ಕೃಷ್ಣನೀತಿ ಪ್ರಯೋಗ ಈಗ ಅಗತ್ಯ- ಹೇಗೆ? ಏಕೆ ಎಂಬುದನ್ನು ವಿವರಿಸಿದ್ದಾರೆ ಕೆ.ಎಸ್​ ನಾರಾಯಣಾಚಾರ್ಯ

Babri Masid
Published on

ಹಿಂದೂದ್ವೇಷದ ಓವೈಸಿ, ಅಬ್ದುಲ್ಲಾ, ಜಿನ್ನಾ ಇನ್ನಿತರರಿಗೆ, ಚೀನಾದ ಈಗಿನ ‘ಉಯ್ಘರ್’ ಮುಸ್ಲಿಂರ ಸ್ಥಿತಿ ಬಾರದಿರಲು ಹಿಂದೂ ಸಹಿಷ್ಣುತೆ ಕಾರಣ. ಇದು ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವಲ್ಲಿ ಅವರಿಗೆ ಭಯ! ಶಿಶುಪಾಲನ 100 ತಪು್ಪಗಳನ್ನು ಮನ್ನಿಸಿ, 101ನೆಯದಕ್ಕೆ ತಲೆಹಾರಿಸಿದ ಕೃಷ್ಣನೀತಿ ಪ್ರಯೋಗ ಈಗ ಪ್ರಸ್ತುತ.

ಅವನು ಸತ್ತದ್ದಕ್ಕೆ ದುಃಖವಿಲ್ಲ, ಬೆಳೆಸಿದ್ದ ದಾಡಿ ಸುಟ್ಟಿದ್ದಕ್ಕೆ ದುಃಖ!

ಹೀಗೊಂದು ಗಾದೆ, ನಾಣ್ಣುಡಿ ಕರ್ನಾಟಕದಲ್ಲಿ ರೂಢಿಯಲ್ಲಿದೆ. ಇದು ನೆನಪಾದ ಪ್ರಸಂಗ ಇತ್ತೀಚಿನ ಸಿಬಿಐ ಕೋರ್ಟಿನ ತೀರ್ಪ-‘ಆಡ್ವಾಣಿ ಇನ್ನಿತರರು ಬಾಬ್ರಿ ಉರುಳಿದ್ದರಲ್ಲಿ ಭಾಗಿಗಳಲ್ಲ’ ಎಂಬುದು ಹೊರಬಂದ ನಂತರ ಹೈದ್ರಾಬಾದಿನ ಓವೈಸಿ ಸಾಹೇಬರ ಪ್ರತಿಕ್ರಿಯೆ ನೋಡಿದ ನಂತರ! ಹೌದೇ? ಬಾಬ್ರಿ ಕಟ್ಟಡ ಉರುಳಿಸಿದ್ದೂ ಆಯ್ತು, ಅಲ್ಲಿ ರಾಮದೇವಾಲಯ ಇದ್ದು, ಬಾಬರ್ ಉರುಳಿಸಿದ್ದು ಸಾಧಿತವಾಯ್ತು, ರಾಮಜನ್ಮಭೂಮಿ ಹಿಂದೂಗಳ ವಶವಾಯ್ತು, ದೇವಾಲಯ ಕಟ್ಟಲು ಅನುಮತಿಯೂ ಆಗಿ, ಕಟ್ಟಡ ಕೆಲಸ ಆರಂಭವೂ ಆಯ್ತು-ಇದಾದ ಮೇಲೆ ಪ್ರಶ್ನೆ-28 ವರ್ಷ ಹಳೆಯದು. ‘ಬಾಬ್ರಿ ಕಟ್ಟಡ ಉರುಳಿಸಿದ್ದು ಸರಿಯೇ? ಅಪರಾಧಿಗಳು ಶಿಕ್ಷಿಸಲ್ಪಡಬೇಡವೇ?’ ಎಂಬ ಅಪ್ರಸ್ತುತ ಪ್ರಶಂಸಾಲಂಕಾರದ ರೀತಿಯದ್ದು! ಕಟ್ಟಡವೇ ಹೋದ ಮೇಲೆ, ಅದು ಎದ್ದದ್ದೇ ತಪು್ಪ ಎಂದಾದ ಮೇಲೆ, ಉರುಳಿದ್ದು ಸರಿಯೇ? ಎಂಬುದು ಹಾಸ್ಯಾಸ್ಪದ! ಅದಕ್ಕೇ ಗಾದೆ ನೆನಪಾದದ್ದು.

