈ ಮುದ್ರೆ ಸಹಕಾರಿ. ಕೈ ಕಾಲುಗಳಲ್ಲಿ ಅನಗತ್ಯವಾಗಿ ಬರುವ ಬೆವರನ್ನು ನಿಯಂತ್ರಿಸುತ್ತದೆ. ಮೂತ್ರ ವಿಸರ್ಜನೆ ಸರಾಗವಾಗಲು ಸಹಾಯ ಮಾಡುತ್ತದೆ. ವೆರಿಕೋಸ್ ನರದ ತೊಂದರೆಯಿಂದ ಬಳಲುತ್ತಿರುವವರು ಈ ಮುದ್ರೆಯಿಂದ ಸರಿಪಡಿಸಲು ಸಹಾಯವಾಗುತ್ತದೆ, ಮಂಡಿನೋವು ಸಂಧಿವಾತ ಇದ್ದವರು ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ ಫಲಕಾರಿಯಾಗುತ್ತದೆ.