

ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದನು. ಅವನ ಹೆಸರು ರಾಮು ಹಾಗೂ ಅವನ ತಂಗಿಯ ಹೆಸರು ಅನುಶ್ರೀ. ಒಂದು ದಿನ ಅವರು ಶಾಲೆಗೆ ಹೋಗಬೇಕಾದರೆ ಆ ರಸ್ತೆಯು ಮುಚ್ಚಿತ್ತು. ಅದಕ್ಕೆ ಅವರಿಬ್ಬರೂ ಮತ್ತೊಂದು ದಾರಿಯಲ್ಲಿ ಹೊರಟರು. ಶಾಲೆಯಿಂದ ಬರಬೇಕಾದರೆ ಅವರಿಗೆ ಒಂದು ಮಾವಿನ ಮರ ಕಾಣಿಸಿತು. ಆ ತೋಟದ ಮಾಲೀಕ ನಿದ್ದೆ ಮಾಡುತ್ತಿದ್ದನು. ಆಗ ಅನುಶ್ರೀ ಮಾವಿನ ಹಣ್ಣು ಬೇಕೆಂದಳು.
ಆಗ ರಾಮು ಕೆಳಗಡೆ ಬಿದ್ದಿರುವ ಕಲ್ಲುಗಳನ್ನು ಎತ್ತಿಕೊಂಡು ಮಾವಿನ ಮರಕ್ಕೆ ಹೊಡೆದನು. ಹಣ್ಣುಗಳು ಕೆಳಕ್ಕೆ ಬಿದ್ದವು. ಆ ಹಣ್ಣುಗಳನ್ನು ಕೈಚೀಲಕ್ಕೆ ತುಂಬಿಕೊಂಡು ಮನೆಗೆ ಹೋದಾಗ ಅಮ್ಮ ಕೇಳಿದಳು ಏಕೆ ನಿಮ್ಮ ಕೈ ಚೀಲ ಇಷ್ಟು ಭಾರವಾಗಿದೆ ಎಂದು. ಅದಕ್ಕೆ ರಾಮು, ಅನುಶ್ರೀ ಮಾವಿನ ಹಣ್ಣು ಬೇಕೆಂದು ಕೇಳಿದಳು ಅದಕ್ಕೆ ನಾನು ಮಾವಿನ ಮರಕ್ಕೆ ಕಲ್ಲುಗಳನ್ನು ಹೊಡೆದು ಬೀಳಿಸಿ ಮನೆಗೆ ತೆಗೆದುಕೊಂಡು ಬಂದೆವು ಎಂದನು. ಆಗ ಅಮ್ಮನಿಗೆ ತುಂಬಾ ಕೋಪ ಬಂದು ಈ ಹಣ್ಣುಗಳನ್ನು ಹಿಂತಿರುಗಿಸಿ, ತೋಟದ ಮಾಲೀಕನ ಹತ್ತಿರ ಕ್ಷಮೆ ಕೇಳಿ, ಇಲ್ಲದಿದ್ದರೆ ನಾನು ನಿಮ್ಮನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದಳು.
ರಾಮು ಮತ್ತು ಅನುಶ್ರೀ ಅಳುತ್ತಾ ಹೋಗಿ ಮಾಲೀಕನಿಗೆ ಮಾವಿನ ಹಣ್ಣುಗಳನ್ನು ಹಿಂತಿರುಗಿಸಿ ಅವರಲ್ಲಿ ಕ್ಷಮೆ ಕೇಳಿದರು. ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ ಮಾಲೀಕ ಮಾವಿನ ಹಣ್ಣನ್ನು ಕೊಟ್ಟನು. ರಾಮು ಮತ್ತು ಅನುಶ್ರೀ ಖುಷಿಯಿಂದ ಮನೆಗೆ ಹೊರಟರು.
ನೀತಿ: ತಪ್ಪನ್ನು ತಿದ್ದಿಕೊಂಡರೆ ಮುಂದೆ ಬರಬಹುದಾದ ಕಷ್ಟಗಳನ್ನು ಎದುರಿಸಬಹುದು.
| ನಮನ್ ಕಾಂತ್ ಕೆ. 3ನೇ ತರಗತಿ, ರಾಷ್ಟ್ರೆೊತ್ಥಾನ ವಿದ್ಯಾಕೇಂದ್ರ, ಬೆಂಗಳೂರು