ಒಬ್ಬ ಹಿಂದೂಯೇತರ 12 ಅಡಿ ಉದ್ದದ ದಾಡಿ ಬೆಳೆಸಿದ್ದ. ಅದನ್ನು ಮುಖದ ಮೇಲೆ ಹೊರಲು ಅವನು ಎಷ್ಟು ಕಷ್ಟ ಪಟ್ಟಿರಬೇಡ! ಅದಕ್ಕೆ ಎಣ್ಣೆ, ಸುಗಂಧ ತೈಲ, ಅತ್ತೂ ಅತ್ತೂ ಸಿಂಚನ ಮಾಡಿದ ‘ಅತ್ತರು’ಎಷ್ಟು ಖರ್ಚಾಗಿರಬೇಡ! ಈಗ ಅವನು ಸತ್ತ. ಸತ್ತ ಮೇಲೆ ಇಲ್ಲಿ ಗಡ್ಡದ ಪ್ರಶ್ನೆ ಪ್ರಸ್ತುತವಾಗಬಾರದು! ಅವನೊಡನೆ ಗಡ್ಡವೂ ಹೂಳಲ್ಪಡುತ್ತದೆ! ಅವನ ಅಭಿಮಾನಿ ಹೇಳುತ್ತಾನೆ. ‘ಅಯ್ಯಯ್ಯಪ್ಪ! ಅವನು ಸತ್ತರೆ ಸಾಯಲಿ, ಅವನು ಬೆಳೆಸಿದ್ದ ಗಡ್ಡಕ್ಕೆ ಎಷ್ಟೊಂದು ಪಾಡು ಪಟ್ಟಿದ್ದು! ಅದೆಲ್ಲ ನಷ್ಟವಾಯಿತಲ್ಲ’ ಎಂಬ ರೀತಿಯ ಪ್ರಲಾಪ, ಅಪಪ್ರಲಾಪ ಆರಂಭವಾದಂತೆ, ಬಾಬ್ರಿ ಕಮಿಟಿಯ ಕಾರ್ಯದರ್ಶಿ ಜಿಲಾನಿ ಎಂಬವರೂ, ಈ ಓವೈಸಿಯೂ, ಈಗ ಅಳಲು ಆರಂಭಿಸಿದ್ದಾರೆ. ಹೈಕೋರ್ಟ್ ಮೆಟ್ಟಿಲು ಹತ್ತುತ್ತಾರಂತೆ! ಅದು ಮಜಾ! ಮಸ್ತ್ ಮಜಾ!! ಈ ಸಮುದಾಯಕ್ಕೆ ರಾಮ ದೇವಾಲಯ 10ನೇ ಶತಮಾನದ್ದನ್ನು ಬಾಬರ್ ಸೇನಾನಿ ಮೀರ್ ಬಾಕಿ ಉರುಳಿಸಿದ್ದು ತಪ್ಪಲ್ಲ! ತಪ್ಪನ್ನು ಸರಿಪಡಿಸಿದ್ದಕ್ಕೆ ಆಕ್ರೋಶ! ‘ಬಾಬ್ರಿ ಅಲ್ಲೇ ಇರಬೇಕಿತ್ತು’ ಎಂದವರು ಬಾಬರ್ ಅನುಯಾಯಿಗಳು. ಸಂದೇಹವೇ? ಇಲ್ಲೇನಾದರೂ ತರ್ಕವಿದೆಯೇ? ಆಡ್ವಾಣಿ ಇನ್ನಿತರ 31 ಗಣ್ಯರು ನಿರಪರಾಧಿಗಳೆಂದು ಕೋರ್ಟು ತೀರ್ಪು ಇತ್ತದ್ದು ಸರಿಯಿಲ್ಲವಂತೆ. ‘ಹಿಂದೂ ಮೆಜಾರಿಟಿ ಪರ ತೀರ್ಪ’ ಎಂದು ಓವೈಸಿ ಉವಾಚ.

