

ಉತ್ತರ: ಸಕ್ಕರೆ ಕಾಯಿಲೆಗೂ ಮಕ್ಕಳಾಗದಿರುವುದಕ್ಕೂ ಸಂಬಂಧವಿಲ್ಲ. ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿರುವುದಕ್ಕೆ ಇದು ಕಾರಣವೂ ಆಗುವುದಿಲ್ಲ. ನಿಮ್ಮ ಮದುವೆಯಾಗಿ ನಾಲ್ಕು ವರ್ಷಗಳಾಗಿರುವುದರಿಂದ ಒಮ್ಮೆ ಇಬ್ಬರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಆದರೆ ಇಬ್ಬರೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ನಿಮಗೆ ಲೈಂಗಿಕ ಆಸಕ್ತಿ ಇಲ್ಲ ಎಂದಿರುವಿರಿ. ಇದಕ್ಕೆ ಸಕ್ಕರೆ ಕಾಯಿಲೆ ಕಾರಣವಲ್ಲ. ಈ ಬಗ್ಗೆ ನೀವು ಒಮ್ಮೆ ಕೌನ್ಸೆಲಿಂಗ್ಗೆ ಹೋಗಿ ನೋಡಿ. ಬಯಕೆ ಪರಸ್ಪರ ಗಂಡ-ಹೆಂಡಿರಲ್ಲಿ ಒಡಮೂಡಿ ದೇಹ, ಮನಸ್ಸುಗಳೆರಡೂ ಸಿದ್ಧಗೊಂಡಾಗ ಲೈಂಗಿಕ ಕ್ರಿಯೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ ತುಂಬಿದ ನೋಟ, ಸ್ಪರ್ಶ, ಮಾತುಕತೆ ಎಲ್ಲವೂ ಇದಕ್ಕೆ ಕಾರಣವಾಗುತ್ತವೆ. ಇಬ್ಬರೂ ಒಲವಿನಿಂದ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ, ಖಂಡಿತ ಮಕ್ಕಳಾಗುತ್ತವೆ.