ದಶರೂಪಿ ಕಪಿಲೆ

cow
ರಕ್ತಪಿಂಗಲಾ, ಗೌರಕಬಲ
Published on

|ಉಮೇಶ್​ಕುಮಾರ್​ ಶಿಮ್ಲಡ್ಕ

ಕಪಿಲೆ ಎಂದು ಹೇಳಿದ ಕೂಡಲೇ ಗ್ರಾಮೀಣರ ಕಣ್ಣಮುಂದೆ ಗೋವಿನ ಚಿತ್ರ ಸುಳಿಯುವುದು ಸಹಜ. ಕಾರಣ ಗೋವು ಕೇಂದ್ರಿತವಾದ ಬದುಕು ಅವರದ್ದು. ಕಪಿಲೆ, ಕಪಿಲಾ ಎಂಬಿತ್ಯಾದಿ ಹೆಸರಿನಿಂದಲೂ ಗೋವುಗಳನ್ನು ಗುರುತಿಸಿ ಕರೆಯುವುದನ್ನೂ ಗಮನಿಸಿರಬಹುದು. ಇಂತಹ "ಕಪಿಲೆ'ಗೆ ಸಾಕಷ್ಟು ಮಹತ್ವ ಇದೆ.

ಪ್ರಾಚಿನ ಭಾರತದಲ್ಲಿ ಜನರ ಬದುಕು ಗೋಕೇಂದ್ರಿತವಾಗಿಯೇ ಇತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಮಹಾಭಾರತ, ರಾಮಾಯಣ, ವಿವಿಧ ಪುರಾಣ, ಗ್ರಂಥಗಳಲ್ಲಿ, ಆಯುರ್ವೇದದಲ್ಲಿ, ಗೋವಿನ ವಿಶೇಷವಾಗಿ "ಕಪಿಲೆ'ಯ ಪ್ರಾಮುಖ್ಯತೆ ವಿವರ ಲಭ್ಯವಿದೆ. ಕಾಮಧೇನು, ನಂದಿನಿ ಹೇಗೆ ಗೋವುಗಳ ಸಂಬೋಧನೆಗೆ ಪರ್ಯಾಯವಾಗಿ ಕಂಡುಬಂತೋ ಹಾಗೆಯೇ "ಕಪಿಲೆ' ಕೂಡ ಗೋವನ್ನು ಸಂಬೋಧಿಸುವ ಶಬ್ದವಾಯಿತು. ಕಪಿಲೆಯ ಮೂಲ ಹುಡುಕುವುದಾದರೆ, ಮಹಾಭಾರತದಲ್ಲಿ ಉಲ್ಲೇಖವಾಗಿರುವ ಅಂಶ ಗಮನ ಸೆಳೆಯುತ್ತದೆ. ಮನುಷ್ಯನ ಉಗಮಕ್ಕೆ ಮೊದಲೇ ಉದ್ಯಮದ ಉಗಮವಾಗಿದೆ. ಅರ್ಥಾತ್​ ಭಗವಂತ ಮನುಷ್ಯನನ್ನು ಸೃಷ್ಟಿಸುವ ಮೊದಲೇ ತನ್ನೆಲ್ಲ ತೇಜಸ್ಸನ್ನು ಏಕೀಕರಿಸಿ ಗೋವಿನ ವರ್ಗವನ್ನು ಸೃಷ್ಟಿಸಿದ್ದ. ಈ ಗೋವುಗಳು ಸಕಲರಿಗೂ ಸನ್ಮಂಗಲ ಉಂಟುಮಾಡುವಂಥವು. ಸೃಷ್ಟಿಕರ್ತನ ಮುಖದಿಂದ ಸುರಭಿ ಎಂಬ ಗೋವು ಉದಯವಾಯಿತು. ಈ ಸುರಭಿಯು ಬಂಗಾರದ ಬಣ್ಣದ ಕಪಿಲೆಗಳಿಗೆ ಜನ್ಮ ನೀಡಿತು. ಇದೇ ಗೋವುಗಳು ಜಗತ್ತಿನ ಅತಿಶ್ರೇಷ್ಠ ಗೋವುಗಳೆನಿಸಿಕೊಂಡವು. ಇಂತಹ ಕಪಿಲೆಯನ್ನು ಮಹಾಭಾರತದಲ್ಲಿ ವಣಿರ್ಸಿರುವುದು ಹೀಗೆ

