ಲಂಕಿಣೀ ಭಂಜನ, ಲಂಕಾನಾಶದ ಮೊದಲ ಹೆಜ್ಜೆ

raja darma jan 13
Published on

ರಾಮಾಯಣದಲ್ಲಿ ವಾಲ್ಮೀಕಿ ವೇದಾರ್ಥವನ್ನು ಕಂಡರು, ಹುದುಗಿಸಿದರು, ಅಡಗಿಸಿದರು, ದರ್ಶನ ಕಾವ್ಯ ಮಾಡಿದರು. ದಶರಥ, ರಾಮ, ಲಕ್ಷ್ಮಣ, ಇತ್ತ ರಾವಣ, ಇಂದ್ರಜಿತ, ಮಂಡೋದರಿ, ನಡುವೆ ಶಬರಿ, ಸುಗ್ರೀವ, ತಾರೆ, ಅಂಗದ, ವಾಲಿ, ಎಲ್ಲರೂ ಇಲ್ಲಿ ದರ್ಶನ ನಿರೂಪಣೆಯ ಮುಖದ ನಾನಾ ವ್ಯಕ್ತಿಗಳು, ಅಂಶಗಳು, ಅಂಗಗಳು.

ಋಷಿದರ್ಶನದಲ್ಲಿ ಅರಿಯಬೇಕಾದ್ದು ಬಹಳ ಇರುತ್ತದೆ. ವ್ಯಾಸ, ವಾಲ್ಮೀಕಿಗಳನ್ನೇ ‘ಬೋಳಿಸುವ’ ಸಾಹಿತಿಗಳ ಇಂದಿನ ವಿಧ್ವಂಸನಶೀಲ ಬರವಣಿಗೆಗಳಲ್ಲಿ ಈ ದರ್ಶನಕ್ಕೆ ಕಣ್ಣುಪಟ್ಟಿ ಕಟ್ಟಿ ಕುರುಡಾಗಿಸುವ ಧೃತರಾಷ್ಟ್ರಸಾಹಿತ್ಯ ಹುಲುಸಾಗಿ ಬೆಳೆಯುತ್ತಿದೆ. ‘ನೆಲಿ ನೋಡದೆ ನೆಲ ಅಗೀಬೇಡ’ ಎಂದು ಬೇಂದ್ರೆಯವರು ಬರೆದರೇ ಹೊರತು ಸಿಕ್ಕಲ್ಲಿ ಅಗೆದು, ಬಗೆದು, ಬೆಂಡಾಗುವ ಸಂಶೋಧನೆಗಳಲ್ಲಿ ಏನೂ ದೊರೆಯುವುದಿಲ್ಲ ಎಂದರಲ್ಲ? ಈಗ ರಾಮಾಯಣದ ಧ್ವನಿಗಳಿಗೆ ಬರೋಣ. ರಾಮಾಯಣದಲ್ಲಿ ‘ಮಿಥ್’ ಇದೆ, ಮಿಸ್ಟಿಫಿಕೇಶನ್ ಇದೆ, ಅದನ್ನೆಲ್ಲ ಬದಿಗಿಟ್ಟು, Denude ಎಂಬಂತೆ ಬೆತ್ತಲೆ ಮಾಡಿ ನೋಡಿದರೆ ಕಾಣುವ ‘ವಾಸ್ತವ’-Objective ಎಂಬ ಪಾಂಚಭೌತಿಕ ಕಥೆಯೇ ಬೇರೆ ಎಂದೊಬ್ಬ ಕನ್ನಡ ಬೃಹಸ್ಪತಿ, ತಿರುಚಿದ ಒಂದು ಕಥೆಯನ್ನು ಬರೆದಿದ್ದಾನೆ. ಇದು ReObjective ಹೊರತು Objective ಅಲ್ಲ! ಅವರ ಕುರುಡು ಕಂಗಳಿಗೆ ಇದು ರಾಮಧರ್ಮ ವಿರುದ್ಧದ, ಸೀತಾ ಧಿಕ್ಕಾರದ, ಸ್ತ್ರೀವಾದದ, ಸ್ತ್ರೀಚಳವಳಿಯ, ಪಶ್ಚಿಮದ ಸುಂಟರಗಾಳಿಯಂತಹ, ಕುಲನಾಶಕ, ಕುಲಭೇದಕ, ಕುಟುಂಬಕಲ್ಪನೆಯ ನಾಶದ ಒಂದು ಅಧಃಪತಿತ ಅವತರಣಿಕೆ.

