ವಿಚ್ಛೇದನಕ್ಕೆ ಪರಸ್ಪರ ಒಪ್ಪಿ ನಂತರ ಒಬ್ಬರು ಮನಸ್ಸು ಬದಲಿಸಿದರೆ ಪರಿಹಾರವೇನು?

nyayadevate
Published on
ಪ್ರಶ್ನೆ: ಮದುವೆಯಾಗಿ ಹದಿಮೂರು ವರ್ಷಗಳಾಗಿವೆ. ಮದುವೆ ಫಲಪ್ರದವಾಗಿಲ್ಲ. ಈಗ ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ನಿರ್ಧರಿದ್ದೇವೆ, ಆದರೆ ನನ್ನ ಪತಿ ವಿದೇಶಕ್ಕೆ ಇನ್ನು ಮೂರು ತಿಂಗಳಲ್ಲಿ ಹೋಗುತ್ತಾರೆ. ಮತ್ತೆ ಬರಲು ಮೂರು ವರ್ಷ ಆಗುತ್ತದೆ. ಅವರು ಅಲ್ಲಿಗೆ ಹೋದ ಮೇಲೆ ವಿಚ್ಛೇದನ ಕೊಡುವ ನಿರ್ಧಾರವನ್ನು ಬದಲಿಸಬಹುದು ಎಂದು ಹೆದರಿಕೆ ಆಗುತ್ತಿದೆ. ಒಮ್ಮೆ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಸಹಿ ಹಾಕಿದರೆ ಮತ್ತೆ ಅವರು ಬರದೇ ಹೋದರೂ ನನಗೆ ವಿಚ್ಛೇದನ ಸಿಗುತ್ತದೆಯೇ?

ಉತ್ತರ: ಪರಸ್ಪರ ಒಪ್ಪಿಗೆಯಿಂದ ದಂಪತಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದಾಗಿನಿಂದ ನ್ಯಾಯಾಲಯ ಆದೇಶ ಮಾಡುವವರೆಗೂ ಪತಿ ಪತ್ನಿ ಇಬ್ಬರಲ್ಲೂ ವಿಚ್ಛೇದನಕ್ಕೆ ಸಮ್ಮತಿ ಇರಲೇಬೇಕು. ಈ ಮಧ್ಯಕಾಲದಲ್ಲಿ ಬೇಕಿದ್ದರೆ ಇಬ್ಬರೂ ವಿಚ್ಛೇದನಕ್ಕೆ ತಾವೇ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯಬಹುದು. ಅಥವಾ ಯಾರಾದರೂ ಒಬ್ಬರು ತಮ್ಮ ಸಮ್ಮತಿ/ಒಪ್ಪಿಗೆಯನ್ನು ಹಿಂದೆ ಪಡೆಯಬಹುದು.

ದಂಪತಿಯಲ್ಲಿ ಒಬ್ಬರು ನ್ಯಾಯಾಲಯದ ಮುಂದೆ ಕೇವಲ ಪ್ರಕರಣ ದಾಖಲಿಸಿ ಆನಂತರ ಬರದೇ ಹೋದರೆ, ಹದಿನೆಂಟು ತಿಂಗಳವರೆಗೂ ಹೆಚ್ಚು ಕಡಿಮೆ ನ್ಯಾಯಾಲಯ ಸಮಯ ಕೊಟ್ಟು ಆ ನಂತರ ಪ್ರಕರಣವನ್ನು ವಜಾಗೊಳಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಮತ್ತೊಬ್ಬರು ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಬೇರೆಯೇ ಪ್ರಕರಣ ದಾಖಲಿಸಿ ನ್ಯಾಯಾಲಯದಿಂದ ಆದೇಶ ಪಡೆಯಬೇಕಾಗುತ್ತದೆ.

(ಅಂಕಣಕಾರರು ಹಿರಿಯ ವಕೀಲೆ ಹಾಗೂ ಮಧ್ಯಸ್ಥಿಕೆದಾರರು)

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net