‘ಪೇಟ್ ಸಾ’ ಆಯುರ್ವೇದ ಉತ್ಪನ್ನ

Published on

ದಿವಿಸಾ ಹರ್ಬಲ್ಸ್ ಪ್ರೈ. ಲಿಮಿಟೆಡ್ ತನ್ನ ಪ್ರಸಿದ್ಧ ಉತ್ಪನ್ನ ‘ಪೇಟ್ ಸಾ’ ಪರಿಚಯಿಸುತ್ತಿದ್ದು, ಇದಕ್ಕಾಗಿ ನಟರಾದ ಜಾನಿ ಲೀವರ್ ಮತ್ತು ರಾಜ್‌ಪಾಲ್ ಯಾದವ್ ಅವರನ್ನು ಒಳಗೊಂಡ ಜಾಹೀರಾತು ಚಿತ್ರೀಕರಿಸಿದೆ.
ರಾಜ್‌ಪಾಲ್ ಯಾದವ್ ಬ್ರಾಂಡ್ ಅಂಬಾಸಿಡರ್ ಆಗಿರುವ ಈ ಉತ್ಪನ್ನದ ಜಾಹೀರಾತಿನಲ್ಲಿ ಜಾನಿ ಲಿವರ್ ಪೇಟ್ ಸಾದ ಉಪಯೋಗಗಳು ಹಾಗೂ ಜೀವನದಲ್ಲಿ ಅದರ ಅವಶ್ಯತೆ ಎಷ್ಟು ಎಂಬುದನ್ನು ಹಾಸ್ಯಮಯವಾಗಿ ಉಲ್ಲೇಖಸಿದ್ದಾರೆ.
ಮುಂಬೈನ ಫಿಲ್ಮ್‌ಸಿಟಿಯಲ್ಲಿ ನಡೆದಿ ಈ ಜಾಹೀರಾತು ಚಿತ್ರೀಕರಣ ಸಂದರ್ಭದಲ್ಲಿ ಪೇಟ್ ಸಾ ಬ್ರಾಂಡ್‌ನ ಹಿಂದಿನ ವ್ಯಕ್ತಿ ಹಾಗೂ ಹೆಸರಾಂತ ಉದ್ಯಮಿ ಡಾ. ಸಂಜೀವ್ ಜುನೇಜಾ, ಹಾಗೂ ಇತರೆ ಹೂಡಿಕೆದಾರರು ಹಾಜರಿದ್ದರು. ಅವರು ಪೇಟ್ ಸಾ ಒಂದು ಮಹತ್ವದ ಬ್ರಾಂಡ್ ಆಗಿದ್ದು, ಜನರ ವಿಶ್ವಾಸಾರ್ಹ ಬ್ರಾಂಡ್ ಆಗಿ ಹೆಸರು ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾವುಕರಾದ ಡಾ. ಸಂಜೀವ್ ಜುನೇಜಾ, ಜಾನಿ ಲಿವರ್ ಮತ್ತು ರಾಜ್ಪಾಲ್ ಯಾದವ್ ಪ್ರತಿಭಾವಂತ ಕಲಾವಿದರು. ಇವರೂ ಒಳಗೊಂಡಂತೆ ಈ ಹೊಸ ಬ್ರಾಂಡ್ ಪ್ರಚಾರದ ಕಾರ್ಯದಲ್ಲಿ ಬಹಳಷ್ಟು ಮಂದಿ ಶ್ರಮಿಸಿದ್ದಾರೆ ಎಂದರು. ಇದೇ ವೇಳೆ ಮೊದಲ ಬ್ರಾಂಡ್ ಅಂಬಾಸಿಡರ್ ರಾಜು ಶ್ರೀವಾಸ್ತವ್ ಮತ್ತು ಅವರೊಂದಿಗೆ ಕಳೆದ ಕ್ಷಣಗಳನ್ನು ಸ್ಮರಿಸಿದರು.
ಕಂಪನಿಯ ಅಧಿಕಾರಿ ಅಶ್ಮೀತ್ ಖರ್ಬಂದ ಅವರ ಹಲವು ವರ್ಷಗಳ ಸಂಶೋಧನೆಯ ಲವಾಗಿ ದಿವಿಸಾ ಹರ್ಬಲ್ಸ್ ಪ್ರೈ.ಲಿ. ‘ಪೇಟ್ ಸಾ’ ಆಯುರ್ವೇದ ಉತ್ಪನ್ನ ಮಾರುಕಟ್ಟೆಯಲ್ಲಿ ಪರಿಣಾಮಕಾರಿ ಬ್ರಾಂಡ್ ಆಗಿ ಹೆಸರು ಮಾಡಿದೆ ಎಂದ ಅವರು, ಮಾರುಕಟ್ಟೆಯಲ್ಲಿ ಪೇಟ್ ಸಭಾ ಜ್ಯೂಸ್, ಗ್ರೀನ್ ಟೀ ಮತ್ತು ಲಿಕ್ವಿಡ್ ಲ್ಯಾಕ್ಸೇಟಿವ್ ಡ್ರಾಪ್ಸ್ ರೂಪದಲ್ಲಿ ಲಭ್ಯವಿದೆ. ಆಯುರ್ವೇದ ಗಿಡಮೂಲಿಕೆಗಳೊಂದಿಗೆ ತಯಾರಿಸಲಾದ ಈ ಉತ್ಪನ್ನಗಳು ಬಳಕೆದಾರರಿಗೆ ಗಮನಾರ್ಹ ಪ್ರಯೋಜನ ನೀಡಿದೆ. ಮಕ್ಕಳು, ಯುವಕರಲ್ಲಿ ಮಲಬದ್ಧತೆ ಸಮಸ್ಯೆ ನಿವಾರಣೆ, ದೈಹಿಕ ಅಸ್ವಸ್ಥತೆ, ಮಾನಸಿಕ ಸಮಸ್ಯೆ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಹೊಟ್ಟೆ ನೋವು, ಉಬ್ಬರ, ವಾಕರಿಕೆ ಮುಂತಆದ ಸಮಸ್ಯೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಪೋಟೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net