

ಉತ್ತರ: ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು , ಪ್ರಕರಣ ದಾಖಲಿಸಲು ಮತ್ತು ಪ್ರಕರಣದಲ್ಲಿ ಆದೇಶ ಕೊಡುವ ದಿನ ಪತಿ ಪತ್ನಿಯರು ಇಬ್ಬರೂ ಇರಲೇಬೇಕು.
ನಿಮ್ಮ ಪತಿ ತೀರಿಕೊಂಡ ಮೇಲೆ ವಿಚ್ಛೇದನದ ಪ್ರಕರಣ ಮುಗಿದಂತೆ. ನಿಮ್ಮ ಪತಿಯ ವಿಧವೆಯಾಗಿ, ನಿಮ್ಮ ಪತಿಯ ಆಸ್ತಿಯಲ್ಲಿ ನಿಮಗೂ, ಅವರ ತಾಯಿಗೂ ಸಮಪಾಲು ಇರುತ್ತದೆ. ನೀವು ವಿಭಾಗಕ್ಕಾಗಿ ಕೇಸು ಹಾಕಿ. ನಿಮ್ಮ ಭಾಗ ಸಿಕ್ಕೇ ಸಿಗುತ್ತದೆ.