

ಮೆಣಸಿನಕಾಯಿ, ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ಹೀರೇಕಾಯಿ ಬೆಳೆಯುವ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆಯೇನೋ ಸರಿ. ಆದರೆ, ಜೋಳ ಬೆಳೆಯುವವರಿಗೆ ಪ್ರೋತ್ಸಾಹಧನ ನೀಡಿಲ್ಲ ಏಕೆ? ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತೊಗರಿ, ಕಡ್ಲಿ ನಂತರ ಹೆಚ್ಚು ಬೆಳೆಯುವುದೇ ಜೋಳ. ಹಾಗಾಗಿ ಜೋಳ ಬೆಳೆಯುವ ರೈತರಿಗೂ ಮೆಕ್ಕೆಜೋಳ ಬೆಳೆಯುವ ರೈತರಿಗೆ ನೀಡಿದಂತೆ -ಠಿ; 5000 ಪೋ›ತ್ಸಾಹಧನ ನೀಡಿ, ಕಲ್ಯಾಣ ಕರ್ನಾಟಕ ಭಾಗದ ರೈತರ ನೆರವಿಗೆ ಬರಬೇಕು.
| ಶಿವರಾಜ ಎಸ್. ಅಂಡಗಿ ಕರ್ನಾಟಕ ಕೃಷಿಕ ಸಮಾಜ ಸದಸ್ಯ
ಮದ್ಯ ನಿಷೇಧಕ್ಕಾಗಿ ಸರ್ಕಾರ ಕಣ್ತೆರೆಯಲಿ
ಮದ್ಯ ಮಾರಾಟ ನಿಷೇಧಿಸಿ ಎಂದು ಒತ್ತಾಯಿಸಿದ ಕೂಲಿಕಾರ್ವಿುಕ ಮಹಿಳೆಯರು ಸರ್ಕಾರ ನಡೆಸೋಕೆ ನಾವೇ ಹಣ ನೀಡುತ್ತೇವೆ ಎಂದು ಹಣವನ್ನು ಮನಿಆರ್ಡರ್ ಮಾಡಿದ ತುಂಬ ಅಪರೂಪದ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ (ವಿಜಯವಾಣಿ ವರದಿ ಮೇ 19). ಈ ವಿಷಯದಲ್ಲಿ ಸರ್ಕಾರ ಕಣ್ತೆರೆಯಬೇಕಿದೆ. ಮದ್ಯ ವ್ಯಸನಿಗಳಾದ ಗಂಡಂದಿರು ಮತ್ತು ಮಕ್ಕಳು ಕೂಡ ಇಡೀ ಕುಟುಂಬಕ್ಕೆ ಎಂಥ ಶಾಪವಾಗಿದ್ದಾರೆ ಎಂಬುದಕ್ಕೆ ಬಳ್ಳಾರಿ ಜಿಲ್ಲೆಯಲ್ಲಿನ ಘಟನೆ ಸಾಕ್ಷಿ. ಬಡ ಮಹಿಳೆಯರ ಮನೆ ನರಕವಾಗುತ್ತಿರುವುದನ್ನು ನಾವಿಲ್ಲಿ ಕಾಣಬಹುದು. ಇಂಥ ಸಂದರ್ಭದಲ್ಲಿ ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೆ? ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮದ್ಯ ನಿಷೇಧದ ಬಗ್ಗೆ ಚಿಂತನೆಗೆ ಇದು ಸಕಾಲ.
| ಹುರುಕಡ್ಲಿ ಶಿವಕುಮಾರ ಬಾಚಿಗೊಂಡನಹಳ್ಳಿ