

ಭಾರತೀಯ ಸಂಸ್ಕೃತಿಯಲ್ಲಿ ಯಾವ ರೀತಿ ವೇದವು ಸಂಸ್ಕೃತಿಯ ಆಧಾರ ಗ್ರಂಥವೋ, ಅದೇ ರೀತಿ ಸ್ಮೃತಿಗಳೂ ಸಂಸ್ಕೃತಿಯ ಆಧಾರ ಹಾಗೂ ಪ್ರಾಮಾಣಿಕ ಗ್ರಂಥಗಳಾಗಿವೆ. ಮನುವಿನ ಹೇಳಿಕೆ ಎಂದರೆ ಶ್ರುತಿ ಎಂದರೆ ವೇದ ಹಾಗೂ ಸ್ಮೃತಿ ಎಂದರೆ ಧರ್ಮಶಾಸ. ಇವೆರಡರಿಂದಲೇ ಧರ್ಮದ ಪ್ರಾದುರ್ಭಾವ. ಎಲ್ಲಾ ವಿಷಯಗಳಲ್ಲಿ ಇವುಗಳ ಪ್ರಾಮಾಣಿಕತೆಯು ತೊಡಕಿಲ್ಲದ್ದು.
ಸ್ಮೃತಿ ಗ್ರಂಥಗಳು ಭಾರತೀಯ ಆಚಾರ-ಸಂಹಿತೆಗಳು. ಮನುಷ್ಯರ ಕರ್ತವ್ಯಗಳು ಹಾಗೂ ಅಕರ್ತವ್ಯಗಳ ಬಗ್ಗೆ ಇವುಗಳಲ್ಲಿ ನಿಚ್ಚಳವಾದ ನಿರ್ದೇಶನವಿದೆ. ಸ್ಮೃತಿಗಳಲ್ಲಿ ಆಚಾರಶಿಾ, ವ್ಯವಹಾರ, ನೀತಿ, ಕರ್ಮವಿಾನ ಹಾಗೂ ಸಾಂಸತಿಕ ಜೀವನದ ಎಲ್ಲಾ ತತ್ವಗಳ ವಿಸ್ಮೃತ ವಿವೇಚನೆಯಾಗಿದೆ. ಸ್ಮೃತಿ ಗ್ರಂಥಗಳಿಲ್ಲದೆ ಕರ್ತವ್ಯ-ಅಕರ್ತವ್ಯ, ಗ್ರಾಹ್ಯ-ಅಗ್ರಾಹ್ಯ, ಧರ್ಮ-ಅಧರ್ಮ, ಪಾಪ-ಪುಣ್ಯ, ಆಚಾರ-ಅನಾಚಾರ ಇತ್ಯಾದಿಗಳ ಸರಿಯಾದ ಜ್ಞಾನವಾಗುವುದಿಲ್ಲ. ಸ್ಮೃತಿಗಳು ಒಂದು ರೀತಿಯಲ್ಲಿ ಶ್ರುತಿಗಳ ವಿಶದೀಕರಣ. ಯಾವ ತತ್ವವು ವೇದದಲ್ಲಿ ಸಂೇಪವಾಗಿ ನಿದಿರ್ಷ್ಟವೋ, ಸ್ಮೃತಿಗಳಲ್ಲದು ವಿಸತ ವಿವೇಚನೆ ಪಡೆಯುತ್ತದೆ.
ಸ್ಮೃತಿಗಳ ಉದ್ದೇಶವೆಂದರೆ - ಸಾಂಸತಿಕ ಜೀವನವನ್ನು ವಿಕಸಿಸಿ ಇಹಲೋಕ ಹಾಗೂ ಪರಲೋಕ ಎರಡನ್ನೂ ಸಿದ್ಧಪಡಿಸುವುದು. ನೈತಿಕ, ಧಾಮಿರ್ಕ, ವ್ಯಾವಹಾರಿಕ ಹಾಗೂ ಸಾಮಾಜಿಕ ಜೀವನವನ್ನು ಉನ್ನತಗೊಳಿಸುವುದು. ಯಾವುದರಿಂದ ಲೌಕಿಕ ಉನ್ನತಿ ಹಾಗೂ ಮೋದ ಪ್ರಾಪ್ತಿ ಆಗುತ್ತದೆಯೋ, ಅದನ್ನು ಧರ್ಮವೆನ್ನುತ್ತಾರೆ. ಲೌಕಿಕ ಹಾಗೂ ಪಾರಲೌಕಿಕ ಎರಡರ ಉನ್ನತಿಯ ಮಾರ್ಗವನ್ನು ಪ್ರಶಸ್ತಗೊಳಿಸುವುದು ಸ್ಮೃತಿಗಳ ಮುಖ್ಯ.