ರಾಮಾಯಣಕ್ಕೆ ಬನ್ನಿ. ‘ಕಿಷ್ಕಿಂಧೆಯ ವಾಲಿ, ತಮ್ಮನ ಹೆಂಡತಿಯನ್ನು ಕಿತ್ತಿಟ್ಟುಕೊಂಡು ಅನುಭವಿಸಿದ್ದು, ವ್ಯಭಿಚಾರ. ಈ ಅತಿಕ್ರಮಣ, ಧರ್ಮವಿರೋಧಿ ಕಾರ್ಯ ತಪ್ಪಲ್ಲ, ಅವನನ್ನು ಶ್ರೀರಾಮ ಕೊಂದದ್ದು ತಪು್ಪ’ ಅಂತ ಇಂದಿಗೂ ಎಲ್ಲ ಎಡಪಂಥೀಯ ಕವಿವಿಮರ್ಶಕ ಕಂಠೀರವರೂ ಕನ್ನಡದಲ್ಲಿ ಏಕಪ್ರಕಾರ ಅರಚುತ್ತಿದ್ದಾರಲ್ಲ? ಇದು ಪ್ರಾಚೀನ, ಸಮಾನಾಂತರ ಉದಾಹರಣೆ. ‘ಅಣ್ಣ ಹೊಡೆದರೆ ತಪ್ಪಲ್ಲ, ಅತ್ತಿಗೆ ನಕ್ಕಿದ್ದೇ ತಪು್ಪ’ ಎಂಬ ಇನ್ನೊಂದು ಗಾದೆಯೂ ಇದೆ. ‘ಮೂಢದುರ್ಯೋಧನ ರಾಜಸೂಯ ಮಂಟಪದಲ್ಲಿ ನೀರಲ್ಲಿ ಭ್ರಮಿಸಿ ಬಿದ್ದದ್ದು, ಬಾಗಿಲಂತೆ ಕಾಣುವ ಸ್ಪಟಿಕದ ಗೋಡೆಗೆ ತಲೆ ಬಡಿದುಕೊಂಡದ್ದು ತಪ್ಪಲ್ಲ. ಅಲ್ಲಿ ದ್ರೌಪದಿ ನಕ್ಕಿದ್ದು ತಪು್ಪ’ ಎಂಬುದು ಮಹಾಭಾರತ ಯುದ್ಧಕ್ಕೆ ಕಾರಣವಾಯ್ತು. ‘ಅವನು ಬಿದ್ದಿರಬಹುದು, ಇವಳೇಕೆ ನಗಬೇಕು?’ ಎಂಬವರು ಹಾಸ್ಯಪ್ರಜ್ಞಾ ಸಂಪನ್ನರಲ್ಲ!

ಬಾಬರನನ್ನು ಇನ್ನೂ ನೆನಪಿಸುವ ರಸ್ತೆ ದೆಹಲಿಯಲ್ಲಿದೆ. ತುಗಲಖ್, ಔರಂಗಜೇಬ್, ಅಕ್ಬರ್, ಷಾ ಜಹಾನ್, ತೈಮೂರ್, ಹುಮಾಯೂನ್, ನಿಜಾಮುದ್ದೀನ್-ಈ ದಾಳಿಕೋರ ಪರಂಪರೆಯ ‘ಪವಿತ್ರ’ ‘ಶ್ರೀನಾಮ’ಗಳು ನೆಹ್ರೂ ಸಾಹೇಬರ ಕೃಪೆಯಿಂದ ದೆಹಲಿಯ ಮಾರ್ಗಗಳನ್ನು ‘ಅಲಂಕರಿಸಿವೆ’! ಇವುಗಳ ವಿಮೋಚನೆಗೆ ಮೋದಿ, ಎನ್​ಡಿಎ, ಬಿಜೆಪಿ ಯತ್ನಿಸಿದರೆ ಓವೈಸಿ ಮತ್ತೆ ಕೋರ್ಟ್ ಹತ್ತುತ್ತಾರೆ. ಅವರಿಗೆ ಸೋನಿಯಾ, ರಾಹುಲ್, ವಾದ್ರಾ, ಕಾಮ್ರೇಡರ ಕುಮ್ಮಕ್ಕು ಒತ್ತಾಸೆ ಇರುತ್ತದೆಯಾಗಿ, ಕೆಟ್ಟ ಹೆಸರು ತೊಡೆದವರೇ ಅಪರಾಧಿಗಳಾಗಿ ಬಿಡುತ್ತಾರೆ! ಈ ತಿರುವುಮುರುವನ್ನು ಕೋರ್ಟ್ ಸರಿಪಡಿಸಿದರೆ ‘ಮೆಜಾರಿಟಿಪರ’ ಎಂಬ ಬೊಬ್ಬಾಟ. ‘ಕಂಸ ರಸ್ತೆ, ಜರಾಸಂಧ ರಸ್ತೆ, ರಾವಣ ರಸ್ತೆ, ಕುಂಭಕರ್ಣ ಮಾರ್ಗ, ದುರ್ಯೋಧನ ಬಡಾವಣೆ’ ಬರುತ್ತವೆ!

