ಪಾಂಡವರ ರಹಸ್ಯ: ಪಂಚ ಪಾಂಡವರ ಸಾವಿನ ರಹಸ್ಯ ಅದ್ಭುತ

pandavaru
Published on

|ಮಂಡಗದ್ದೆ ಪ್ರಕಾಶ್​ಬಾಬು ಕೆ.ಆರ್. ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ

ಪಂಚ ಪಾಂಡವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ವಿಶೇಷ ಗುಣಗಳಿದ್ದವು. ಸಹದೇವ ಶಾಸ್ತŠಜ್ಞಾನಿ, ನಕುಲ ಅಪ್ರತಿಮ ರೂಪವಂತ, ಅರ್ಜುನ ಪರಾಕ್ರಮಿ, ಭೀಮ ಶೂರರಲ್ಲಿ ಶೂರ, ಧರ್ಮರಾಜನಲ್ಲಿ ಉತ್ತಮ ಸಂಸ್ಕಾರ, ಧಮಾನುಕರಣೆಯಿತ್ತೇ ಹೊರತು ಲೋಕಜ್ಞಾನ ಅಷ್ಟಾಗಿ ಇರಲಿಲ್ಲ. ಶ್ರೀಕೖಷ್ಣಪರಮಾತ್ಮನಿಗೆ ಈ ಪಾಂಡವರೆಂದರೆ ಪಂಚಪ್ರಾಣ. ಶ್ರೀಕೖಷ್ಣನ ದೇಹತ್ಯಾಗದ ನಂತರ ಪಾಂಡವರಿಗೆ ಬದುಕೇ ಶೂನ್ಯವಾಯಿತು.

ಆ ಬೇಸರದಿಂದ ಅವರು ರಾಜವಸ್ತŠಗಳನ್ನು ತೊರೆದರು. ನಾರುಮುಡಿಯುಟ್ಟು ಹಸ್ತಿನಾವತಿಯನ್ನು ತೊರೆದು ಮುನ್ನಡೆದರು. ಅವರನ್ನು ನಾಯಿಯೊಂದು ಹಿಂಬಾಲಿಸಲು ಪ್ರಾರಂಭಿಸಿತು. ಪಾಂಡವರು ಹಿಮಾಲಯದ ಶಿಖರವನ್ನು ಏರಲು ಪ್ರಾರಂಭಿಸಿದರು. ತೀರಾ ನಿತ್ರಾಣಳಾದ ದ್ರೌಪದಿ ಮೊದಲಿಗೆ ಅಸುನೀಗಿದಳು. ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ ‘ಅಣ್ಣಾ, ದ್ರೌಪದಿ ಏಕೆ ಕೆಳಗೆ ಬಿದ್ದಳು?’ ಧರ್ಮರಾಜ ಹೇಳುತ್ತಾನೆ ‘ನಾವು ಐವರು ಗಂಡಂದಿರನ್ನು ಪಡೆದ ದ್ರೌಪದಿಗೆ ಎಲ್ಲರಲ್ಲೂ ಸಮಾನ ಪ್ರೀತಿ ಇರಲಿಲ್ಲ. ಆಕೆಗೆ ಅರ್ಜುನನಲ್ಲಿ ಅತಿಯಾದ ಪ್ರೀತಿ’ ಆ ತಾರತಮ್ಯವೇ ಅವಳ ಸಾವಿಗೆ ಕಾರಣವಾಯಿತು.

ಮುಂದೆ ಸಾಗುತ್ತಾ ನಕುಲ ಅಸುನೀಗುತ್ತಾನೆ. ಮತ್ತೆ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ. ಧರ್ಮರಾಜ ಅದಕ್ಕೆ ‘ನಕುಲನಿಗಿದ್ದ ಅಸಾಧಾರಣ ರೂಪದ ಗರ್ವವೇ ಅವನ ಪತನಕ್ಕೆ ಕಾರಣವಾಯಿತು.’ ಸಹದೇವನು ಕೊನೆ ಉಸಿರನ್ನು ಎಳೆಯುತ್ತಾನೆ, ಆಗಲೂ ಭೀಮನದು ಅದೇ ಪ್ರಶ್ನೆ. ಆಗ ಧರ್ಮರಾಜನು ಹೇಳುವನು: ‘ಸಹದೇವನಿಗೆ ನಾನೇ ಸಕಲಶಾಸ್ತŠ ಪಾರಂಗತ ಎನ್ನುವ ಅಹಂಕಾರ ಇತ್ತು, ಇದೇ ಅವನ ಸಾವಿಗೆ ಕಾರಣವಾಯಿತು.’ ಮುಂದೆ ಮುಂದೆ ಹೋಗುತ್ತಾ ಅರ್ಜುನ ಗತಿಸಿದಾಗ ಭೀಮ ಮತ್ತೆ ಅದೇ ಪ್ರಶ್ನೆ ಹಾಕಲು ಧರ್ಮರಾಜ ‘ಅವನಿಗೆ ತಾನೇ ಬಲಶಾಲಿ ಎಂಬ ಅಹಂಕಾರವಿತ್ತು, ಇದೇ ಅವನ ಸಾವಿಗೆ ಕಾರಣವಾಯಿತು’ ಎಂದ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮನೇ ಬಿದ್ದುಬಿಡುತ್ತಾನೆ. ಪ್ರಾಣಪಕ್ಷಿ ದೇಹದಿಂದ ಹಾರಿಹೋಗುವ ಮೊದಲು ಭೀಮ ನನ್ನ ಸಾವಿಗೆ ಕಾರಣ ಹೇಳು ಎನ್ನಲು ‘ಬಾಹುಬಲದ ಗರ್ವ, ಮಿತಿಮೀರಿದ ಆಹಾರ ಸೇವನೆ ನಿನ್ನ ಪತನಕ್ಕೆ ಕಾರಣ’ ಎಂದನು. ಆಗ ಭೀಮ ಕಣ್ಣು ಮುಚ್ಚುತ್ತಾನೆ. ಪಂಚ ಪಾಂಡವರಲ್ಲಿ ಧರ್ಮರಾಯನೊಬ್ಬನೇ ಉಳಿಯುತ್ತಾನೆ. ಆತನನ್ನು ನಾಯಿಯೊಂದು ಹಿಂಬಾಲಿಸುತ್ತದೆ.