"ಯಥಾಹಿ ಗಂಗಾ ಸರಿತಾಂ ವರಿಷ್ಠಾ ತಥಾರ್ಜುನೀನಾಂ ಕಪಿಲಾ ವರಿಷ್ಠಾ'ಣ

ಅಂದರೆ ನದಿಗಳ ಪೈಕಿ ಗಂಗೆ, ಗೋವುಗಳ ಪೈಕಿ ಕಪಿಲೆ ಹಿರಿಯಳು. ಈ ಧೇನುಗಳು ಮನುಷ್ಯರಿಗೆ ಜೀವನೋಪಾಯ ಒದಗಿಸಿದವು. ಇಂತಹ ಗೋವುಗಳು ಶಿವನ ಹಣೆಗಣ್ಣಿನ ತೇಜಸ್ಸಿನ ಪ್ರಭಾವಕ್ಕೆ ಒಳಗಾಗಿ 10 ಬೇರೆ ಬೇರೆ ಬಣ್ಣದ ಕಪಿಲೆಗಳಾಗಿ ಕಾಣಿಸಿಕೊಂಡವು. ಮಹಾಭಾರತದಲ್ಲಿ ಇದನ್ನು ವಿವರಿಸಿರುವುದು ಹೀಗೆ -

ಕೃಷ್ಣಶ್ಚ ಧವಲೋ ಧೂಮ್ರಃ ಕಪಿಲೋ ಲೋಹಿತಸ್ತಥಾ ಣ

ಪಂಚವರ್ಣಾ ಸಮಾಖ್ಯಾತಾ ಗವಾಂ ಅಂಗೇಶು ಲತಾಃ ಣಣ

ಏತೇಷು ದ್ವಿತ್ರಿವರ್ಣಾಂ ಚತುರ್ಣಾಮಪಿ ಮಿಶ್ರಣಾತ್​ ಣ

ಬಹುಧಾ ಚಿತ್ರವರ್ಣಾಃ ಸ್ಯುಃ ಗಾವಸ್ತಸರ್ವಾಃ ಶೋಭನಾಃ ಣಣ

ಇದನ್ನು ಆಧರಿಸಿ ಶಾಸ್ತ್ರಜ್ಞರು ನಿದಿರ್ಷ್ಟಪಡಿಸಿದ ಬಣ್ಣಗಳ ಪೈಕಿ ಗೌರಶಬಲ, ಗೌರಪಿಂಗಲ, ರಕ್ತಕಪಿಲ, ನೀಲಪಾಟಲ, ರಕ್ತ ಪಿಂಗಲ, ನೀಲಲೋಹಿತ, ಶ್ವೇತಪಿಂಗಲ, ನೀಲಪಿಂಗಲ, ಬಹುಪಿಂಗಲಗಳು ಕಪಿಲ ವರ್ಣಗಳು. ಇನ್ನು ಗೋವುಗಳ ಚರ್ಮದ ಬಣ್ಣವನ್ನಾಧರಿಸಿ ಏಳು ಕಪಿಲೆಗಳನ್ನೂ, ಅಂಗಗಳ ಮೇಲಿನ ಕಪಿಲತ್ವನ್ನು ಆಧರಿಸಿ ಗೌರ ಶಬಲಾ, ಗೌರ ಪಿಂಗಲಾ, ರಕ್ತ ಕಪಿಲಾ, ನೀಲಪಾಟಲಾ, ರಕ್ತಪಿಂಗಲಾ, ನೀಲರೋಣೀ, ಶ್ವೇತಪಿಂಗಲಾ ಇವು ಚರ್ಮದ ರೋಮಗಳ ಬಣ್ಣವನ್ನು ಆಧರಿಸಿದ ಕಪಿಲಾ ಧೇನುಗಳು. ಅದೇ ರೀತಿ ಕಣ್ಣಿನ ಕಪಿಲತ್ವವನ್ನು ಆಧರಿಸಿ ನೀಲ ಪಿಂಗಲಾ, ಬಹುಪಿಂಗಾ, ಶ್ವೇತಪಿಂಗಾ ಎಂದು ಗುರುತಿಸಲಾಗಿದೆ.