ಅಬ್ಬ ಇಷ್ಟೊಂದು ಬಾಬ್ರಿ ಅಭಿಮಾನೀ, ಓವೈಸೀ ಸಾಹೇಬರ, ಪೂರ್ವರ ಪರಂಪರೆ ಏನೆಂದು ನೋಡೋಣವೇ? ಬನ್ನಿ. ಹಿಂದೆ ಮಹಾರಾಷ್ಟ್ರದಲ್ಲಿ ತುಳಸೀರಾಂ ಎಂಬ ಚಿತ್​ಪಾವನ ಬ್ರಾಹ್ಮಣ ಇದ್ದ. ಅದು ಟಿಪ್ಪೂವಿನ ಅತಿಕ್ರಮಣದ ಕಾಲ. ಆಗ ಪ್ರಾಣ ಉಳಿಸಿಕೊಳ್ಳಲು ಈತ ಕುಟುಂಬ ಸಮೇತ ಮುಸಲ್ಮಾನನಾದ. ಅವರ ಊರಿನ ಹೆಸರೇ ಓವೈಸಿ ಎಂಬುದು. ಅದನ್ನೇ ಇವರು ಅಡ್ಡಹೆಸರನ್ನಾಗಿ ಮಾಡಿಕೊಂಡರು. ತುಳಸೀರಾಂನ ಮಗನ ಹೆಸರು ಅಬ್ದುಲ್ ವಾಹಿದ್ ಓವೈಸಿ ಎಂದಾಯ್ತು. ಇವನ ಮಗ ಸುಲ್ತಾನ್ ಓವೈಸಿ ಆಗಿಬಿಟ್ಟ. ಇವರ ಸುಪುತ್ರರೇ ಈಗಿನ ಸಲಾವುದ್ದೀನ್ ಓವೈಸಿ ಹಾಗೂ ಅಸಾದುದ್ದೀನ್ ಓವೈಸಿ, ಅಂತ! ಒಂದು ದಾರಿಯಲ್ಲಿ ನಾಥುರಾಂ ಗೋಡ್ಸೆ ಇವರಿಗೆ ಕುಲಬಾಂಧವ, ಗೋತ್ರಬಂಧು. ಇವರು ಈಗ ಚಾರ್​ವಿುನಾರ್ ಎದ್ದಿರುವ ಸ್ಥಳದ ಒಂದು ಕಂಬದ ಬದಿಯಲ್ಲಿ ಮರೆಯಾಗಿರುವ ಭಾಗ್ಯಲಕ್ಷ್ಮೀ ದೇವಾಲಯದ ದೆಸೆಯಿಂದ ಹಿಂದೆ ಭಾಗ್ಯನಗರಿಯಾಗಿದ್ದ ಹೈದ್ರಾಬಾದಿನ ನಗರಾಡಳಿತವನ್ನು ಕೈಯಲ್ಲಿ ಹಿಡಿದಿರುವವರು! ಪ್ರಭಾವಶಾಲೀ, ‘ತುಳಸೀರಾಂ’ ಹೆಸರಿನ ನೆನಪೂ, ಮೂಲಸ್ಮೃತಿಯೂ ಅಳಿಸಿ, ರಾಮನ ವಿರುದ್ಧವೇ ನಿಂತ ದುರ್ದೈವಿ!

