

ಸಚಿವರೊಬ್ಬರ ಅಶ್ಲೀಲ ಸಿಡಿ ಪ್ರಕರಣದ ಬಗ್ಗೆಯೇ ಚರ್ಚೆ ಮಾಡುತ್ತ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿರುವುದರಿಂದ ಕಾಟಾಚಾರದ ಆಡಳಿತ ನಡೆಯುತ್ತಿರುವುದು ಬೇಸರದ ಸಂಗತಿ. ಕೆಲಸಕ್ಕೆ ಬಾರದ ಪ್ರಕರಣಗಳನ್ನೇ ಮುಂದಿಟ್ಟುಕೊಂಡು ಮೂರೂ ಪಕ್ಷದವರು ರಾಜಕೀಯ ಮಾಡಲು ಹೊರಟಿರುವುದು ವಿಪರ್ಯಾಸ. ಲಾಕ್ಡೌನ್ ಪರಿಣಾಮದಿಂದ ಜನಜೀವನ ದುಸ್ತರಗೂಂಡಿದೆ. ಬೆಲೆಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ರೈತರ ಸಂಕಷ್ಟಗಳನ್ನು ಪರಿಹರಿಸಿಲ್ಲ. ಜನಪ್ರತಿನಿಧಿಗಳು ಈ ರೀತಿ ಕಾಲಹರಣ ಮಾಡುತ್ತಿದರೆ ಜನರ ಸಂಕಷ್ಟಗಳನ್ನು ಪರಿಹರಿಸುವವರು ಯಾರು? ಅಭಿವೃದ್ಧಿ ಕೆಲಸಗಳು ಮಾಡುವವರು ಯಾರು? ಜವಾಬ್ದಾರಿ, ಹೊಣೆಗಾರಿಕೆಯನ್ನು ಅರ್ಥಮಾಡಿಕೊಂಡು ಶಾಸಕರು, ಸಚಿವರು ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು.
| ಸಂತೋಷ್ ಜಾಬೀನ್ ಸುಲೇಪೇಟ್
ಇತ್ತೀಚೆಗೆ ಸರ್ಕಾರಗಳು ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ನೌಕರರಿಗೆ ರಜೆ ನೀಡುತ್ತಿವೆ. ಆದರೆ ಗ್ರಂಥಾಲಯಗಳಿಗೂ ರಜೆ ನೀಡುತ್ತಿರುವುದು ಸರಿಯಲ್ಲ. ಬಹಳಷ್ಟು ನಿವೃತ್ತ ನಾಗರಿಕರಿಗೆ ಸಮಯ ಕಳೆಯಲು, ಯುವಕರಿಗೆ ಜ್ಞಾನಾರ್ಜನೆಗೆಂದು ಇರುವ ಒಂದೇ ದಾರಿ ಅಂದರೆ ಗ್ರಂಥಾಲಯಗಳೇ. ಹಾಗಾಗಿ ಎರಡನೇ ಶನಿವಾರ ಮತ್ತು ನಾಲ್ಕನೆಯ ಶನಿವಾರಗಳಂದು ಗ್ರಂಥಾಲಯಗಳಿಗೆ ರಜೆ ರದ್ದುಪಡಿಸಿ, ಅವು ಕಾರ್ಯನಿರ್ವಹಿಸುವಂತೆ ಮಾಡಲಿ.
| ಡಾ.ಎಸ್.ಡಿ.ನಾಯ್ಕ ನಿವೃತ್ತ ಪ್ರಾಧ್ಯಾಪಕರು, ಕಾರವಾರ