

| ಡಾ ಕೆ.ಪಿ.ಪುತ್ತೂರಾಯ
‘ಎಲೈ ಹಣವೇ ನಿನ್ನ ಇತಿಮಿತಿಗಳ ಬಗ್ಗೆ ಗೊತ್ತಾ? ನೀನಿದ್ದಲ್ಲಿ ವೈಮನಸ್ಸು, ಕಲಹ, ವ್ಯಾಜ್ಯ, ಕಳ್ಳಕಾಕರ ಭಯ, ತೆರಿಗೆ ಅಧಿಕಾರಿಗಳ ಕಣ್ಣು. ಒಂದಿಷ್ಟು ಬಂದಾಗ ಇನ್ನಷ್ಟು ಬೇಕೆನ್ನುವ ದಾಹವನ್ನು ಹೆಚ್ಚಿಸುವ ಸ್ವಭಾವ ನಿನ್ನದು. ಜನರನ್ನು ತೃಪ್ತಿಯಾಗಿರಲು ಬಿಡಲಾರೆ. ಜನರನ್ನು ದೂರ ಮಾಡುವೆ; ನಾನಾದರೂ ಜನರನ್ನು ಹತ್ತಿರ ತರುವೆ. ನಿನ್ನ ಬಳಿ ಬರುವ ಜನರಿಗಿಂತ ನನ್ನ ಬಳಿ ಬರಲು ಇಚ್ಛಿಸುವ ಜನರೇ ಜಾಸ್ತಿ. ನಿಜ ಹೇಳಬೇಕೆಂದರೆ ಬರೇ ಹಣ ಮಾತ್ರ ಇರುವಷ್ಟು ಬಡವ ಈ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ. ಕಾರಣ ಬರೀ ನಿನ್ನ ಬಲದಿಂದ ಮಾತ್ರ ಸುಖ-ಶಾಂತಿ, ಸಂಬಂಧ-ಸಂತೋಷಗಳನ್ನು ಕೊಂಡುಕೊಳ್ಳಲಾಗದು. ಮೇಲಾಗಿ ಆರೋಗ್ಯಭಾಗ್ಯ, ಸಂತಾನಭಾಗ್ಯ, ವಿದ್ಯೆ, ಜ್ಞಾನ, ಮಿತ್ರರು, ಶಿಷ್ಯಸಂಪತ್ತ್ತು ಮುಂತಾದ ಸಂಪತ್ತುಗಳ ಎದುರು ನೀನು ಏನೂ ಇಲ್ಲ. ‘ದಾನಂ ಭೋಗೋ, ನಾಶಸ್ತಿ ಸ್ರೋಗತಯೋ ಭವಂತಿ ವಿತ್ತಸ್ವ ಯೋನ ದದಾತಿ ಭುಂಕ್ತೇ ತಸ್ಯ ತೃತೀಯಾ ಗತಿರ್ಭ ಮತಿ’ ಎಂಬಂತೆ ನಿನಗೆ, ದಾನ-ಭೋಗ-ನಾಶ ಎಂಬ ಮೂರು ಗತಿಗಳು. ತಾನೂ ಭೋಗಿಸದೆ, ದಾನವನ್ನೂ ಮಾಡದವನ ಹಣ ನಾಶವಾಗಿ ಹೋಗುತ್ತದೆ’.
ತಾತ್ಪರ್ಯವೇನೆಂದರೆ ಹಣಕ್ಕಿಂತಲೂ ಗುಣವೇ ಮೇಲು; ಗುಣವಂತಿಕೆಯ ಎದುರು ಬರೇ ಹಣವಂತಿಕೆ ಏನೂ ಅಲ್ಲ! ಹಾಗೆಂದು ಹಣವಂತಿಕೆ ಜೊತೆ ಗುಣವಂತಿಕೆಯೂ ಬೆರೆತರೆ, ಅವನಂತಹ ಶ್ರೀಮಂತ ಇನ್ನೊಬ್ಬನಿಲ್ಲ.
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)
(ಪ್ರತಿಕ್ರಿಯಿಸಿ: manollasavv@gmail.com)