ಪತ್ನಿಯ ಜತೆ ದೈಹಿಕ ಸಂಪರ್ಕ ನಡೆಯದೇ ಇದ್ದರೆ ವಿಚ್ಛೇದನ ಕೊಡದೇ ಮರುವಿವಾಹವಾಗಬಹುದೆ?

nyayadevate
Published on
ನಾನು ಮದುವೆಯಾಗಿ ನಾಲ್ಕೈದು ತಿಂಗಳಾಗಿದೆ. ಆದರೆ ಪತ್ನಿಗೆ ಈ ಮದುವೆ ಇಷ್ಟವಿಲ್ಲದ ಕಾರಣ, ಒಮ್ಮೆಯೂ ಲೈಂಗಿಕ ಕ್ರಿಯೆ ನಡೆದಿಲ್ಲ. ನಂತರ ಅವಳು ಪತ್ನಿ ಮನೆಬಿಟ್ಟು ಹೋದವಳು ವಾಪಸ್‌ ಬರುವುದಿಲ್ಲ. ನಾನೇ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಲಕ್ಷಾಂತರ ರೂಪಾಯಿ ಕೇಳುತ್ತಾಳೆ. ಅದಕ್ಕೆ ಅದರ ಉಸಾಬರಿ ಬೇಡ. ಅವಳು ವಾಪಸ್‌ ಬರುವುದಿಲ್ಲ ಎಂದು ಗೊತ್ತು. ಆದ್ದರಿಂದ ನಾವು ಮದುವೆಯಾಗೋಣ ಎನ್ನುತ್ತಿದ್ದಾರೆ. ನನಗೆ ಹೆದರಿಕೆ. ಲೈಂಗಿಕ ಕ್ರಿಯೆ ನಡೆಯದಿದ್ದರಿಂದ ಡಿವೋರ್ಸ್‌ ಕೊಡದೇ ಮದುವೆಯಾದರೆ ಮುಂದೆ ತೊಂದರೆ ಅಗುತ್ತದೆಯೇ?

ಉತ್ತರ: ಮೊದಲ ವಿವಾಹದಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆ ಆಗುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ. ವಿಚ್ಛೇದನ ಪಡೆದ ನಂತರ ಮದುವೆಯಾಗಿ. ನಿಮ್ಮನ್ನು ಮದುವೆ ಆಗಲೇ ಬೇಕೆಂದಿದ್ದರೆ, ಮೊದಲ ಹೆಂಡತಿಯನ್ನು ಒಪ್ಪಿಸಿ ಅವಳಿಂದ ವಿಚ್ಛೇದನ ಪಡೆಯಲೇ ಬೇಕು. ಯಾವುದೇ ಕಾರಣಕ್ಕೂ ನೀವು ಆತುರ ಪಟ್ಟು ಅವರನ್ನು ಈಗಲೇ ಮದುವೆ ಆಗಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net