

ಒಂದು ಊರಿನಲ್ಲಿ ಎರಡು ಇಲಿಗಳು ವಾಸವಾಗಿದ್ದವು. ಒಂದು ಇಲಿಯ ಹೆಸರು ಸೋಮು ಹಾಗೂ ಇನ್ನೊಂದು ದಾಮು. ದಾಮುವಿಗೆ ಇಡೀ ದಿವಸ ತಿನ್ನುತ್ತಿರಬೇಕು. ಒಂದು ದಿನ ಸೋಮು ಹಾಗೂ ದಾಮು ತಿನ್ನಲು ಏನಾದರೂ ಸಿಗುತ್ತದೆಯೇ ಎಂದು ಹುಡುಕುತ್ತಾ ಹೊರಟವು. ಆಗ ಒಂದು ಮನೆಯಲ್ಲಿ ಲಡ್ಡುವಿನ ಪರಿಮಳ ಬರುತ್ತಿತ್ತು. ಎರಡೂ ಇಲಿಗಳು ಮನೆಯೊಳಗೆ ನುಗ್ಗಿದವು.
ಆ ಮನೆಯಲ್ಲಿ ಒಂದು ದೊಡ್ಡ ಪಾತ್ರೆಯೊಳಗೆ ಲಡ್ಡುಗಳು ಇದ್ದವು. ಎರಡೂ ಇಲಿಗಳು ಲಡ್ಡುವಿನ ಪಾತ್ರೆಯೊಳಗೆ ಹಾರಿದವು. ಸೋಮು ನಾಲ್ಕು ಲಡ್ಡುಗಳನ್ನು ತಿಂದು ಪಾತ್ರೆ ಒಳಗಿನಿಂದ ಮೇಲಕ್ಕೆ ಹಾರಿತು. ದಾಮುವಿಗೆ ಎಷ್ಟು ತಿಂದರೂ ಸಾಕಾಗುತ್ತಿರಲಿಲ್ಲ ತಿಂದು ತಿಂದುಮೇಲಕ್ಕೇರಲು ಆಗಲಿಲ್ಲ. ಮನೆಯ ಕೆಲಸದವಳು ದಾಮು ಲಡ್ಡುಗಳನ್ನು ತಿನ್ನುವುದನ್ನು ನೋಡಿ ಅಲ್ಲೇ ಹತ್ತಿರದಲ್ಲಿದ್ದ ದೊಣ್ಣೆಯಿಂದ ದಾಮುವಿನ ತಲೆಗೆ ಹೊಡೆದಳು. ನೋವು ತಡೆಯಲಾರದೆ ದಾಮು ಸತ್ತು ಹೋಯಿತು.
ನೀತಿ: ಅತಿ ಆಸೆ-ಗತಿ ಗೇಡು
| ಅನ್ವಿತಾ ಎನ್., 8ನೇ ತರಗತಿ, ಪ್ರಿಯದರ್ಶಿ ಇಂಗ್ಲಿಷ್ ಮಾಧ್ಯಮ ಶಾಲೆ, ಬೆಟ್ಟಂಪಾಡಿ, ಪುತ್ತೂರು