ಇಲ್ಲಿ ಕಾಣುವುದೇನು? ಸೀತೆಯನ್ನು ಶ್ರೀರಾಮ ಅಗ್ನಿಪರೀಕ್ಷೆಗೆ ಗುರಿ ಮಾಡಿದ್ದು ತಪು್ಪ, ಪರಿತ್ಯಾಗ ಮಾಡಿದ್ದು ತಪು್ಪ, ಸೀತೆಗೆ ಅನ್ಯಾಯವಾಯ್ತು, ರಾಮ ಜನನ ಸಂದರ್ಭ, ಧನುರ್ಭಂಜನ, ಸೇತು ನಿರ್ವಣ, ದಶಶಿರನ ಅಡಗದ ಕಾಮಪಿಪಾಸೆ, ಕುಂಭಕರ್ಣನ ನಿದ್ರೆ, ಇವೆಲ್ಲ ಕಲ್ಪನೆಗಳು. ಹನುಮಂತನ ಸಮುದ್ರಲಂಘನ ಇಂಥವೆಲ್ಲ ಮಿಥ್​ಗಳು, ಕಲ್ಪಿತ ಇತ್ಯಾದಿ. ಅರವಿಂದರು ತಮ್ಮ vyasa and valmiki ಗ್ರಂಥದ ಮುನ್ನುಡಿಯಲ್ಲಿ ಉದ್ದಕ್ಕೂ ಈ ದೃಷ್ಟಿಗೆ ಎಂದೋ ಚಿಕಿತ್ಸೆ ನೀಡಿದ್ದಾರೆ. ರಾಮಾಯಣವನ್ನು ನೋಡುವ, ಅವಶ್ಯ ನೇತ್ರೋನ್ಮೀಲನವನ್ನು ಮಾಡಿದ್ದಾರೆ. ‘ಸೃಜನಶೀಲರು’ ಓದುವುದಿಲ್ಲ. ‘ಕುಳಿತೋದದೆಯಿಂ ಪರಿಣತಿ ಮತಿಗಳ್’ ಎಂಬ ಕವಿಯ ಮಾತಿನ ವಿಡಂಬನಾರ್ಥ ಕಾಣಿರಿ! ವಿದ್ವತ್ತು, ಓದು, ಚಿಂತನ, ಪರಾಮರ್ಶೆ-ಇಂಥವು ಸೃಜನಶೀಲತೆಯನ್ನು ಹಾಳು ಮಾಡುತ್ತವೆ’ ಎಂದಾದರೆ, ಅದು ವಿಕೃತಶೀಲತೆಯೇ ಆಗಲಾರದೆ? Dr A.N.whitehead ಎಂಬ ಪಾಶ್ಚಾತ್ಯ ತತ್ತ್ವಜ್ಞಾನಿ ಬರೆಯುತ್ತಾನೆ-‘ಬರೀ ಫ್ಯಾಕ್ಟ್ ಎಂಬುದು ಇರುವುದಿಲ್ಲ. ನೀವು ಫ್ಯಾಕ್ಟ್ ಎಂದದ್ದರಲ್ಲೂ ವ್ಯಾಲು, Interpretation, ಕಾಣ್ಕೆಯ ಒಳತಿರುಳು ಕಣ್ಣು ಇದ್ದೇ ಇರುತ್ತದೆ ’ಅಂತ. ಒಂದು ದೇವರ ವಿಗ್ರಹ. ಅಲ್ಲಿ ದೇವರು, ಅವನ ಅವತಾರ, ಕರುಣೆ, ಚರಿತ್ರೆ ಇವು ನಮಗೆ ದೇವಾಲಯಕ್ಕೆ ಹೋಗುವವರಿಗೆ ಕಾಣಬೇಕು, ಕಾಣುತ್ತದೆ. ನಾಸ್ತಿಕರಿಗೆ ಬರೀ ಕಲ್ಲು ಕಾಣುತ್ತದೆ. ಇದುObjective' ಅಂತೆ ಸ್ವಾಮಿ!

