ಮನೆಬಿಟ್ಟು ವಿಳಾಸ ತಿಳಿಸದೇ ಗುಟ್ಟಾಗಿ ವಾಸಿಸುತ್ತಿರೋರಿಗೆ ಡಿವೋರ್ಸ್‌ ನೋಟಿಸ್‌ ಕಳಿಸೋದು ಹೇಗೆ?

nyayadevate1
Published on
ನನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಈಗ ಐದು ವರ್ಷ ಕಳೆಯುತ್ತ ಬಂದಿದೆ. ಅವಳು ಬೇರೆ ಒಬ್ಬನ ಜೊತೆ ಇದ್ದಾಳೆ. ನನಗೆ ಡಿವೋರ್ಸ್‌ ಸಹ ಕೊಡುತ್ತಿಲ್ಲ. ಎಲ್ಲಿ ಇದ್ದಾಳೆ ಅಂತ ಗೊತ್ತಿಲ್ಲ. ಈಗ ನಾನು ಡಿವೋರ್ಸ್‌ ಪಡೆಯಲು ಏನು ಮಾಡಬೇಕು?

ಉತ್ತರ: ನಿಮ್ಮ ಹೆಂಡತಿಯ ಪ್ರಸ್ತುತ /ಈಗಿನ ವಿಳಾಸವನ್ನು ಪಡೆದು ಆ ನಂತರ ನೀವು ಕಾನೂನು ಕ್ರಮ ಜರುಗಿಸುವುದು ಉತ್ತಮ. ವಿಳಾಸ ಸಿಕ್ಕಿದ ನಂತರ , ಕ್ರೂರತೆಯ ಕಾರಣ ಹಾಗೂ ನಿಮ್ಮನ್ನು ಸಕಾರಣವಿಲ್ಲದೆ ತ್ಯಜಿಸಿರುವ ಕಾರಣ ಕೊಟ್ಟು ವಿಚ್ಛೇದನಕ್ಕೆ ಪ್ರಕರಣ ದಾಖಲಿಸ ಬಹುದು.

ಒಂದು ವೇಳೆ ಆಕೆಯ ವಿಳಾಸವೇ ಸಿಗದೇ ಹೋದರೆ, ಆಕೆಯ ಕಡೆಯಬಾರಿಯ ವಾಸದ ಸ್ಥಳಕ್ಕೆ ನೋಟೀಸು ತೆಗೆದುಕೊಳ್ಳ ಬೇಕಾಗುತ್ತದೆ. ಆಗಲೂ ಆಕೆ ನ್ಯಾಯಾಲಯಕ್ಕೆ ಬರದೇ ಹೋದರೆ, ಪೇಪರ್‌ ಪಬ್ಲಿಕೇಷನ್‌ ಮೂಲಕ ನೋಟೀಸು ಕೊಡಲಾಗುತ್ತದೆ. ಆಗಲೂ ಆಕೆ ಬರದೇ ಹೋದರೆ, ನಿಮ್ಮ ವಿಚಾರಣೆ ಮಾಡಿ, ನೀವು ಹೇಳಿರುವ ಅಂಶಗಳು ಸತ್ಯ ಎನ್ನುವದನ್ನು ನೀವು ಸಾಬೀತು ಮಾಡಿದರೆ, ನ್ಯಾಯಾಲಯ ನಿಮ್ಮ ಪರವಾಗಿ ವಿಚ್ಛೇದನದ ಆದೇಶವನ್ನು ಏಕಪಕ್ಷೀಯವಾಗಿ ನಿಮಗೆ ಕೊಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net