ವಿವೇಕಾನಂದರ ಮಾತು ನೆನಪಾಗುತ್ತದೆ. ‘ಮತಾಂತರಿತರು ಹಿಂದೂ ಶತ್ರುಗಳೂ ಆಗುತ್ತಾರೆ, ಅಲ್ಲೊಬ್ಬ ಹಿಂದೂವೂ ಕಡಿಮೆಯಾಗುತ್ತಾನೆ’ ಅಂತ. ಹಿಂದೂಗಳು ಇನ್ನೂ ಈ ಸತ್ಯದ ಕಡೆ ಗಮನಹರಿಸಿಲ್ಲ. ಕಾಶ್ಮೀರದ ಶೇಖ್ ಅಬ್ದುಲ್ಲಾ ಕುಟುಂಬದ ಕಥೆಯೂ ಇದೇ! ಅಲ್ಲೊಬ್ಬ ಬ್ರಾಹ್ಮಣ ರಾಘವರಾಮ ಕೌಲ್ ಎಂಬುವನಿದ್ದ! ಇಲ್ಲೂ ಒಬ್ಬ ‘ರಾಮ.’ ಹೇಗೋ ಅವನು ಮುಸಲ್ಮಾನನಾಗಿಬಿಟ್ಟ. ಅವನ ಮಗ ಶೇಖ್ ಇಬ್ರಾಹಿಂ ಅಂತ. ಇವನ ಮಗನೇ ಶೇಖ್ ಅಬ್ದುಲ್ಲಾ; ಇವನ ಸುಪುತ್ರ ಫಾರೂಖ್ ಅಬ್ದುಲ್ಲಾ; ಸಂತತಿ ಓಮರ್ ಅಬ್ದುಲ್ಲಾ, ಹೀಗೆ ಇವರ ಆಡಳಿತದಲ್ಲಿ ಹಿಂದೂಗಳ ಪರಿಸ್ಥಿತಿ ಕುರಿತು "My frozen turbulence in Kashmir' ಎಂಬ ಗ್ರಂಥದಲ್ಲಿ ಅಲ್ಲಿ ಗವರ್ನರ್ ಆಗಿದ್ದ ಜಗಮೋಹನ್ ಬರೆದಿದ್ದಾರೆ. ಈಗ ಈ ಎಲ್ಲ ಜಾತಿಭ್ರಷ್ಟ ಹಿಂದೂಗಳ, ಮತಾಂತರಿತ ಬ್ರಾಹ್ಮಣರ ಆಟಕ್ಕೆ ಮೋದಿ ಕೊನೆಹಾಡಿದ್ದಾರೆ. ಮೋದಿ ಬ್ರಾಹ್ಮಣ ಅಲ್ಲ! ರಾಮಭಕ್ತ! ಅಬ್ದುಲ್ಲಾ ಪೂರ್ವಜರು, ಓವೈಸೀ ಪೂರ್ವಜರು ರಾಮ ಹೆಸರಿನ ಬ್ರಾಹ್ಮಣರು. ಇಲ್ಲಿ ಏನು ಪಾಠ ಇದೆಯೋ ನೀವೇ ನೋಡಿಕೊಳ್ಳಿ. ಓವೈಸಿ ಸೋದರರು, ಪೊಲೀಸು, ಮಿಲಿಟರಿ ಕಣ್ಣು ಮುಚ್ಚಿದರೆ 15 ನಿಮಿಷದಲ್ಲಿ ಭಾರತವನ್ನು ಪೂರ್ಣ ಇಸ್ಲಾಮೀಕರಣ ಮಾಡುವುದಾಗಿ ಹೇಳಿದ್ದಾರೆ. ಅದು ಬಾಬರನ ಕಾಲ ಅಲ್ಲ! ಪ್ರಜಾಸತ್ತೆಯ ಹೆಸರಿನ ಇಂದಿನ ಕಾಲ!

ಜಿನ್ನಾ ಸಾಹೇಬರ ಕಥೆಯೂ ಇದೇ. ಗುಜರಾತಿನ ಪುಂಜಿಲಾಲ್ ಠಾಕೂರ್, ಹಣದಾಸೆಗೆ ಮುಸ್ಲಿಂ ಆದರು. ಪೂರ್ವಜರು ಜೀನಾಭಾಯಿ ಕುಲದ ಜೈನರು ಎಂಬ ಮಾತೂ ಇದೆ. ಬಂಗಾಳದಲ್ಲಿ ಬಹುಸಂಖ್ಯಾತರು ಇಸ್ಲಾಮೀಕರಣ ಆಗುವುದಕ್ಕೂ, ಕಾಶ್ಮೀರದಲ್ಲಿ ಇದೇ ಕಥೆಗೂ ಅದೇ ಅಂಥದೇ ಮೂಲ, ಆಧಾರ ಇದೆ. ಮೋದಿ ಮಾಡಿದ್ದೆಲ್ಲವನ್ನೂ ವಿರೋಧಿಸುವ ಕಾಂಗ್ರೆಸ್ಸು, ದ್ರಾವಿಡ ಪಕ್ಷಗಳು ಹಾಗೂ ಕಾಮ್ರೆಡರು, ಕಾಂಗ್ರೆಸ್ಸಿನ ಬೀ ಟೀಮ್ ಸಿ ಟೀಮ್ಳು, ರಾಮವೈರಿ ಮುಲಾಯಂ ಸಿಂಗ್, ಮಾಯಾವತಿ, ಮಮತಾ ಇಂಥವರು ಅಧಿಕಾರದಲ್ಲಿರುವ, ಆ ಆಸೆಯಿರುವವರ ತನಕ ಈ ಬಗೆಯ ಉಪದ್ರವಗಳು ಇದ್ದದ್ದೇ. ಮೋದಿ ಚಿರಾಯುವಾಗಿರಬೇಕು, ಅವರ ನಂತರದ ಅಂಥದೇ ನಾಯಕರು ತಯಾರಿರಬೇಕು.

