ರೇಡಿಯೋ ಎಂಬ ಬೆರಗಿನ ಫೀನಿಕ್ಸ್! ಕುಂದದ ಡಿಮಾಂಡ್​...

MRJ 12 Feb 20
Published on

1946ರ ಫೆಬ್ರವರಿ 13ರಂದು ವಿಶ್ವಸಂಸ್ಥೆಯು ‘ಯುನೈಟೆಡ್ ನೇಷನ್ಸ್ ರೇಡಿಯೋ’ ಆರಂಭಿಸಿದ ದಿನವನ್ನೇ ‘ವಿಶ್ವ ರೇಡಿಯೋ ದಿನ’ವನ್ನಾಗಿ ಪ್ರತಿ ವರ್ಷ ಆಚರಿಸಲು ಯುನೆಸ್ಕೊ 2012ರಲ್ಲಿ ಆರಂಭಿಸಿತು. ಸ್ಪ್ಯಾನಿಷ್ ರೇಡಿಯೋ ಅಕಾಡೆಮಿ 2010ರಲ್ಲಿ ಮಾಡಿದ ಮನವಿಯ ಮೇರೆಗೆ ಯುನೆಸ್ಕೊ ಈ ನಿರ್ಧಾರ ಕೈಗೊಂಡಿತು. ಸರ್ವವ್ಯಾಪಿಯಾಗಿರುವ, ಸರ್ವಸ್ಪರ್ಶಿ ಯಾಗಿರುವ ರೇಡಿಯೋ ಈಗಲೂ ತನ್ನ ಬೇಡಿಕೆ ಕಳೆದುಕೊಂಡಿಲ್ಲ.

ರೇಡಿಯೋ ಬಗ್ಗೆ ಆರ್​ಜೆ ಮಯೂರ ರಾಘವೇಂದ್ರ ಅವರ ಮಾತುಗಳು ಇವು...

ಇತ್ತೀಚಿನ ದಿನಗಳಲ್ಲಿ ಮನರಂಜನೆಗೆ ಸಾಕಷ್ಟು ವೇದಿಕೆಗಳು ಸೃಷ್ಟಿಯಾಗಿವೆ. ಅದರ ಮಧ್ಯೆಯೂ ರೇಡಿಯೊ ಶ್ರೋತೃಗಳ ಸಂಖ್ಯೆ ಕಮ್ಮಿ ಆಗಿಲ್ಲ. ಪ್ರತಿ ಕಾರ್ಯಕ್ರಮಕ್ಕೂ ಕೇಳುಗರಿದ್ದಾರೆ. ಜನತೆಯ ಜತೆಗೆ ನೇರವಾಗಿ ಸಂಪರ್ಕ ಸಾಧಿಸುವ ಕೆಲಸವೂ ರೇಡಿಯೊದಿಂದ ಆಗುತ್ತಿದೆ.

ಮನರಂಜನೆಯ ಜತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಮೂಲಕವೇ ಕೇಳುಗರಿಗೆ ಹತ್ತಿರವಾಗಿದ್ದೇವೆ. 2014ರಲ್ಲಿ ಚೆನ್ನೈನಲ್ಲಿ ನೆರೆಹಾವಳಿ ಸಂಭವಿಸಿದಾಗ ಸತತ 22 ದಿನ ಕ್ಯಾಂಪೇನ್ ಮಾಡಿ ಶ್ರೋತೃಗಳಿಂದ ಲಕ್ಷ ಲಕ್ಷ ಫಂಡ್ ಸಂಗ್ರಹಿಸಲಾಗಿತ್ತು. ಟನ್​ಗಟ್ಟಲೆ ಆಹಾರ ಪದಾರ್ಥ ಮತ್ತಿತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗಿತ್ತು. ಆ ಪ್ರವಾಹ ಬಂದಿದ್ದು ಡಿಸೆಂಬರ್​ನಲ್ಲಿ. ಅದು ಕ್ರಿಸ್​​ಮಸ್​ ಸಮಯ. ಹಾಗಾಗಿ, ‘ಇನ್ನೊಬ್ಬರ ಬದುಕಲ್ಲಿ ನೀವೂ ಸಾಂತಾಕ್ಲಾಸ್ ಆಗಿ’ ಎಂಬ ಅಭಿಯಾನ ಮಾಡಿದ್ದೆವು. ಅದಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿತ್ತು. ನವೆಂಬರ್ ತಿಂಗಳಲ್ಲಿ ‘ಬಿಗ್ ಕನ್ನಡಿಗ’ ಅವಾರ್ಡ್ ಕೊಡುವ ಪರಿಪಾಠವನ್ನೂ ನಾವು ನಡೆಸಿಕೊಂಡು ಬರುತ್ತಿದ್ದೇವೆ. ರಘು ದೀಕ್ಷಿತ್, ಪವನ್​ಕುಮಾರ್, ಸಾಂಗ್ಲಿಯಾನ ಮುಂತಾದವರಿಗೆ ಪ್ರಶಸ್ತಿ ನೀಡಿದ್ದೇವೆ. ‘ಸೇವ್ ದಿ ಗರ್ಲ್ ಚೈಲ್ಡ್’ ವಿಶೇಷ ಅಭಿಯಾನ ಎಲ್ಲರ ಮನಮುಟ್ಟಿತ್ತು. ವರಮಹಾಲಕ್ಷ್ಮೀ ಹಬ್ಬದ ದಿನ, ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು ಇನ್ನೊಂದು ವಿಶೇಷ. ಹೀಗೆ ಮನರಂಜನೆ ಜತೆಗೆ ಸಾಮಾಜಿಕ ಕಾಳಜಿಯಲ್ಲೂ ರೇಡಿಯೋ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net