ಒಂದು ನಾಗರಕಲ್ಲಿನಲ್ಲಿ ಭಕ್ತನಿಗೆ ಶೇಷ, ಅನಂತ, ಸುಬ್ರಹ್ಮಣ್ಯ, ಕಾಲಪುರುಷ ಕಾಣುತ್ತಾನೆ. ನಾಸ್ತಿಕ ಅಲ್ಲಿ ಮೂತ್ರಮಾಡುತ್ತಾನೆ, ಏಕೆ? ಅವನಿಗದು ಬರೀ ಕಲ್ಲು. ಭಾರತದ ನೆಲ ಒಬ್ಬನಿಗೆ-ನನ್ನ ನಿಮ್ಮಂತಹವರಿಗೆ ‘ಮಾತೃಭೂಮಿ’! ನಾಸ್ತಿಕನಿಗೆ ಅದು ರಿಯಲ್ ಎಸ್ಟೇಟ್ ಮಾಡುವ ಮಣ್ಣು ಮಾತ್ರ. ಅಥವಾ ಸ್ಮಶಾನ. ಅಲ್ಲೂ ವೈದಿಕನಿಗೆ ‘ರುದ್ರಭೂಮಿ’. ಬೆಂಗಳೂರಲ್ಲಿ ‘ಮುಸಲ್ಮಾನರ ರುದ್ರಭೂಮಿ’, ‘ಕ್ರೖೆಸ್ತರ ರುದ್ರಭೂಮಿ’ ಎಂತಲೇ ಬರೆಹಗಳಿವೆ. ಅವರು ನಂಬಲಿ, ಬಿಡಲಿ, ಅದೂ ‘ರುದ್ರಭೂಮಿ’ ಎಂಬಲ್ಲಿ ವ್ಯಾಲು ಇದೆ. ಬಿಟ್ಟರೆ ನೀವು ನಾಸ್ತಿಕರು! ಹೆಂಡತಿ, ಪತಿವ್ರತೆ, ಮಗನಿಗೆ ತಾಯಿ ಎಂದಾಗ ಅಲ್ಲಿ ಕೌಟುಂಬಿಕ ಮೌಲ್ಯಗಳಿರುತ್ತವೆ. ಬರೀ ಹೆಣವಲ್ಲ. ಆಸ್ಪತ್ರೆಯ ಶವವಲ್ಲ ಸ್ವಾಮಿ.

ರಾಮಾಯಣದಲ್ಲಿ ವಾಲ್ಮೀಕಿ ವೇದಾರ್ಥವನ್ನು ಕಂಡರು, ಹುದುಗಿಸಿದರು, ಅಡಗಿಸಿದರು, ದರ್ಶನ ಕಾವ್ಯ ಮಾಡಿದರು. ದಶರಥ, ರಾಮ, ಲಕ್ಷ್ಮಣ, ಇತ್ತ ರಾವಣ, ಇಂದ್ರಜಿತ, ಮಂಡೋದರಿ, ನಡುವೆ ಶಬರಿ, ಸುಗ್ರೀವ, ತಾರೆ, ಅಂಗದ, ವಾಲಿ, ಎಲ್ಲರೂ ಇಲ್ಲಿ ದರ್ಶನ ನಿರೂಪಣೆಯ ಮುಖದ ನಾನಾ ವ್ಯಕ್ತಿಗಳು, ಅಂಶಗಳು, ಅಂಗಗಳು, ಕಾಣಿರಿ. ‘ಮಾರುತಿಃ ಸಾಗರಂ ತೀರ್ಣಃ ಸಂಸಾರಮಿವ ನಿರ್ಮಮಃ’-ಹನುಮಂತನು ಸಮುದ್ರವನ್ನು ಹಾರಿದ, ಹೇಗೆ ಎಂದರೆ ‘ಮಮಕಾರ’ ಬಿಟ್ಟವನು ಸಂಸಾರವನ್ನು ಹಾರಿದಂತೆ’ ಎಂದರೆ ಅರ್ಥವಾಗುವುದಿಲ್ಲವೇ? ಈ ಲಂಘನವನ್ನು Objective ಮಾಡುತ್ತೀರಾ?