ಸಾಂಸತಿಕ ಜೀವನದ ನಾಲ್ಕು ಆಧಾರ-ಸ್ತಂಭಗಳೆಂದರೆ - ಆಚಾರ, ಧರ್ಮ, ನೈತಿಕತೆ ಹಾಗೂ ವ್ಯವಹಾರ. ಆಚಾರಸಂಹಿತೆಯಲ್ಲಿ ಸದಾಚಾರ, ಸಂಯಮ, ಅನುಶಾಸನ, ಸತ್ಯ, ಅಹಿಂಸೆ, ಪರೋಪಕಾರ, ದಾನ ಹಾಗೂ ಉದ್ಯೋಗಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಧರ್ಮವು ಆತ್ಮಿಕ ಶುದ್ಧಿಯ ಆಧಾರ. ನೈತಿಕತೆಯು ಜೀವನ ವಿಕಾಸದ ಶಿಣ ನೀಡುತ್ತದೆ. ವ್ಯವಹಾರವು ಲೋಕ-ಜೀವನದಲ್ಲಿ ಆಚರಣೆ ಯೋಗ್ಯ ಗುಣಗಳ ಸಮಾವೇಶವನ್ನು ಹೇಳುತ್ತದೆ. ಸ್ಮೃತಿಗಳು ಈ ನಾಲ್ಕು ವಿಷಯಗಳ ವಿಸತ ವಿವೇಚನೆಯನ್ನು ಪ್ರಸ್ತುತಪಡಿಸುತ್ತವೆ. ಸ್ಮೃತಿಗಳಿಂದಲೇ ಪ್ರಾಚಿನ ಭಾರತೀಯ ಸಂಸ್ಕೃತಿಯ ಸ್ಪುಟ ಜ್ಞಾನವಾಗುತ್ತದೆ. ಯಾವ ರೀತಿ ಭಾರತವು ವಿಶ್ವದಲ್ಲಿ ಪಥದರ್ಶಕ, ಪ್ರೇರಣಾ-ಸ್ರೋತವಾಗಿತ್ತು ಹಾಗೂ ಯಾವ ರೀತಿ ಭಾರತೀಯ ಸಂಸ್ಕೃತಿಯು ವಿಶ್ವವನ್ನು ಪ್ರಭಾವಿತಗೊಳಿಸಿತ್ತು ಎಂಬುದರ ಸ್ವರೂಪವು ಸ್ಮೃತಿಗಳಿಂದ ಜ್ಞಾತವಾಗುತ್ತದೆ. ಸ್ಮೃತಿಗಳಿಂದಲೇ ಪ್ರಾಚಿನ ಭಾರತದ ಆಥಿರ್ಕ, ರಾಜನೀತಿಕ, ಸಮಾಜಿಕ, ಶೈಕ್ಷಣಿಕ, ಸಾಂಸತಿಕ ಹಾಗೂ ಧಾರ್ಮಿಕ ಸ್ಥಿತಿಯ ಪೂರ್ಣ ಜ್ಞಾನವಾಗುತ್ತದೆ.
ಸ್ಮೃತಿಗಳ ಮುಖ್ಯ ಕೆಲಸ ಏನು?
ಮನುಷ್ಯರ ಪತನಕ್ಕೆ 3 ಕಾರಣಗಳಿವೆ. 1. ವಿಹಿತ ಕರ್ಮಗಳನ್ನು ಮಾಡದಿರುವುದು, 2. ನಿಂದಿತ ಕರ್ಮಗಳನ್ನು ಮಾಡುವುದು, 3. ಅಸಂಯಮ. ಪತನದ ಈ ಮೂರು ಕಾರಣಗಳ ಸಮಾಧಾನವು ಸ್ಮೃತಿಗಳ ಮುಖ್ಯ ಕೆಲಸ. ಏನು ಮಾಡಬೇಕು? ಯಾವ್ಯಾವ ನಿಯಮಗಳನ್ನು ಪಾಲಿಸಬೇಕು? ಹೀಗೆ ಸ್ಮೃತಿಗಳಲ್ಲಿ ವರ್ಣಿತ ನಿಯಮಗಳ ಪಾಲನೆ ಮಾಡಿದರೆ ಮನುಷ್ಯರ ಅಧಃಪತನವಾಗುವುದಿಲ್ಲ. ಸ್ಮೃತಿಗಳು ಆಚಾರಸಂಹಿತೆಯ ರೂಪದಲ್ಲಿ ಪ್ರಕಾಶ- ಸ್ತಂಭವಾಗಿವೆ. ಇವು ಕತ್ತಲೆಯಿಂದ ಬೆಳಕಿನತ್ತ, ಅವನತಿಯಿಂದ ಉನ್ನತಿಯತ್ತ ಹಾಗೂ ಸಂಕೋಚದಿಂದ ವಿಕಾಸದತ್ತ ಕೊಂಡೊಯ್ಯುತ್ತವೆ.