ಬರವಣಿಗೆ ನಿರಂತರ: ಕಥೆ ಹೆಣೆಯೋ ಕೆಲಸ ಪ್ರಗತಿಯಲ್ಲಿದೆ ...

Sandalwood Directors
Published on

ಲಾಕ್​ಡೌನ್​ನಿಂದಾಗಿ ಒಂದೂವರೆ ತಿಂಗಳಿನಿಂದ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಕೆಲಸ ಇಲ್ಲ. ಆದರೆ, ನಿರ್ದೇಶಕರು ಹಾಗಲ್ಲ. ಲಾಕ್​ಡೌನ್​ ಇರಲಿ, ಬಿಡಲಿ ಮುಂದಿನ ಕೆಲಸಗಳ ಬಗ್ಗೆ ಯೋಚಿಸುತ್ತಲೇ ಇರಬೇಕು. ಹೊಸ ಚಿತ್ರಗಳಿಗೆ ತಯಾರಿ ಮಾಡಿಕೊಳ್ಳುತ್ತಲೇ ಇರಬೇಕು. ಈ ಸಮಯವನ್ನು ಹೇಗೆ ಬಳಸಿಕೊಂಡರು ಎಂಬ ಬಗ್ಗೆ ಕನ್ನಡದ ನಾಲ್ವರು ಜನಪ್ರಿಯ ನಿರ್ದೇಶಕರು, "ವಿಜಯವಾಣಿ' ಜತೆಗೆ ಮಾತನಾಡಿದ್ದಾರೆ.

ನಾಯಕರಿಗೆ ಕಥೆ ಬರೆಯುವ ಟಾಸ್ಕ್​ ಸಿಕ್ಕಿದೆ ಈ ಲಾಕ್​ಡೌನ್​ ಅವಧಿಯಲ್ಲಿ ಹಿಂದೆಂದೂ ಮಾಡದ ಪ್ರಯತ್ನವೊಂದಕ್ಕೆ ನಾನು ಕೈ ಹಾಕಿದ್ದೇನೆ. ಇಲ್ಲಿಯವರೆಗೂ ಮೊದಲು ಕಥೆ ಮಾಡಿ, ಆ ನಂತರ ಅದಕ್ಕೆ ಸೂಕ್ತವಾದ ಕಲಾವಿದರು ಮತ್ತು ತಂತ್ರಜ್ಞರ ಹುಡುಕಾಟಕ್ಕಿಳಿಯುತ್ತಿದ್ದೆ. ಆದರೆ, ಇದೀಗ ಮೊದಲ ಬಾರಿ ಒಂದಿಬ್ಬರು ನಾಯಕ ನಟರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆಯುವ ಟಾಸ್ಕ್​ ಸಿಕ್ಕಿದೆ. ಅದು ನನಗೆ ನಿಜಕ್ಕೂ ಹೊಸದು. ಇದರ ನಡುವೆ "ಬನಾರಸ್​' ಸಿನಿಮಾ ರೆಡಿಯಾಗಿದೆ. ಇತ್ತ "ಬೆಲ್​ ಬಾಟಂ 2' ಸಿನಿಮಾದ ಸೆಟ್​ ಕೆಲಸ ಇನ್ನೇನು ಶುರುವಾಗಬೇಕಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆ ಆಯಿತು. ಹಾಗಾಗಿ ಒಂದು ರೀತಿ ಇಕ್ಕಟಿನಲ್ಲಿ ಸಿಲುಕಿದಂತಾಗಿದೆ. ಈ ಮನಸ್ಥಿತಿಯಲ್ಲಿ ಹೊಸದನ್ನು ಯೋಚನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೊಳೆದಿದ್ದನ್ನು ಪುಸ್ತಕಕ್ಕೆ ಇಳಿಸುತ್ತಿದ್ದೇನೆ. ಅದ್ಯಾವುದು ವೇಸ್ಟ್​ ಆಗುವುದಿಲ್ಲ. ಒಂದಲ್ಲ ಒಂದು ಕಥೆಗೆ ಪಿಲ್ಲರ್​ ಆಗುತ್ತವೆ. ಯುದ್ಧ ಇರಲಿ ಬಿಡಲಿ ಸೈನಿಕ ಸದಾ ಸಿದ್ಧನಾಗಿರಬೇಕು. ಅದೇ ರೀತಿ ಸಿನಿಮಾ ಇರಲಿ ಬಿಡಲಿ ಕಥೆ ಬರೆಯುವ ಕೆಲಸ ನಿರಂತರ.

| ಜಯತೀರ್ಥ ನಿರ್ದೇಶಕ

ವಿಎಫ್​ಎಕ್ಸ್​ ಕೆಲಸದಲ್ಲಿ ಬಿಜಿ

"ವಿಕ್ರಾಂತ್​ ರೋಣ' ಚಿತ್ರದ ವಿಎ್​ಎಕ್ಸ್​ ಕೆಲಸ ಜಾಸ್ತಿ ಇದೆ. ಹಾಗಾಗಿ, ಅದರ ಕಡೆಗೆ ಹೆಚ್ಚು ಗಮನ ಹರಿಸಿದ್ದೆ. ನಮ್ಮದೇ ಆದ ಒಂದು ಸ್ಟ್​ಾ ವೇರ್​ ಅಭಿವೃದ್ಧಿಪಡಿಸಿ, ಅದರ ಮೂಲಕ ಸಿನಿಮಾದ ವಿಎ್​ಎಕ್ಸ್​ ಕೆಲಸ ನಡೆಯುತ್ತಿದೆ. ಒಂದು ಸಿನಿಮಾ ನಡೆಯುತ್ತಿರುವಾಗ ಮತ್ತೊಂದು ಪ್ರಾಜೆಕ್ಟ್​ ಬಗ್ಗೆ ನಾನು ಹೆಚ್ಚು ಗಮನ ಹರಿಸುವುದಿಲ್ಲ. ಆದರೆ, ಈ ನಡುವೆ ಒಂದಿಷ್ಟು ಸಣ್ಣ ಪುಟ್ಟ ಸ್ಕ್ರಿಪ್ಟ್​ ಬರೆದಿ ಟ್ಟಿದ್ದೇನೆ. ತಲೆಯಲ್ಲಿ ಹೊಳೆದಿದ್ದನ್ನು ಆಗಿಂದ್ದಾಗ್ಗೇ ಬರೆದಿಟ್ಟರೆ, ಮುಂದೆ ಉಪಯೋಗಕ್ಕೆ ಬರುತ್ತದೆ. ಈ ನಡುವೆ "ಅಶ್ವತ್ಥಾಮ' ಸ್ಕ್ರಿಪ್ಟಿಂಗ್​ನತ್ತಲೂ ಮುಖ ಮಾಡಿದ್ದೆ. ಇವೆಲ್ಲವುಗಳಲ್ಲಿ ಬಹುಪಾಲು ಸಮಯ "ವಿಕ್ರಾಂತ್​ ರೋಣ' ಮೀಸಲಿಟ್ಟಿದ್ದೆ.

| ಅನೂಪ್​ ಭಂಡಾರಿ ನಿರ್ದೇಶಕ

ವೆಬ್​ಸಿರೀಸ್​ ತಯಾರಿ

ಓದು, ಬರವಣಿಗೆ ಮಗು ಜತೆಗೆ ಆಟ.. ಹೀಗಾಗಿ ಒಂದೂವರೆ ತಿಂಗಳು ಹೋಗಿದ್ದೇ ಗೊತ್ತಾಗಿಲ್ಲ. ವೆಬ್​ಸಿರೀಸ್​ ಬರವಣಿಗೆ ಶುರುವಾಗಿದೆ. ಏನಾದರೂ ಹೊಸದನ್ನು ಔಟ್​ ಆ್​ ದಿ ಬಾಕ್ಸ್​ ಕಂಟೆಂಟ್​ ನೀಡಬೇಕೆಂದು ವೆಬ್​ಸಿರೀಸ್​ಗೆ