ಮಹಾಭಾರತದ ಅಶ್ವಮೇಧಿಕ ಪರ್ವದಲ್ಲೂ ಕಪಿಲಾ ಗೋವಿನ 10 ವಿಧಗಳನ್ನು ಉಲ್ಲೇಖಿಸಲಾಗಿದೆ. ಅದು ಹೀಗಿದೆ-

"ಪ್ರಥಮಾ ಸ್ವರ್ಣ ಕಪಿಲಾ ದ್ವೀತಿಯ ಗೌರ ಪಿಂಗಲಾ ಣ

ತೃತೀಯಾ ರಕ್ತಪಿಂಗಾ ಚತುರ್ಥೀ ಗಲಪಿಂಗಲಾ ಣಣ

ಪಂಚಮೀ ಬಭ್ರುವರ್ಣಾಭಾ ಷಷ್ಠೀ ಚ ಶ್ವೇತಪಿಂಗಲಾ ಣ

ಸಪ್ತಮೀ ರಕ್ತ ಪಿಂಗಾ ತ್ವಷ್ಟಮೀ ಖುರಪಿಂಗಲಾ ಣಣ

ನವಮೀ ಪಾಟಲಾ ಜ್ಞೇಯಾ ದಶಮೀ ಪುಚ್ಛಪಿಂಗಲಾ ಣ

ದಶೈತಾಃ ಕಪಿಲಾ ಪ್ರೋಕ್ತಾಃ ತಾರಯಂತಿ ನರಂ ಸದಾ ಣಣ

ಈ ಶ್ಲೋಕದಲ್ಲಿ ಕಪಿಲೆ ಮೇಲ್ನೋಟಕ್ಕೆ ಭಿನ್ನ. ಅವುಗಳೆಂದರೆ ಸ್ವರ್ಣಕಪಿಲಾ, ಗೌರಪಿಂಗಲಾ, ಅರಕ್ತಪಿಂಗಾ, ಗಲಪಿಂಗಲಾ, ಬಭ್ರುವರ್ಣಾಭಾ, ಶ್ವೇತಪಿಂಗಲಾ, ರಕ್ತಪಿಂಗಾ, ಖುರ ಪಿಂಗಲಾ, ಪಾಟಲಾ, ಪುಚ್ಛಪಿಂಗಲಾ. ಶಿವತತ್ತ್ವ ರತ್ನಾಕರ 2ನೇ ಸಂಪುಟದಲ್ಲೂ 10 ವರ್ಣದ ಕಪಿಲೆಗಳ ಉಲ್ಲೇಖವಿದೆ. ಮಹಾಭಾರತದಲ್ಲಿರುವ ಸ್ವರ್ಣ ಕಪಿಲೆ ಶಿವತತ್ತ್ವ ರತ್ನಾಕರದಲ್ಲಿ ರಕ್ತಕಪಿಲೆ. ಅರಕ್ತಪಿಂಗಾ ಕಪಿಲೆಯು ನೀಲಪಿಂಗಾ ಕಪಿಲೆೆ. ಬಭ್ರುವರ್ಣಾಭ ಕಪಿಲೆಯು ರಕ್ತಪಿಂಗಲಾ ಕಪಿಲೆೆ. ಏನೇ ವ್ಯತ್ಯಾಸವಿದ್ದರೂ 10 ವರ್ಣದ ಕಪಿಲೆಗಳಿರುವುದು ಸಾಸಿದ್ಧ ಅಂಶ.