ಇನ್ನೊಂದು ಬದಿಗೆ ನೋಡಿ. ನ್ಯಾ.ರಂಜನ್ ಗೊಗೋಯ್ ಅಧ್ಯಕ್ಷ ಪೀಠದ ಸುಪ್ರೀಂ, ರಾಮಜನ್ಮಭೂಮಿಯ ಹಕ್ಕನ್ನು ಹಿಂದೂಗಳಿಗೆ ಕೊಟ್ಟಿದ್ದು ಸರಿ- ಅಲ್ಲಿ ಬಾಬ್ರಿ ಕಟ್ಟಡ ಎಬ್ಬಿಸಿದ್ದವರ ಪಕ್ಷಕ್ಕೆ ಸರಯೂ ಆಚೆಗೆ ಐದು ಎಕರೆ ಕೊಟ್ಟದ್ದು, ಈ ‘ಇನಾಮು’, ಆ ದುಷ್ಕೃತ್ಯಕ್ಕೆ ಇತ್ತದ್ದು ಸರಿಯೇ? ಎಂಬ ಪ್ರಶ್ನೆಯೂ ಇದೆ. ಮುಸ್ಲಿಂ ಸಂಘಟನೆಗಳು ಮೊದಲಿಗೆ ಇದನ್ನು ‘ಈ ಕಾಫಿರರ ದಾನವನ್ನು’ ತಿರಸ್ಕರಿಸಿದ್ದವು. ಆಮೇಲೆ ಪಡೆದುಕೊಂಡರು! ಅಲ್ಲಿ ‘ಆಸ್ಪತ್ರೆಯೋ, ಸ್ಕೂಲೋ, ಲೈಬ್ರರಿಯೋ ಸಾರ್ವಜನಿಕ ಪಾಕೋ ನಿರ್ವಿುಸಿ’ ಎಂದು ಕಾಂಗ್ರೆಸ್ಸಿಗರು, ಬುದ್ಧಿಜೀವಿಗಳು ಏಕೆ ಹೇಳಿಯಾರು? ಜೈರಾಮ್ ರಮೇಶ ಎಂಬ ಕರ್ನಾಟಕ ಮೂಲದ ಮಾಜಿ ಕೇಂದ್ರ ಕಾಂಗ್ರೆಸ್ ಮಂತ್ರಿ, ಇಂಥ ಸಲಹೆಯನ್ನು ರಾಮಜನ್ಮಭೂಮಿ ಪರಿಹಾರಕ್ಕೆ ಹೇಳಿದ್ದು.

