

ಮುದ್ದೇಬಿಹಾಳ: ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಿ ಅವರನ್ನು ಪ್ರೋತ್ಸಾಹಿಸುವುದು ಬಿಇಒ ಕಚೇರಿಯ ಎಲ್ಲ ಕಾರ್ಯ ನಿರ್ವಾಹಕರ ಕರ್ತವ್ಯ ಎಂದು ಧಾರವಾಡ ಶಹರ ಬಿಇಒ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಸಂತೋಷಕುಮಾರ ವಿಜಾಪುರ ಹೇಳಿದರು.
ಪಟ್ಟಣದ ಬಿಇಒ ಕಚೇರಿಯಲ್ಲಿ ಇತ್ತೀಚಿಗೆ ತಪಾಸಣೆ ಕಾರ್ಯನಿರ್ವಹಿಸಿದ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಸುಮಾರು 1,100ಕ್ಕೂ ಹೆಚ್ಚಿನ ಶಿಕ್ಷಕರ ಸೇವಾ ಪುಸ್ತಕಗಳನ್ನು ಹಾಗೂ ಕಚೇರಿಯ ಇತರೆ ಕಡತಗಳನ್ನು ಪರಿಶೀಲಿಸಿದ ಅಧಿಕಾರಿಗಳು ಬಿಇಒ ಕಚೇರಿಯ ಸಿಬ್ಬಂದಿಗೆ ಹೆಚ್ಚಿನ ಮಾರ್ಗದರ್ಶನ ಮಾಡಿ ಶಿಕ್ಷಕರಿಗೆ ಪಾಠ ಬೋಧನೆಯಲ್ಲಿ ಪ್ರೋತ್ಸಾಹಿಸುವಂತೆ ಶಿಕ್ಷಕರ ಸೇವೆಗಳನ್ನು ಮಾಡಲು ಸಲಹೆ ಮಾಡಿದರು.
ನೋಡಲ್ ಅಧಿಕಾರಿ ಎಚ್.ಎ. ಮೇಟಿ, ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಸಿಬ್ಬಂದಿ ರಮೇಶ ಕಿಲ್ಲಾರಿ, ವಿರೇಶ ಹರಕುಣಿ, ಕಲಂದರ ಆರುಗೇರಿ ಹಾಗೂ ಬಿಇಒ ಕಚೇರಿಯ ಪತ್ರಾಕಿಂತ ವ್ಯವಸ್ಥಾಪಕ ಎಸ್.ಬಿ. ಪಾಟೀಲ, ಅಧೀಕ್ಷಕ ಪಿ.ಎಸ್. ಕಂಠಿ, ಎಸ್.ಸಿ. ಹಿರೇಮಠ, ರಘುವೀರ ಹೂಲಗೇರಿ, ಎಸ್.ಆರ್. ಪಾಟೀಲ, ರೇಷ್ಮಾ ಅಣ್ಣಿಗೇರಿ, ಆನಂದಕುಮಾರ ಓಕಳಿ, ಎಸ್.ಜಿ. ಕಳ್ಳಿಗುಡ್ಡ ಇದ್ದರು. ಕಚೇರಿ ತಪಾಸಣೆ ಕಾರ್ಯನಿರ್ವಹಿಸಿದ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.