

1946ರ ಫೆಬ್ರವರಿ 13ರಂದು ವಿಶ್ವಸಂಸ್ಥೆಯು ‘ಯುನೈಟೆಡ್ ನೇಷನ್ಸ್ ರೇಡಿಯೋ’ ಆರಂಭಿಸಿದ ದಿನವನ್ನೇ ‘ವಿಶ್ವ ರೇಡಿಯೋ ದಿನ’ವನ್ನಾಗಿ ಪ್ರತಿ ವರ್ಷ ಆಚರಿಸಲು ಯುನೆಸ್ಕೊ 2012ರಲ್ಲಿ ಆರಂಭಿಸಿತು. ಸ್ಪ್ಯಾನಿಷ್ ರೇಡಿಯೋ ಅಕಾಡೆಮಿ 2010ರಲ್ಲಿ ಮಾಡಿದ ಮನವಿಯ ಮೇರೆಗೆ ಯುನೆಸ್ಕೊ ಈ ನಿರ್ಧಾರ ಕೈಗೊಂಡಿತು. ಸರ್ವವ್ಯಾಪಿಯಾಗಿರುವ, ಸರ್ವಸ್ಪರ್ಶಿ ಯಾಗಿರುವ ರೇಡಿಯೋ ಈಗಲೂ ತನ್ನ ಬೇಡಿಕೆ ಕಳೆದುಕೊಂಡಿಲ್ಲ.
ನಿರಂತರ ಬದಲಾವಣೆಯ ಈ ಕಾಲದಲ್ಲೂ ಅದು ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದ್ದು ಹೇಗೆ? ಈ ಬಗ್ಗೆ ಆರ್ಜೆ ರ‍್ಯಾಪಿಡ್ ರಶ್ಮಿ ಏನು ಹೇಳ್ತಾರೆ ನೋಡಿ...
ರೇಡಿಯೋ ಒಂದು ತರಹ ಟೆನಿಸ್ ಮ್ಯಾಚ್ ಇದ್ದ ಹಾಗೆ. ಹಾಗಾಗಿ ಇದು ಹೆಚ್ಚೆಚ್ಚು ಜನರನ್ನು ರೀಚ್ ಆಗುತ್ತಿದೆ. ಮನುಷ್ಯ ಹೇಗೆ ಅಂದರೆ ಎರಡು ನಿಮಿಷಕ್ಕೊಮ್ಮೆ ಫ್ರಿಕ್ವೆನ್ಸಿ ಬದಲಾಯಿಸುತ್ತಾನೆ. ನಂತರ ಫೋನ್ನಲ್ಲಿ ಮುಳುಗಿ ಹೋಗುತ್ತಾನೆ, ಹಾಗಾಗಿ ಅವನನ್ನು ಹಿಡಿದಿಡಲು ಹೆಚ್ಚು ಕ್ರಿಯೇಟಿವ್ ಆಗಿ ಮಾತನಾಡಬೇಕು. ನಾನಾ ಸಂದರ್ಭಗಳಲ್ಲಿ ನಾವು ಅವರಿಗೆ ಸಾಂತ್ವನ ಹೇಳಿರುತ್ತೇವೆ; ಖುಷಿ ಪಡಿಸಿರುತ್ತೇವೆ; ಎಷ್ಟೋ ವಿಚಾರಗಳಿಂದಾಗಿ ಜನ ನಮ್ಮೊಂದಿಗೆ ಕನೆಕ್ಟ್ ಆಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಕೂಡ ಹೆಚ್ಚು ಸದ್ದು ಮಾಡುತ್ತಿದೆ. ಅಲ್ಲಿಯೂ ಅವರ ಜತೆ ನಾವು ರೇಡಿಯೋ ಮೂಲಕವೇ ಕನೆಕ್ಟ್ ಆಗುತ್ತೇವೆ. ಜನ ಬರೀ ಹಾಡಿಗಾಗಿ ರೇಡಿಯೋ ಕೇಳುತ್ತಾರೆ ಅನ್ನೋದು ತಪ್ಪು. ನಮ್ಮ ಮತ್ತು ಅವರ ನಡುವಿನ ಕನೆಕ್ಷನ್ನಿಂದಾಗಿ ಜನ ರೇಡಿಯೋ ಕೇಳುತ್ತಾರೆ. ಜನರ ನಾಡಿಮಿಡಿತಕ್ಕೆ ತಕ್ಕಂತೆ ನಾವು ಮಾತನಾಡುತ್ತೇವೆ. ಅದನ್ನು ಕೇಳಿ ಅವರು ನಿರಾಳರಾಗುತ್ತಾರೆ. ಪ್ರತಿ ದಿನ ಹೊಸದನ್ನು ನೀಡುತ್ತೇವೆ. ರೇಡಿಯೋ ಹೆಚ್ಚು ಕೇಳುವವರು ಕ್ಯಾಬ್ ಡ್ರೖೆವರ್ಗಳು. ಅವರ ಜತೆ ಪ್ಯಾಸೆಂಜರ್ಗಳೂ. ಬಹಳಷ್ಟು ಜನ ಶೋಗೆ ಕರೆ ಮಾಡಿ ‘ನಿಮ್ಮನ್ನು ಮಾತನಾಡಿಸಲು ಬಹಳ ದಿನಗಳಿಂದ ಟ್ರೖೆ ಮಾಡುತ್ತಿದ್ದೆ’ ಎಂದು ಹೇಳುತ್ತಾರೆ. ಇದೆಲ್ಲ ನೋಡಿದರೆ ರೇಡಿಯೋಗೆ ಎಂದಿಗೂ ಸಾವಿಲ್ಲ ಎನಿಸುತ್ತದೆ.