ಕೈ ಹಾಕಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರಬೇಕೆಂಬ ಆಸೆ ಇದೆ. ಬರವಣಿಗೆಗೆ ಅಂತಾನೇ ತಂಡ ನೇಮಿಸಿಕೊಂಡಿ ದ್ದೇನೆ. ಇತ್ತ ನನ್ನ ನಿರ್ದೇಶನದ "ರೆಮೋ' ಸಿನಿಮಾದ ಬಹುತೇಕ ಎಲ್ಲ ಕೆಲಸ ಮುಗಿದಿದೆ. ಒಡೆಯರ್​ ಬ್ಯಾನರ್​ನಲ್ಲಿ ನಿರ್ಮಾಣವಾದ "ಡೊಳ್ಳು' ಸಿನಿಮಾ ಸಿದ್ಧವಾಗಿದೆ.

| ಪವನ್​ ಒಡೆಯರ್​ ನಿರ್ದೇಶಕ

ಸಿಂಧೂರ ಲಕ್ಷ$್ಮಣನ ರಿಸರ್ಚ್​ನಲ್ಲಿ ಭಾಗಿ

ಕೈಯಲ್ಲಿರುವ ಒಂದಿಷ್ಟು ಕೆಲಸಗಳ ಜತೆಗೆ ಹೊಸ ಹೊಸ ಸ್ಕ್ರಿಪ್ಟ್​ಗಳತ್ತ ಗಮನ ಹರಿಸಿದ್ದೇನೆ. ಹೊಳೆದಿದ್ದನ್ನು ಬರೆಯುತ್ತ, ವಿಚಾರ ಸಂಗ್ರಹಿಸುವ ಕೆಲಸ ನಡೆದಿದೆ. ಎಲ್ಲವನ್ನೂ ಸ್ಕೆಲಿಟನ್​ ರೂಪದಲ್ಲಿ ಸಿದ್ಧಪಡಿಸುತ್ತಿದ್ದೇವೆ. ಅದರಲ್ಲಿ ದರ್ಶನ್​ ನಟಿಸಬೇಕಿರುವ "ವೀರ ಸಿಂಧೂರ ಲಕ್ಷ$್ಮಣ' ಚಿತ್ರವೂ ಒಂದು. ಅಷ್ಟು ಸುಲಭವಾಗಿ ಮುಗಿಯುವ ಕಥೆಯಲ್ಲ ಅದು. ಅದಕ್ಕಾಗಿಯೇ ರಿಸರ್ಚ್​ ನಡೆಯುತ್ತಿದೆ. 8-&10 ಗಂಟೆಗಾಗುವಷ್ಟು ಕಂಟೆಂಟ್​ ಇದೆ. ಆ ಮಾಹಿತಿ ಕಲೆಹಾಕುವ ಪ್ರಕ್ರಿಯೆ ನಡೆಯುತ್ತಿದೆ. "ಗುರು ಶಿಷ್ಯರು' ಸಿನಿಮಾ ಶೇ. 50 ಶೂಟಿಂಗ್​ ಆಗಿದೆ. ನನ್ನ ನಿರ್ದೇಶನ ಅಂತ ಬಂದಾಗ, ಕಥೆ ಸಿದ್ಧಪಡಿಸುವುದೇ ದೊಡ್ಡ ಕೆಲಸವಾದ್ದರಿಂದ, ಒಂದು ಗ್ಯಾಪ್​ನ ಅವಶ್ಯಕತೆ ಇದೆ. ಒಳ್ಳೊಳ್ಳೆಯ ಕಥೆ ನಮ್ಮ ಬಳಿ ಬಂದರೆ, ನಮ್ಮ ಬ್ಯಾನರ್​ನಲ್ಲಿ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ.

| ತರುಣ್​ ಸುಧೀರ್​ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net