

ತುಂಬಾ ಹಿಂದೆ ಅಂಧೇರಿನಗರದಲ್ಲಿ ಒಂದು ಬಡಕುಟುಂಬ ವಾಸಿಸುತ್ತಿತ್ತು. ಅವರಿಗೆ ಎರಡು ಹೊತ್ತು ಊಟ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ. ಅವರಿಗೆ ಇಬ್ಬರು ಮಕ್ಕಳಿದ್ದರು, ರಾಮ ಮತ್ತು ಸೋಮ. ರಾಮನಿಗೆ ಓದುವುದೆಂದರೆ ಪಂಚಪ್ರಾಣ. ಆದರೆ ಸೋಮನಿಗೆ ಫುಟ್ಬಾಲ್ ಆಡುವುದೆಂದರೆ ಇಷ್ಟ. ಆದರೆ ಆಸೆಯನ್ನು ಈಡೇರಿಸಲು ಅವರಬಳಿ ಹಣವೇ ಇರಲಿಲ್ಲ. ಆದರೆ ಅವರ ಮನೆಯಲ್ಲಿ ಬಹಳ ಪಾತ್ರೆ ಮತ್ತು ತಟ್ಟೆಗಳು ಇದ್ದವು ಅವೆಲ್ಲ ಪಾತ್ರೆಗಳು ಕಪು್ಪ ಮತ್ತು ಹಳದಿ ಬಣ್ಣದಾಗಿದ್ದವು. ಆ ಎಲ್ಲ ಪಾತ್ರೆಗಳು ಅವರು ತಂದಿದ್ದಲ್ಲ. ರಾಮ ಮತ್ತು ಸೋಮ ಮುತ್ತಜ್ಜ ತಂದಿದ್ದು.
ಒಂದು ದಿನ ಅಂಧೇರಿನಗರದಲ್ಲಿ, ಹಳೆ ಪಾತ್ರೆಗಳನ್ನು ಕೊಳ್ಳುವವನು ಬಂದ. ಆಗ ರಾಮ ಮತ್ತು ಸೋಮನ ತಂದೆ ಪಾತ್ರೆಗಳನ್ನು ಮಾರಿ ಹಣ ಪಡೆಯಲು ನಿಶ್ಚಯಿಸಿದರು. ವ್ಯಾಪಾರಿಯು ‘ನಿಮ್ಮ ಪಾತ್ರೆಗಳನ್ನು ನನಗೆ ತೋರಿಸಿ. ನಂತರ ಅದು ಎಷ್ಟು ಬೆಲೆ ಬಾಳುತ್ತದೆ ಎಂದು ಹೇಳುತ್ತೇನೆ’ ಎಂದ. ವ್ಯಾಪಾರಿ ಅವುಗಳನ್ನು ಪರೀಕ್ಷಿಸಿದ, ನೋಡಿದರೆ ಅದರ ಮೇಲಿದ್ದ ಕಪು್ಪ ಬಣ್ಣ ಹೋಗಿ ಹಳದಿ ಬಣ್ಣ ಉಳಿಯಿತು. ಆಗ ಅವುಗಳು ಚಿನ್ನದ ಪಾತ್ರೆಗಳೆಂದು ತಿಳಿಯಿತು. ಆ ವ್ಯಾಪಾರಿ ನೀತಿವಂತ ಮತ್ತು ನ್ಯಾಯವಂತನಾಗಿದ್ದರಿಂದ ಆ ಪಾತ್ರೆಗಳೆಲ್ಲ ಚಿನ್ನದ್ದು ಎಂದು ಹೇಳಿದ. ರಾಮ, ಸೋಮ ಮತ್ತು ಅವರ ತಂದೆ ತಾಯಿ ತುಂಬಾ ಖುಷಿ ಪಟ್ಟರು. ಮತ್ತು ಬಂದ ಹಣದಿಂದ ರಾಮ ಶಾಲೆಗೆ ಹೋದ ಮತ್ತು ಸೋಮ ತರಬೇತುದಾರರ ಬಳಿಗೆ ಫುಟ್ಬಾಲ್ ಕಲಿಯಲು ಹೋದ. ಅವರ ಬಳಿ ಬಹಳ ಪಾತ್ರೆಗಳಿರುವುದರಿಂದ ಆ ವ್ಯಾಪಾರಿಗೆ ಒಂದು ಚಿನ್ನದ ಪಾತ್ರೆಯನ್ನು ಉಚಿತವಾಗಿ ನೀಡಿದರು.
ನೀತಿ: ನಾವು ಯಾವಾಗಲೂ ನೀತಿವಂತರು ಮತ್ತು ನ್ಯಾಯವಂತರಾಗಿದ್ದರೆ ದೇವರು ಒಳಿತನ್ನೇ ಮಾಡುತ್ತಾನೆ.
| ಸಮರ್ಥ್