ಈಗ ಶ್ರೀ ಕೃಷ್ಣ ಜನ್ಮಭೂಮಿಯ ತಕರಾರೂ ಕೋರ್ಟು ಹತ್ತಿದೆ. ಒಂದು ಕೋರ್ಟ್ ಇದಕ್ಕೆ ನರಸಿಂಹರಾಯರ ಕಾಲದ ಸಂಸತ್ತಿನ ಠರಾವನ್ನು ಅಡ್ಡ ತೋರಿಸಿ ತಿರಸ್ಕರಿಸಿದೆ. ‘1947ರ ಪೂರ್ವದ ಯಾವುದೇ ಧಾರ್ವಿುಕ ಸ್ಥಳದ ಸ್ವರೂಪ ಬದಲಾವಣೆ ಮಾಡುವಂತಿಲ್ಲ’ ಎಂಬುದು ರಾಯರು, ಬಾಬ್ರಿ ಉರುಳಿದ ಕಾಂಗ್ರೆಸ್ಸಿನ ಆಘಾತಕರ ಸಂದರ್ಭದಲ್ಲಿ ತಂದ ತಿದ್ದುಪಡಿ- ಅದು ತುಷ್ಟೀಕರಣ ಫಲ, ಉದ್ದೇಶ್ಯದ್ದು ಇದ್ದೂ ಕಾಂಗ್ರೆಸ್ಸಿಗರಿಗೆ ರಾಯರಲ್ಲಿ ವಿಶ್ವಾಸ ಬರಲಿಲ್ಲ! ಅವರ ಶವಕ್ಕೂ ಅಗೌರವ ತೋರಿದರು. ಬಿಡಿ, ಮೋದಿ ಸರ್ಕಾರ ಆ ತಿದ್ದುಪಡಿಯನ್ನು ರದ್ದುಮಾಡುವುದು ನೂರಕ್ಕೆ ನೂರು ಸಿದ್ಧ. ರಾಮಜನ್ಮಭೂಮಿ ಸಂದರ್ಭದಲ್ಲಾದರೂ ‘ಅಲ್ಲಿ ದೇವಾಲಯ ಇತ್ತೆ?’ ಎಂಬುದು ಮಹಾಪ್ರಶ್ನೆಯಾಗಿ ಕಾಡಿತ್ತು. ಕಾಶಿ, ಮಥುರಾದಲ್ಲಿ ಮಸೀದಿ, ಈದ್ಗಾ ಕಟ್ಟಡಗಳು ಕಣ್ಣಿಗೇ ರಾಚುತ್ತವೆ! ಹೌದೆ? ಹೇಳಿ ಕೇಳಿ ಇದು ಹಿಂದೂಸ್ಥಾನ! ಇಸ್ಲಾಂ, ಈಸಾಯಿಗಳು ಹೊರಗಿಂದ ಬಂದವು. ಶಾಂತಸ್ವರೂಪದ ನಿರಾಶ್ರಿತರಾಗಿದ್ದರೆ, ಟಿಬೆಟ್​ನ ದಲೈಲಾಮಾರಂತೆ ಇಲ್ಲಿ ಗೌರವಾನ್ವಿತ ಆಶ್ರಯ ಪಡೆದು ನೆಮ್ಮದಿಯಿಂದ ಇರಲು ಬರುತ್ತಿತ್ತು. ಹಾಗಲ್ಲ! ದರ್ಬಾರು, ದೌಲತ್ತು, ಆಕ್ರಮಣಶೀಲತೆ, ಹಿಂದೂದ್ವೇಷದ ಓವೈಸಿ, ಅಬ್ದುಲ್ಲಾ, ಜಿನ್ನಾ ಇನ್ನಿತರರಿಗೆ, ಚೀನಾದ ಈಗಿನ ‘ಉಯ್ಘರ್’ ಮುಸ್ಲಿಂರ ಸ್ಥಿತಿ ಬಾರದಿರಲು ಹಿಂದೂ ಸಹಿಷ್ಣುತೆ ಕಾರಣ. ಇದು ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವಲ್ಲಿ ಅವರಿಗೆ ಭಯ! ಶಿಶುಪಾಲನ 100 ತಪು್ಪಗಳನ್ನು ಮನ್ನಿಸಿ, 101ನೆಯದಕ್ಕೆ ತಲೆಹಾರಿಸಿದ ಕೃಷ್ಣನೀತಿ ಪ್ರಯೋಗ ಈಗ ಪ್ರಸ್ತುತ. ಅಬ್ದುಲ್ಲಾ ಅವರ ಈಚಿನ ಅಪದ್ಧ ಹೇಳಿಕೆ ‘ಕಾಶ್ಮೀರವು ಹಿಂದೂ ಆಡಳಿತೆಯ ಬದಲು ಚೀನಾ ಆಡಳಿತದಲ್ಲಿ ಇದ್ದಿದ್ದರೆ ಚೆನ್ನ’ ಎಂಬ ಮಾತು, ಚೀನೀಯರಿಗೆ ಆಕ್ರಮಣಕ್ಕೆ ಪ್ರೋತ್ಸಾಹದಾಯಕವಾಗಿದೆ! ಇದು ರಾಷ್ಟ್ರದ್ರೋಹವಲ್ಲವೇ?

