ವಿಚ್ಛೇದನ ಕೊಟ್ಟ ಮೇಲೆ ಮತ್ತೆ ಒಂದಾಗಲು ಮದ್ವೆಯಾಗಲೇಬೇಕಾ?

nyayadevate1
Published on
ಪ್ರಶ್ನೆ: ಕಳೆದ ವರ್ಷ ನನ್ನ ಮತ್ತು ಪತ್ನಿ ನಡುವೆ ಜಗಳವಾಗಿ ಡಿವೋರ್ಸ್​ ಆಗಿದೆ. ಇಬ್ಬರು ಮಕ್ಕಳಿದ್ದಾರೆ. ಡಿವೋರ್ಸ್‌ ಆಗಿ ವರ್ಷವಾಗಿದೆ. ಇದೀಗ ಪತ್ನಿ ಮಕ್ಕಳಿಗೋಸ್ಕರ ಮತ್ತೆ ಮದುವೆಯಾಗೋಣ ಎನ್ನುತ್ತಿದ್ದಾಳೆ. ನನಗೂ ಸರಿ ಎನಿಸಿದೆ, ಈಗ ಏನು ಮಾಡಬೇಕು? ಮತ್ತೆ ಮದುವೆಯಾಗಬೇಕಾ?

ಉತ್ತರ: ನೀವಿಬ್ಬರೂ ಮತ್ತೆ ಮರುಮದುವೆ ಆಗಬಹುದು. ಹಾಗೆ ಮರುಮದುವೆ ಆಗುವುದಕ್ಕೆ ಕಾನೂನಿನಲ್ಲಿ ಅಡಚಣೆ ಇಲ್ಲ. ಒಮ್ಮೆ ವಿಚ್ಛೇದನ ಮಾಡಿಕೊಂಡ ದಂಪತಿಗಳೇ ಮತ್ತೆ ಮರುಮದುವೆ ಆಗಬಹುದು. ಆ ವಿವಾಹವನ್ನು ನೋಂದಣಿ ಮಾಡಿಸಿ.

ವಿವಾಹಕ್ಕೆ ಮುಂಚೆ ವಿವಾಹ ಪೂರ್ವ ಸಮಾಲೋಚನೆಗೆ ( ಪ್ರೀ ಮರಿಟಲ್ ಕೌನ್ಸೆಲಿಂಗ್) ಇಬ್ಬರೂ ಹೋಗಿ. ಯಾವ ಕಾರಣದಿಂದ ನೀವಿಬ್ಬರೂ ವಿಚ್ಛೇದನ ಪಡೆದಿದ್ದಿರೋ ಅದೇ ವಿಷಯಕ್ಕೆ ಮತ್ತೆ ಜಗಳ ಪ್ರಾರಂಭ ಆಗಬಾರದು . ಕೇವಲ ಮಗಳ ಮೇಲೆ ಇಷ್ಟ ಎಂದು ಮದುವೆ ಆಗುವುದಕ್ಕಿಂತ ನಿಮ್ಮಿಬ್ಬರಲ್ಲಿ ಸಾಮರಸ್ಯ ಇರಬಹುದೇ ಎನ್ನುವುದರ ಬಗ್ಗೆಯೂ ಆಲೋಚಿಸಿ. ದಿನ ನಿತ್ಯ ಮಕ್ಕಳ ಮುಂದೆ ಜಗಳ ಆಡಿ ಮಕ್ಕಳ ಮನಸ್ಸಿಗೂ ನೋವಾಗದಂತಹ ವ್ಯವಸ್ಥೆಯ ಆಯ್ಕೆ ಮಾಡಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net