ಕಪಿಲಾ ಗೋವಿನ ಮಹತ್ವ: ಕಪಿಲಾ ಗೋವಿನ ಮಹತ್ವವನ್ನು ಉಲ್ಲೇಖಿಸುವ ಅಂಶಗಳು, ಮಹಾಭಾರತ, ರಾಮಾಯಣ, ಆಯುರ್ವೇದ ಮತ್ತು ಇತರೆ ಗ್ರಂಥಗಳಲ್ಲಿ ಲಭ್ಯವಿದೆ. ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಹೀಗೊಂದು ಉಲ್ಲೇಖವಿದೆ - "ಕಪಿಲಾಯಾಃ ೃತೇನಾಪಿ ದಧ್ನಾ ರೇಣ ವಾ ಪುನಃ'. ಅಂದರೆ ಯಜ್ಞಕ್ಕಾಗಿ ಕಪಿಲೆ, ಕಪಿಲಾ ಗವ್ಯಕ್ಕಾಗಿ ವೃತ್ತಿ, ಅರ್ಥಾತ್​ ಕಪಿಲೆಯಿಂದ ವೃತ್ತಿ. ಇಲ್ಲಿ ವೃತ್ತಿ ಎಂಬ ಸಂಸತ ಪದ ಜೀವನೋಪಾಯ ಎಂಬ ಭಾವಾರ್ಥದಲ್ಲಿ ಬಳಕೆಯಾಗಿದೆ. ಯಜ್ಞ ಎಂಬುದು ಒಂದು ಕರ್ಮವಾದರೂ ಕರ್ಮ ಬಂಧನದ ಮೋಚಕವಾಗಿದೆ. ಯಜ್ಞ ಮಾಡುವುದಕ್ಕೆ ಅಗತ್ಯವಿರುವ ಹವಿಸ್ಸುಗಳು ಎಂದರೆ ಅಗ್ನಿಯಲ್ಲಿ ಸಮಪಿರ್ಸುವ ದ್ರವ್ಯ, ತುಪ್ಪ, ಹಾಲು, ಮೊಸರು ಇವೆಲ್ಲ ಪಡೆಯಲು ಕಪಿಲೆಯನ್ನೇ ಆಶ್ರಯಿಸಬೇಕು. ಮಹಾಭಾರತದ ಅಶ್ವಮೇಧಿಕ ಪರ್ವದ ಇನ್ನೊಂದು ಉಲ್ಲೇಖ ಹೀಗಿದೆ ನೋಡಿ - "ಸಹಸ್ರಂ ತು ಯೋ ದದ್ಯಾತ್​ ಏಕಾ ಚ ಕಪಿಲಾಂ ನರಃ'. ಶಾಸ್ತ್ರವು ದಾನ ಮಾಡುವುದಕ್ಕೆ ಅನೇಕ ಸುವಸ್ತುಗಳನ್ನು ಸೂಚಿಸುತ್ತದೆ. ಅದರಲ್ಲಿ ಗೋದಾನ ಪರಮ ಶ್ರೇಷ್ಠವಾದುದು ಮತ್ತು ಪವಿತ್ರವಾದುದು. ಗೋದಾನ ಮಾಡುವುದರಿಂದ ಪಾಪ ನಾಶವಾಗುತ್ತದೆ. ಅದರಲ್ಲೂ ಕಪಿಲಾ ವರ್ಣದ ಗೋವನ್ನು ದಾನ ಮಾಡಿದರೆ ಅಂತಹ ದಾನವು ಪರಮ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಮೇಲೆ ಹೇಳಿದ ಶ್ಲೋಕದ ಪ್ರಕಾರ, ಒಂದು ಕಪಿಲಾ ಧೇನುವನ್ನು ದಾನ ಮಾಡಿದರೆ ಸಾವಿರ ಗೋ ದಾನ ಮಾಡಿದ ಪುಣ್ಯ ಲಭಿಸುತ್ತದೆ.

ಆರೋಗ್ಯದಾತೆ ಕಪಿಲೆ: ನಾಟಿ ಹಸುವಿನ ಹಾಲು, ಗೋಮೂತ್ರ, ಗೋಮಯ ಹೀಗೆ ಪ್ರತಿಯೊಂದರೂ ಔಷಧೀಯ ಗುಣವಿದೆ ಎಂಬ ಅಂಶವನ್ನು ಗ್ರಾಮೀಣರು, ಆಯುರ್ವೇದ ಪರಿಣತರು ಪದೇಪದೆ ಹೇಳುತ್ತಿರುವುದನ್ನು ಗಮನಿಸಿರಬಹುದು. ಇತ್ತೀಚೆಗೆ ಎ2 ಹಾಲನ್ನೇ ಸೇವಿಸಬೇಕು ಎಂಬ ಪ್ರತಿಪಾದನೆಯೂ ತೀವ್ರತೆಯೂ ಹೆಚ್ಚಾಗಿದೆ. ಇದನ್ನು ಗಮನಿಸಿ ಹೇಳುವುದಾದರೆ, ನಮ್ಮ ಆಯುರ್ವೇದ ವೈದ್ಯ ಶಾಸ್ತ್ರದಲ್ಲಿ, ಪುರಾಣಗಳಲ್ಲಿ ನಾಟಿ ಹಸುವಿನ ಅದರಲ್ಲೂ ವಿಶೇಷವಾಗಿ ಕಪಿಲೆಯ ಗವ್ಯೋತ್ಪನ್ನಗಳ ಬಗ್ಗೆ ಉಲ್ಲೇಖವಾಗಿದೆ. ಇದಕ್ಕೆ ಪೂರಕ ಆಯುರ್ವೇದ ಶಾಸ್ತ್ರ ವಾಕ್ಯ ಹೀಗಿದೆ -