ಚಾಣಕ್ಯ ನೀತಿ ಹೇಳುತ್ತದೆ- ‘ಹೊರಗಿನ ಶತ್ರುಗಳಿಗಿಂತ ಒಳಗಿನವರೇ ಹೆಚ್ಚು ಭಯಂಕರ! ಬುಡಸಹಿತ ಕಿತ್ತು ಹಾಕಬೇಕು’ ಅಂತ. ನಾನು ಮೋದಿಯವರಿಗಿಂತ ಹೆಚ್ಚು ಕ್ರಿಯಾವಂತನೋ, ರಾಜನೀತಿ ಪ್ರಯೋಗಕುಶಲನೋ ಅಲ್ಲ. ಒಬ್ಬ ಹುಡುಗ, ನನ್ನ ಬಂಧು ಅಮೆರಿಕೆಯಲ್ಲಿರುತ್ತ, ಅಲ್ಲಿನ ಯುವಕ ಪಡ್ಡೆಯವರಂತೆ ಕಾಂಗ್ರೆಸ್ ಅಪಪ್ರಚಾರಕ್ಕೆ ಬಲಿಯಾಗಿ, ಹೀಗೆ ಫೋನಿನಲ್ಲಿ ಹೇಳಿದ- ‘ಮೋದಿ ದಕ್ಷಿಣ ಭಾರತವನ್ನು ಉಪೇಕ್ಷಿಸಿದ್ದಾರೆ. ಅವರ ಕೃಷಿನೀತಿ ಸರಿಯಿಲ್ಲ’ ಇತ್ಯಾದಿ. ನನ್ನ ಉತ್ತರ: ತಮಿಳುನಾಡು, ಕೇರಳ ಯಾವಾಗಲೂ ಅಭಿವೃದ್ಧಿಗೆ ಅಡ್ಡ! ಮೋದಿ ಯೋಜನೆಗಳಿಗೆ ವಿರುದ್ಧ. ತಪ್ಪು ಈ ಕಡೆ ಇದೆ. ಮೋದಿಕಡೆಯಲ್ಲ! ಜಿಎಸ್​ಟಿ ನೀತಿ, ನೋಟು ಅಮಾನ್ಯೀಕರಣ, ಕೃಷಿನೀತಿ ವಿರುದ್ಧ ಇರುವವರು ಸೋನಿಯಾ, ರಾಹುಲ್, ಇವರ ಬಳಗದವರು. ಜಗತ್ತೇ ಮೋದಿಯನ್ನು ವಿಸ್ಮಯಕಾರಿ ವ್ಯಕ್ತಿ ಎಂದೆನ್ನುತ್ತಿರುವಾಗ, ಅಸೂಯಾ ಪಡೆಯ ಸ್ವಾರ್ಥಿಗಳು ಈಗ ಎಲ್ಲಿರಬೇಕೋ ಅಲ್ಲಿದ್ದರೆ ಕ್ಷೇಮ. ಹಾಗೆ ಮಾಡಿಯೇ ಕಾಶ್ಮೀರ ದಾರಿಗೆ ಬಂದದ್ದು. ಹಾಗೆ ಮಾಡಿಯೇ ಎಲ್ಲೆಡೆ ಶಾಂತಿ, ಸುಭಿಕ್ಷೆ ಬರಬೇಕಾದ್ದು! ಆಛಿಡಿಚ್ಟಛಿ ಠಿಜಛಿ ಚ್ಞಜಛ್ಟಿ ಟ್ಛ ಚ ಟಚಠಿಜಿಛ್ಞಿಠಿ ಞಚ್ಞ ಎಂಬ ಗಾದೆ ಇದೆ. ತುಂಬ ಹೊತ್ತು ಸಹನೆಯಿದ್ದ ಒಬ್ಬನಿಗೆ ಸಹನೆ ಮೀರಿದ ಕಾಲ ಬಂದರೆ ಏನಾಗುತ್ತೆ? ಅದಕ್ಕೆ ಈಗಿನ ಬಾಬ್ರಿ ತೀರ್ಪು ಹಸಿರು ನಿಶಾನೆ ತೋರಿಸಿದಂತಿದೆ. ವರ್ತಮಾನ, ಇತಿಹಾಸದ ಅರ್ಥ ತಿಳಿಯಲೂ ಕಣ್ಣು ಬೇಕು. ಬುದ್ಧಿ ಚುರುಕು ಬೇಕು. ಇಲ್ಲದವರು ಕಣ್ಣು ಕಣ್ಣು ಬಿಡುತ್ತ ಸಾಯುವುದು ಸಾಕು. ಸಾಕೇ ಸಾಕು!.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net