

| ಅಶ್ವಿನಿ ಎಚ್.ಆರ್.
ಯುವಕರಾಗಲಿ, ಯುವತಿಯರಾಗಲಿ ಪ್ರತಿಯೊಬ್ಬರೂ ಫೇರ್ ಸ್ಕಿನ್ ಬೇಕೆಂದು ಬಯಸುವವರೇ. ಅದರಲ್ಲೂ ಸ್ಕಿನ್ ವೈಟನಿಂಗ್ಗೆ ಉಪಯೋಗಿಸದ ಕ್ರೀಮ್ಳಿಲ್ಲ, ಫೇಶಿಯಲ್ಗಳಿಲ್ಲ. ಈಗಂತೂ ಆನ್ಲೈನ್ನಲ್ಲಿ, ಕಾಸ್ಮೆಟಿಕ್ಸ್ಶಾಪ್ಗಳಲ್ಲಿ ನಾನಾ ನಮೂನೆಯ ಸ್ಕಿನ್ ವೈಟನಿಂಗ್ ಸೋಪುಗಳು, ಕ್ರೀಮ್ಳು, ಕಾಂಪ್ಯಾಕ್ಟ್ ಪೌಡರ್ಗಳು ಬಂದಿವೆ. ಆದರೆ ಅದನ್ನೆಲ್ಲಾ ಉಪಯೋಗಿಸಿ ಕೊನೆಗೆ ಯಾವುದೇ ತರಹದ ಒಳ್ಳೆಯ ಫಲಿತಾಂಶ ಕಂಡುಬರಲಿಲ್ಲವೆಂದರೆ ಬೇಸರವಾಗುವುದು ನಮಗೇ. ಅದಕ್ಕೆ ಖರ್ಚಿಲ್ಲದಂತೆ, ನಿಮ್ಮ ಕೈಗೆಟುಕುವ ಮೆಡಿಸಿನ್ ಉಪಯೋಗಿಸಿದರೆ ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಫೇರ್ ಸ್ಕಿನ್ ಹೊಂದಬಹುದು.
ಕಡಲೆಹಿಟ್ಟು ಮನೆಯಲ್ಲೇ ಸುಲಭವಾಗಿ ಸಿಗುವ, ಹೆಚ್ಚು ಖರ್ಚಿಲ್ಲದ ಪದಾರ್ಥವಾಗಿದ್ದು, ಸ್ಕಿನ್ ವೈಟನಿಂಗ್ಗೆ ಬೆಸ್ಟ್ ಫೇಸ್ಪ್ಯಾಕ್ ಆಗಿದೆ. ಇದನ್ನು ಉಪಯೋಗಿಸುವುದರಿಂದ ಒಂದಲ್ಲ, ಹತ್ತಾರು ಪ್ರಯೋಜನಗಳನ್ನೂ ಕೂಡ ಪಡೆಯಬಹುದಾಗಿದೆ. ಇಲ್ಲಿ ಕಡಲೆಹಿಟ್ಟನ್ನು ಸ್ಕಿನ್ ವೈಟನಿಂಗ್ ಹೇಗೆ ಬಳಸಬಹುದು ಎಂದು ಕೊಡಲಾಗಿದೆ.
ಬಳಸುವುದು ಹೇಗೆ?: ಮೇಲೆ ಹೇಳಿರುವ ಎಲ್ಲ ಪದಾರ್ಥಗಳನ್ನು ಬಳಸಿಕೊಂಡು ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ಒಂದು ವೇಳೆ ಪೇಸ್ಟ್ ಗಟ್ಟಿಯಾದರೆ ಸ್ವಲ್ಪ ಹಾಲು ಉಪಯೋಗಿಸಿ. ಈ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ.
ಇಷ್ಟೆಲ್ಲಾ ಪ್ರಯೋಜನಗಳಿವೆ...: ಕಡಲೆಹಿಟ್ಟು ಕೂಡ ನ್ಯಾಚುರಲ್ ಕ್ಲೀನ್ಸರ್ ಆಗಿರುವುದರಿಂದ ಇದು ಮುಖದ ಆಳದಲ್ಲಿ ಅಡಗಿರುವ ಕೊಳೆಯನ್ನು ಹೊರತೆಗೆಯುತ್ತದೆ. ಬಾದಾಮಿಯಲ್ಲಿ ವಿಟಮಿನ್ಗಳು, ಮಿನರಲ್ಸ್ ಇರುವುದರಿಂದ ತ್ವಚೆ ಸುಕ್ಕುಗಟ್ಟದಂತೆ ತಡೆದು, ಡಾರ್ಕ್ ಸರ್ಕಲ್ ಆಗದಂತೆ ತಡೆಯುತ್ತದೆ. ನಿಂಬೆಹಣ್ಣು ಬ್ಲೀಚಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇನ್ನು ಹಾಲು ತ್ವಚೆ ಶುಷ್ಕಗೊಳ್ಳದಂತೆ ತಡೆದು, ಮೃದುಗೊಳಿಸುತ್ತದೆ.
ಸೂಚನೆ: ಮೇಲೆ ಹೇಳಿರುವ ಎಲ್ಲ ಪದಾರ್ಥಗಳು ಮನೆ ಮದ್ದಾಗಿದ್ದರೂ ಕೆಲವರ ಸ್ಕಿನ್ ಗೆ ಸೂಟ್ ಆಗುವುದಿಲ್ಲ. ಅದಕ್ಕೆ ಒಮ್ಮೆ ಪ್ಯಾಚ್ ಟೆಸ್ಟ್ ಮಾಡಿ ನಂತರ ಬಳಸಿ.