ಇದು ಎಂಥಾ ಲೋಕವಯ್ಯಾ...!: ಪೆಟ್ರೋಲ್ ಆಯ್ತು ಮಂಗಮಾಯ..!

Monkey
Published on

ಒಮ್ಮೆ ಹರಿಯಾಣದ ಪಾನೀಪತ್ ಎಂಬ ಗ್ರಾಮದ ಜನರು ರಸ್ತೆ ಬದಿ ನಿಲ್ಲಿಸಿದ್ದ ಗಾಡಿಗಳಲ್ಲಿ ಪೆಟ್ರೋಲ್ ಇದ್ದಕ್ಕಿದ್ದಂತೆಯೇ ಮಾಯವಾಯಿತು. ಕಳ್ಳರು ಬಂದು ಪೆಟ್ರೋಲ್ ಕದ್ದುಕೊಂಡು ಹೋಗಿದ್ದಾರೆ ಎಂದುಕೊಂಡರು ಗ್ರಾಮಸ್ಥರು. ಎರಡನೆಯ ದಿನವೂ ಪೆಟ್ರೋಲ್ ಮಾಯ! ಕಳ್ಳರನ್ನು ಹಿಡಿಯಲು ಕೆಲವರು ರಾತ್ರಿ ಕಾದು ಕುಳಿತರು.

ಕಾವಲು ಇಲ್ಲದ ಜಾಗದಲ್ಲಿ ನಿಲ್ಲಿಸಿದ್ದ ಗಾಡಿಗಳ ಪೆಟ್ರೋಲ್ ಖಾಲಿಯಾಗತೊಡಗಿತು. ಆದ್ದರಿಂದ ಒಮ್ಮೆ ಗ್ರಾಮಸ್ಥರೆಲ್ಲಾ ಸೇರಿ ಕಳ್ಳನನ್ನು ಹಿಡಿಯಲೇಬೇಕೆಂದು ಕಾವಲು ಕೂತರು. ನಡು ರಾತ್ರಿ ಏನೋ ಶಬ್ದ. ಆದರೆ ಮನುಷ್ಯರು ಮಾತ್ರ ಕಾಣಲಿಲ್ಲ. ನೆಲದ ಮೇಲೆ ಕಣ್ಣಾಡಿಸಿದಾಗ ಎಲ್ಲರೂ ಬೆಚ್ಚಿ ಬಿದ್ದರು. ಆ ಕಳ್ಳನನ್ನು ಓಡಿಸುವ ಬದಲು ಕ್ಯಾಮರಾದಲ್ಲಿ ಫೋಟೊ ಕ್ಲಿಕ್ಕಿಸತೊಡಗಿದರು. ಏಕೆಂದರೆ ಪೆಟ್ರೋಲನ್ನು ದಿನವೂ ಮಂಗಮಾಯ ಮಾಡುತ್ತಿದ್ದ ಮಹಾರಾಯ ಬೇರಾರೂ ಅಲ್ಲ, ನಿಜವಾದ ಮಂಗ!

ಹೌದು. ಮಂಗವೊಂದು ದಿನವೂ ಬಂದು ಗಾಡಿಯ ಪೈಪ್ ಕಿತ್ತು ಪೆಟ್ರೋಲ್ ಕುಡಿಯುತ್ತಿತ್ತು. ಜನರೆಲ್ಲಾ ಹಣ್ಣು, ಕಡಲೆಕಾಯಿ ತಿನ್ನು ಎಂದು ಕೊಟ್ಟರೂ ಅದು ಮುಟ್ಟಲಿಲ್ಲ!

| ಸುಚೇತನಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net