ಗಂಡ ಬದುಕಿರುವಾಗ ಅವನ ಸ್ವಯಾರ್ಜಿತ ಆಸ್ತಿ ಹೆಂಡತಿ, ಮಕ್ಕಳಿಗೆ ಸಿಗೋದಿಲ್ಲ...

nyayadevate
Published on
ನಾನು 50 ವರ್ಷದ ಮಹಿಳೆ. ಈಗ ಕೆಲವು ಕಾರಣಕ್ಕಾಗಿ ಗಂಡನ ಆಸ್ತಿಯನ್ನು ಪಡೆಯಲು ಬಯಸಿದ್ದೇನೆ. ಅವರು ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿ ಮತ್ತು ಮಕ್ಕಳು ಆಸ್ತಿ ಕೇಳಬಹುದಾ? ಪಿತ್ರಾರ್ಜಿತ ಆಸ್ತಿ ಕುರಿತು ಕಾನೂನು ಏನು ಹೇಳುತ್ತದೆ.

ಉತ್ತರ: ಯಾವುದೇ ಹಿಂದು ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತ ಬದುಕಿರುವಾಗ ಆತನ ಹೆಂಡತಿ ಮತ್ತು ಮಕ್ಕಳಿಗೆ ಯಾವುದೇ ಹಕ್ಕೂ ಇರುವುದಿಲ್ಲ.


ಪಿತ್ರಾರ್ಜಿತ ಆಸ್ತಿಯಲ್ಲಿ ಆತನ ಮಕ್ಕಳು (ಗಂಡು ಮತ್ತು ಹೆಣ್ಣು ಮಕ್ಕಳು) ಇಬ್ಬರಿಗೂ, ತಂದೆ ಬದುಕಿರುವಾಗಲೇ, ಭಾಗ ಕೇಳುವ ಹಕ್ಕು ಇರುತ್ತದೆ. ಆದರೆ ಆ ಹಕ್ಕು ಪತ್ನಿಗೆ ಇರುವುದಿಲ್ಲ. ಪತಿಯ ಜೀವಿತಕಾಲದಲ್ಲಿ ಆತನ ಪತ್ನಿಗೆ, ತನ್ನ ಪತಿಯಿಂದ ಜೀವನಾಂಶ ಕೇಳುವ ಹಕ್ಕು ಮಾತ್ರ ಇರುತ್ತದೆ. ಪತಿ ತೀರಿಕೊಂಡರೆ ಆತನ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ವಿಧವೆ ಪತ್ನಿ ಮತ್ತು ಮಕ್ಕಳಿಗೆ ಸಮಪಾಲು ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net