‘ನಿಮ್ಮ ಮಗ ತೆಂಗಿನ ಮರದಂತೆ ಬೆಳೆದಿದ್ದಾನೆ’ ಎಂದೊಬ್ಬ ನಿಮಗೆ ಹೇಳಿದರೆ ವಾಚ್ಯಾರ್ಥವೋ? ಉನ್ನತಾರ್ಥವೋ? ‘ಉನ್ನತಿ’ ಮುಖ್ಯಾರ್ಥ. ‘ಈ ಹುಡುಗ ಸಿಂಹ ಕಣ್ರೀ’ ಎಂದಾಗ ಪರಾಕ್ರಮ ಉದ್ದೇಶ ಹೊರತು, ಪ್ರಾಣಿ, ಬಾಲ ಇರುವವ, ಕಾಡುಮೃಗ, ಕ್ರೂರಿ ಎಂಬುದು ಅರ್ಥವಲ್ಲ. ಭಾಷೆಯಲ್ಲಿ ಅಲಂಕಾರ ಇರುತ್ತದೆ, ಧ್ವನಿ ಇರುತ್ತದೆ. what is rugged in myth want' ಎಂಬ ಮೂಢನಿಗೆ ಭಾಷೆಯ ಉನ್ನತಿಯೇ ತಿಳಿಯಲಾರದು. ಲಂಕಿಣಿಗೆ ಬನ್ನಿ. ಇವಳು ‘ಲಂಕಾಧಿದೇವತೆ’ ಎಂದು ವರ್ಣನೆ. ಲಂಕೆಯ ಜೀವ ಇವಳಲ್ಲಿತ್ತು. ಹನುಮಂತ ಅವಳನ್ನು ಭಂಜಿಸಿದ ಎಂದರೆ ಏನರ್ಥ? ಲಂಕೆಯ ಉಸಿರನ್ನೇ ನಾಶಮಾಡಿದ ಎಂತಲ್ಲವೇ? ಈಗ ನೋಡಿ, ಬಂಗಾಳದಲ್ಲಿ ಒಂದು ಇಂಥ ಸ್ತ್ರೀ ಅಧಿದೇವತೆಯೋ, ಗ್ರಾಮದೇವತೆಯೋ ಇರುವುದಾದರೆ, ರಾಮಕೃಷ್ಣ, ವಿವೇಕಾನಂದ, ಅರವಿಂದರ ಆ ಅಂದಿನ ಬಂಗಾಳದ ವಿಮೋಚನೆಗೆ, ಅಲ್ಲಿ ವಿಭೀಷಣನ ಸ್ಥಾಪನೆಗೆ, ಅಲ್ಲಿ ರಾವಣಶಕ್ತಿಯ ನಾಶಕ್ಕೆ, ರೋಹಿಂಗ್ಯಾ ವೋಟುಬ್ಯಾಂಕು ನಾಶಕ್ಕೆ, ಅಲ್ಲಿ ರಾಷ್ಟ್ರೀಯ ಶಕ್ತಿ ಪ್ರತಿಷ್ಠಾಪನೆಗೆ, ಈಗಣ ಲಂಕಿಣೀ ಭಂಜನ ಬೇಕಾಗುತ್ತದೆ. ಅದನ್ನು ಮಾಡಿದವರು ಮೋದಿ ಆದರೆ ಅಲ್ಲಿ ಹನುಮಶಕ್ತಿ ಇರುತ್ತದೆ ಎಂದಾಗುತ್ತದೆ. ಇಲ್ಲಿ ಮಿಥ್​ಗೆ ಅರ್ಥವಿಲ್ಲವೇ?