" ಗವಾಂ ಸಿತಾನಾಂ ವಾತ್ನಂ ಕೃಷ್ಣಾನಾಂ ಪಿತ್ತನಾಶನಂ ಣ

ಕ್ನಂ ರಕ್ತವರ್ಣಾನಾಂ ಕಪಿಲಾನಾಂ ತ್ರಿದೋಷ ನುತ್​ ಣಣ'

""ತ್ರೀನ್​ ಹಂತಿ ಕಪಿಲಾಪಯಃ'

ಬಿಳಿ ಬಣ್ಣದ ಆಕಳ ಹಾಲು ವಾತಹಾರಿ. ಕಪು$್ಪ ಬಣ್ಣದ ಹಸುವಿನ ಹಾಲು ಪಿತ್ತನಾಶಕ. ಕೆಂಪು ಬಣ್ಣದ ದನ ಹಾಲು ಕ ನಾಶಕ. ಕಪಿಲೆಯ ಹಾಲು ವಾತ, ಪಿತ್ತ, ಕ ಎಂಬ ಮೂರು ವಿಧದ ದೋಷವನ್ನು ನಿವಾರಿಸಿಕೊಡುತ್ತದೆ ಎಂಬುದು ಮೇಲಿನ ಶ್ಲೋಕದ ತಾತ್ಪರ್ಯ. ಹೀಗೆ ಕಪಿಲಾ ವರ್ಣದ ಹಸುವಿನ ಮೂಲ, ಹಿನ್ನೆಲೆ, ಧರ್ಮ-ಕರ್ಮ ಕೇಂದ್ರಬಿಂದುವಾಗಿ ಅದರ ಮಹತ್ವದ ಸಂಪ್ತ ಪರಿಚಯವಿದು. ಇದರ ವಿಸತ ಅಧ್ಯಯನಕ್ಕೆ "ಕಪಿಲಾ ದರ್ಶನ' ಪುಸ್ತಕವನ್ನು ಗಮನಿಸಬಹುದು.

ಕಪಿಲಾ ದರ್ಶನ: ದೇಸಿ ಗೋವುಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಯ ಕೆಲಸವನ್ನು ಶ್ರೀರಾಮಚಂದ್ರಾಪುರಮಠ ಮಾಡುತ್ತಿದ್ದು, ಈಗಾಗಲೇ ಒಂದಷ್ಟು ಆಕರ ಗ್ರಂಥಗಳನ್ನು ಸಂಗ್ರಹಿಸಿದೆ. ಪ್ರಾಯೋಗಿಕವಾದ ಕೆಲಸಗಳನ್ನೂ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಈ ಹಿಂದೆ "ಸದ್ಗತಿ' ಎಂಬ ಗ್ರಂಥ ಪ್ರಕಟಿಸಿ ಹೆಣ್ಣುಮಕ್ಕಳ ಪಾಲಕರ ಅಂತ್ಯವಿಧಿ ಕುರಿತಾಗಿ ಸಮಾಜದಲ್ಲಿ ಸಂಚಲನ ಮೂಡಿಸಿದ ಲೇಖಕ ಗೋಳಿಕೈ ವಿಶ್ವನಾಥ ಮಂ.ಭಟ್ಟ ಅವರು "ಕಪಿಲಾ ದರ್ಶನ' ಎಂಬ 65 ಪುಟಗಳ ಕೃತಿಯನ್ನು ರಚಿಸಿದ್ದಾರೆ. ಅದರ ಮೂಲಕ ಕಪಿಲಾ ಗೋವಿನ ನಿಜರೂಪದ ದರ್ಶನವನ್ನು ಸಮಾಜಕ್ಕೆ ಮಾಡಿಕೊಟ್ಟಿದ್ದಾರೆ. ಇದನ್ನು ಸದ್ಗತಿ ಪ್ರಕಾಶನ ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net