

ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.
ಬೇಕಾಗುವ ಸಾಮಗ್ರಿಗಳು: ಒಂದು ದೊಡ್ಡ ಕಟ್ಟು ಪುಂಡಿಸೊಪ್ಪು ಒಂದು ದೊಡ್ಡ ಹಿಡಿ ಒಣಮೆಣಸಿನಕಾಯಿ ಎರಡು ಚಮಚ ಮೆಂತೆಕಾಳು ಒಂದು ಚಮಚ ಸಾಸಿವೆ ಒಂದು ಚಮಚ ಜೀರಿಗೆ ಅರಿಶಿಣ ದೊಡ್ಡ ಕಪ್ ಎಣ್ಣೆ ಕರಿಬೇವು ಎರಡು ಚಮಚ ಉಪ್ಪು ಒಂದು ಚಮಚ ಉದ್ದಿನಬೇಳೆ ಮತ್ತು ಕಡ್ಲೇಬೇಳೆ.
ಮಾಡುವುದು ಹೀಗೆ: ಮೊದಲು ಪುಂಡಿಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಮೆಂತೆಕಾಳನ್ನು ಹುರಿದು ಪುಡಿ ಮಾಡಿಕೊಳ್ಳಬೇಕು. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಅದರಲ್ಲಿ ಒಣಮೆಣಸಿನಕಾಯಿ ಮತ್ತು ಕರಿಬೇವನ್ನು ಗರಿಗರಿಯಾಗುವಂತೆ ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು. ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಪುಂಡಿಸೊಪ್ಪನ್ನು ಮೆತ್ತಗಾಗುವವರೆಗೂ ಬಾಡಿಸಿಕೊಳ್ಳಬೇಕು.
ತಣ್ಣಗಾದ ನಂತರ ರುಬ್ಬಿಟ್ಟುಕೊಳ್ಳಬೇಕು. ಬಾಣಲೆೆಗೆ ಉಳಿದ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಇಂಗು, ಒಣಮೆಣಸಿನಕಾಯಿ, ಕರಿಬೇವು, ಅರಿಶಿಣ ಹಾಕಿ ಅದಕ್ಕೆ ಪುಡಿ ಮಾಡಿದ ಸಾಮಗ್ರಿ ಮತ್ತು ರುಬ್ಬಿದ ಸೊಪ್ಪನ್ನು ಹಾಕಿ. ಉಪ್ಪನ್ನು ಹಾಕಿ ಬಾಣಲೆೆಯಲ್ಲಿ ಎಣ್ಣೆ ಬಿಡುವವರೆಗೂ ಸಣ್ಣ ಉರಿಯಲ್ಲಿ ಕುದಿಸಬೇಕು. ಈ ಉಪ್ಪಿನಕಾಯಿಯನ್ನು ಎರಡು ವರ್ಷಗಳವರೆಗೆ ಇಡಬಹುದು.
| ಲತಾ ಜೋಶಿ ಬ್ಯಾಡಿಗಿ