ನಿಜಕವಿಯ ಸೃಷ್ಟಿಯು ಮಿಥ್ ಮೂಲಕ ಉನ್ನತ ಸತ್ಯ ಪ್ರಕಟನೆಯೇ ಆಗಿರುತ್ತದೆ. ಬೇಡ ಎಂದರೆ ಕಾಣುವುದೇನು? ಲಂಕಿಣಿ ಒಬ್ಬಳೇ ಅಲ್ಲ. ಶೂರ್ಪಣಖಿಯೂ ತಾಟಕೆಯೂ, ಇಲ್ಲಿsymbolise ಆಗುತ್ತಾರೆ! ಅಶೋಕವನದಲ್ಲಿ ಸೀತೆಯ ಸುತ್ತ ಬರೀ ಕುರೂಪಿಗಳೇ ಇದ್ದರೆಂದು ವಾಲ್ಮೀಕಿ ಬರೆದಿದ್ದಾರಲ್ಲ? ಅದರರ್ಥ ಲಂಕೆಯಲ್ಲಿ ಬರೀ ಕುರೂಪಿಗಳೇ ಇದ್ದರೆಂದೇ? ಏನಿರಯ್ಯ? ಸುಂದರಕಾಂಡದಲ್ಲಿ ರಾವಣನ ಅಂತಃಪುರದಲ್ಲಿ ಹನುಮ ಕಂಡ ಸುಂದರ ಸ್ತ್ರೀಯರನ್ನು ಏನಂತ ಅರ್ಥೈಸುತ್ತೀರಿ? ರಾವಣನಿಗೆ ‘ಹತ್ತು ತಲೆ’ ಎಂದರೇನರ್ಥ? ಒಬ್ಬನು ಕೆಡಲು ಒಂದೇ ತಲೆ ಸಾಕಾಗಿರುವಾಗ, ಹತ್ತೂ ಅಂಥವೇ ಇದ್ದರೆ ಏನು ಗತಿ? ಶ್ರೀರಾಮ ಕತ್ತರಿಸಿಯೂ ತಲೆಗಳು ಮೊಳೆಯುತ್ತಿದ್ದವು ಎಂದರೆ, ನೆಹ್ರೂಯಿಸಂ ಹೋದರೂ ಕಾಂಗ್ರೆಸ್ಸಿನ ತಲೆಗಳು ಬೆಳೆಯುತ್ತಿರುವುದು ಕಾಣುತ್ತಿಲ್ಲವೇ? ಇಲ್ಲಿ ನಿತ್ಯಸತ್ಯ ಇರುತ್ತದೆ, ಸತ್ತ ಸುಡುಗಾಡು ತಲೆಬುರುಡೆಗಳಲ್ಲವಲ್ಲ? ಸ್ಮಶಾನದಲ್ಲೂ, ಒಬ್ಬರು ಸಮಾಧಿಯನ್ನೂ ಪೂಜಿಸುವವರು ಇದ್ದಾರಲ್ಲ, ಅಲ್ಲಿ ಅವರು ಕಾಣುವುದೇನು? ಸತ್ತವನ ಸ್ಮರಣೆಯೇ? ಹೆಣವೋ? ರಾವಣ ಸಾಯುವುದಿಲ್ಲ ಎಂದಾಗ ನನಗೆ ತಾಲಿಬಾನ್ ನೆನಪಾಗುತ್ತದೆ. ಶಂಬರಾಸುರ ನೆನಪಾಗುತ್ತಾನೆ, ಶಕುನಿ ನೆನಪಾಗುತ್ತಾನೆ, ಇದು ಅನಿವಾರ್ಯ. ಕವಿತಾ, ಕಾವ್ಯ, ನಾಟಕ, ಓದಿದ ಸುಸಂಸ್ಕೃತನಿಗೂ ಧ್ವನಿಯೂ ಸತ್ಯ. ‘ನಟ’ ಏನಾಗಿದ್ದಾನೆ? ಎಂದು ಪರದೆಯ ಹಿಂದೆ ನೋಡುವ, ಗ್ರೀನ್ ರೂಮ್ ಸತ್ಯ ನಿಮಗೆ ಏಕೆ ಬೇಕು? ಅಲ್ಲಿ ಯಾರೋ ಬೀಡಿ ಸೇದುತ್ತಾರೆ, ಕುಡಿಯುತ್ತಾರೆ, ಅದು Objective ಎಂದರೆ ನಿಮಗೆ ತಲೆ ಸರಿಯಿಲ್ಲ ಎನ್ನಬೇಕಾಗುತ್ತದೆ. ಪುಸ್ತಕದ ಪ್ರಿಂಟೆಡ್ ವರ್ಡ್​ನಲ್ಲಿ ಬರೀ ಪೇಪರ್ ಮುದ್ರಣದ ತಾರೀಖು, ವೇಳೆ ನೋಡಿದರೆ ನೀವು ಅನಕ್ಷರಸ್ಥರೂ, ‘ರದ್ದಿ’ ವ್ಯಾಪಾರಿಗಳೂ ಆಗುತ್ತೀರಿ, ಹುಷಾರ್!

ವ್ಯಾಸವಾಲ್ಮೀಕಿಗಳು ತಮ್ಮ ಕಣ್ಣುದುರೇ ಕಂಡಿದ್ದರಲ್ಲಿ ವಿಶೇಷ ಧ್ವನ್ಯರ್ಥಗಳನ್ನೂ ಕಂಡು, ತಮ್ಮ ಕೃತಿಗಳನ್ನು ದರ್ಶನ ಗ್ರಂಥವಾಗಿಸಿದರು. ಇವು ನಮಗೆ ಧರ್ಮಗ್ರಂಥಗಳು. ಬರೀ ಕಾವ್ಯಗಳಲ್ಲ. ಇಲ್ಲಿ ಕೈ ಆಡಿಸಿ ವಿರೂಪ ಮಾಡಿದರೆ, ಇದು ಧರ್ಮಭ್ರಷ್ಟತನ ಆಗುತ್ತದೆ. ಬೈಬಲ್ಲಿಗೆ, ಕುರಾನಿಗೆ ಹೀಗೆ ಮಾಡಿ ನೋಡಿ, ಬಚಾವಾಗುತ್ತೀರಾ? ನಿಮಗೂ ಗೊತ್ತು. ನಮ್ಮನ್ನೇಕೆ ಹಿಂಸಿಸುತ್ತೀರಿ? ಅಯ್ಯಾ! ವ್ಯಾಸರು ತಾವೇ ಬರೆಯಲಿಲ್ಲ. ಗಣೇಶನ ಕೈಲಿ ಬರೆಸಿದರು. ಗಣೇಶ ಹೇಳಿದ-‘ನನ್ನ ಲೇಖನಿಯನ್ನು ಕೆಳಗಿಡದ ಕೆಲಸದಂತೆ ನೀವು ಹೇಳಿದರೆ ಬರೆಯುತ್ತೇನೆ’ ಅಂತ. ವ್ಯಾಸರು ಮರು ಸವಾಲಿತ್ತರು-‘ನಾನು ಹೇಳಿದ್ದನ್ನು ಅರ್ಥಮಾಡಿಕೊಳ್ಳದೆ ಬರೆಯುವಂತಿಲ್ಲ’ ಎಂದು. ಆಗಣ ಗಣೇಶ ವಿಧೇಯ, ವಿದ್ಯಾನಿಧಿ, ವಿನಯಶೀಲ. ಹಾಗೇ ಬರೆದ. ಗಣೇಶ ಮಹಾಭಾರತವನ್ನು ಬದಲಿಸಲಿಲ್ಲ, ವ್ಯಾಖ್ಯಾನಿಸಲಿಲ್ಲ, ಅಪವ್ಯಾಖ್ಯಾನ ಮಾಡಲಿಲ್ಲ. ವ್ಯಾಸವಿಧೇಯ. ಇಂದಿನ ಕವಿವಿಮರ್ಶಕರು ಹಾಗೆ ಇಲ್ಲವಲ್ಲ? ಗಣೇಶನಿಗೆ ವ್ಯಾಸರಂತೆ ಅನುಷ್ಠಾನ, ಜಪ, ತಪ, ಮಂತ್ರಯೋಗ ಇತ್ತು. ಅವನು ಆಗ Practice ಹಿಂದೂ ಅಂತ ಪೂಜಿಸುತ್ತಾರೆ. ಇಂದಿನವರಿಗೆ ಇದೆಲ್ಲ ಇದೆಯೇ? ‘ಗಣೇಶ ಬರೆದ ಪೆನ್ ಯಾವುದು? ದಂತವಾದರೆ ಅದು ಎಷ್ಟು ಚೂಪಾಗಿತ್ತು? ಹರಿತ ಮಾಡಿದ ಆಯುಧ ಯಾವುದು? ತಾಳೇಗರಿ ಎಲ್ಲಿಯದು? ಗಂಗಾತೀರದ ಪ್ರಯಾಗದ್ದೋ? ತಮಿಳುನಾಡಿನ ರಾಮನಾಥಪುರದ್ದೋ?’ ಎಂದು ಕೇಳುವುದು Objective ಆದರೆ, ಅಯ್ಯಾ! ಇದರಿಂದ ನಿಮಗೇನು| ಕೃತಿ ಇದೆ; ಓದಿ; ದರ್ಶನಲಾಭ ಪಡೆಯಿರಿ!

ಅದು ಬಿಟ್ಟು ಕರ್ಣ ಜನನ, ಪಾಂಡವ ಜನನಗಳ ಬಗ್ಗೆ ಅಪದ್ಧರಾಗಿ ಬರೆದರೆ? ಋಷಿಮುನಿ ದೇವತೆಗಳ ಅವಹೇಳನ ಆಗುತ್ತೆ. ದೇವತೆಗಳು ಅಪ್ರಾಕೃತ ಶಕ್ತಿಗಳು.more than physical leingo ದೇವ, ಮನುಷ್ಯ, ದಾನವ, ಯಕ್ಷ, ರಾಕ್ಷಸರಲ್ಲಿ ಪಾತ್ರಧಾರಿಗಳ ಕಥೆಯ overtones ಗಳಲ್ಲಿ ಎಲ್ಲವನ್ನೂ ಮಾನವ ಪಾತಳಿಗೇಕೆ ಇಳಿಸುತ್ತೀರಿ? ಭೌತವಸ್ತುಗಳ ಅಳತೆಯೇ ಬೇರೆ Inches, meters, grams ಇಂಥವು. ಇವುಗಳಿಂದ ಬುದ್ಧಿಯನ್ನೂ, ಪ್ರೀತಿಯನ್ನೂ, ತ್ಯಾಗವನ್ನೂ, ಮುದ್ರೆಯನ್ನೂ, ಆನಂದವನ್ನೂ ಅಳೆಯುತ್ತೀರಾ? ಸಾಹೇಬ್ರೆ! ಇದು ಕೇಂಬ್ರಿಡ್ಜ್ ಸಿದ್ಧಾಂತದ ಮೂಲಪುರುಷನಾದ ಎಡ್​ಗೆನ್ ಸ್ಟೀನನ ಅವಾಂತರ! ವ್ಯಾಸರು ಕಂಡ ಕುಂತಿ, ಗಾಂಧಾರಿ, ದ್ರೌಪದಿಯರೇ ಬೇರೆ. ರಾಮಾಯಣದ ಲಂಕಿಣಿ, ತಾಟಕಿ, ಶೂರ್ಪಣಖಿಯರೇ ಬೇರೆ. ಬೆರೆಸಬೇಡಿ. ಮೌಲ್ಯಗಳಿವೆ. ಪಾಮರರನ್ನು ರಂಜಿಸುವುದು ಬೇರೆ, ಪಾಮರರ ಕಣ್ಣು ತೆರೆಸುವುದೇ ಬೇರೆ. ಅಯ್ಯಾ! ಇಂದಿನ ಲಂಕಿಣಿ, ಶೂರ್ಪಣಖೆಯರು ಭಂಜನವಾಗದೆ, ಹೊಸ ಭಾರತ ಉದಯವಾಗುವುದಿಲ್ಲ. ಅದು ಮೋದಿಯವರ ದೀಕ್ಷೆ. ಕಾಂಗ್ರೆಸ್ಸಿಗೆ ಲಂಕಿಣಿಯೂ ಬೇಕು, ರಾವಣನೂ ಬೇಕು, ಕೌರವನೂ ಬೇಕು, ಘಟೋತ್ಕಜನೂ ಬೇಕು, ಕರ್ಣನೂ ಬೇಕು. ಕಮ್ಯುನಿಸ್ಟರಿಗೆ ಅಡ್ಡಲಾಗಿರುವುದು ನಮ್ಮ ಮಹಾ ಕೃತಿಗಳ ಬೋಧೆ, ದರ್ಶನ. ಶ್ರೀಪಾದ ಢಾಂಗೆಯವರು ಒಂದು ಗೀತಾ ಭಾಷ್ಯ ಬರೆದರು. ಅಲ್ಲಿ ಶ್ರೀಕೃಷ್ಣನನ್ನು ಕಮ್ಯುನಿಷ್ಟನನ್ನಾಗಿ ತೋರಿಸುವುದು ಬೇಕಿತ್ತು. ಈ ಬಗೆಯ ತಿರುಚುಗಳಿಗೆ

ಜೆಎನ್​ಯುು ಒಂದೊಮ್ಮೆ ಪ್ರೋತ್ಸಾಹ ಇತ್ತೇ ಇಂದು ಲಂಕಿಣಿಯರ ಹೊಸ ಅವತಾರ ಆಗುತ್ತಿದೆ. ಸ್ತ್ರೀವಾದಿಗಳು-ಅರುಂಧತೀ ರಾಯ್, ಮೇಧಾ ಪಾಟ್ಕರ್, ತಿಸ್ತಾ

ಸೆಟಲ್​ವಾಡ್ ಇನ್ನಿತರ ಹಿಂದೂದ್ವೇಷಿಗಳು ಎಲ್ಲಿ ಸಲ್ಲುತ್ತಾರೆ? ಯೋಚಿಸಿ. ಭಾರತದೇಶಕ್ಕೆ ಬೆಂಕಿ ಹಚ್ಚುತ್ತಿರುವವರು ಇವರು. ಈ ಸೇನೆ ಬೆಳೆಯಬೇಕೆ? ವ್ಯಾಸ-ಗಣೇಶರು ತೀರ್ವನಿಸುತ್ತಾರೆ. ವಾಲ್ಮೀಕಿ-ಭಾರದ್ವಾಜರಿದ್ದಾರೆ. ಶ್ರೀರಾಮ-ಶ್ರೀಕೃಷ್ಣ ಇದ್ದಾನೆ. ಮೋದಿಯವರ ಕೈ ಬಲಪಡಿಸಲು ಶುದ್ಧ ಅಭಿರುಚಿಯ ಸಾಹಿತ್ಯವೂ ಬೇಕು, ಸುಧೆಯೇ ಬೇರೆ, ಸುರೆಯೇ ಬೇರೆ. ಅದು ಅಮೃತಮಥನದ ಕಥೆ-ಮಿಥ್? ತಿಳಿಯಿತೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net