ಧರ್ಮರಾಯನಿಗೆ ದೇವರಾಜನ ದಿವ್ಯರಥದ ಘೋಷ ಕೇಳಿಸುತ್ತದೆ. ಕಲ್ಮಷದ ಚುಕ್ಕೆಗಳೇ ಇಲ್ಲದ ಧರ್ಮರಾಯನನ್ನು ಕರೆದುಕೊಂಡು ಹೋಗಲು ಸ್ವತಃ ದೇವೇಂದ್ರನೇ ಬಂದಿಳಿಯುತ್ತಾನೆ. ಧರ್ಮರಾಜನಿಗೆ ಸಶರೀರನಾಗಿ ಸ್ವರ್ಗಕ್ಕೆ ಬರಲು ಆಮಂತ್ರಣ ಕೊಡುತ್ತಾನೆ. ಧರ್ಮರಾಜ ಒಪ್ಪುವುದಿಲ್ಲ. ‘ನನ್ನ ಸಹೋದರರು ಪತ್ನಿಗಿಲ್ಲದ ಸ್ವರ್ಗ ತನಗೆ ಬೇಡ’ ಎನ್ನುತ್ತಾನೆ. ಆಗ ಇಂದ್ರ ‘ನಿನ್ನ ತಮ್ಮಂದಿರು ಮತ್ತು ಪತ್ನಿ ಅಲ್ಲಿದ್ದಾರೆ ನೋಡು, ಅವರು ಮಾಡಿದ ಕರ್ಮವನ್ನು ಅನುಭವಿಸುತ್ತಿದ್ದಾರೆ. ನಂತರ ಅವರೂ ಸಹ ಸ್ವರ್ಗಲೋಕಕ್ಕೆ ಬರುತ್ತಾರೆ. ಈಗ ನೀನು ಬಾ’ ಎನ್ನುತ್ತಾನೆ. ಆಗ ಧರ್ಮರಾಜ ಹೇಳುತ್ತಾನೆ ‘ಅಲ್ಲಿ ನನ್ನ ತಮ್ಮಂದಿರು, ಪತ್ನಿ ಕಷ್ಟಪಡುತ್ತಿದ್ದರೆ ನಾನೊಬ್ಬನೇ ಹೇಗೆ ಸ್ವರ್ಗಲೋಕದ ಸುಖವನ್ನು ಸ್ವೀಕರಿಸಲಿ ನನ್ನನ್ನು ಇಲ್ಲಿಯೇ ಬಿಟ್ಟುಬಿಡು’ ನಾವುಗಳು ಒಟ್ಟಿಗೆ ಬರುತ್ತೇವೆ.

ಇಂದ್ರ ಹೇಳುವನá-: ‘ಹಾಗೆ ಮಾಡಲು ಸಾಧ್ಯವಿಲ್ಲ. ಅವರವರ ಕರ್ಮವನ್ನು ಅವರವರೇ ಅನುಭವಿಸಬೇಕು. ಮರುಮಾತನಾಡದೇ ನನ್ನೊಂದಿಗೆ ಬಾ.’

‘ನಿನ್ನ ವಾದವನ್ನು ನಾನು ಒಪ್ಪುತ್ತೇನೆ. ಆದರೆ, ಇದುವರೆಗೆ ನನ್ನನ್ನು ಹಿಂಬಾಲಿಸಿದ ನಾಯಿಗಾದರೂ ಸ್ವರ್ಗದಲ್ಲಿ ಸ್ಥಾನ ಕಲ್ಪಿಸು’ ಎಂದು ಧರ್ಮರಾಜ ಹೇಳಿದ.

‘ಸ್ವರ್ಗದಲ್ಲಿ ನಾಯಿಗಳಿಗೆ ಪ್ರವೇಶವಿಲ್ಲ.’ ಇಂದ್ರ ಹೇಳಿದ.

‘ನಾಯಿಗೆ ಪ್ರವೇಶವಿಲ್ಲ ಎಂದಾದರೆ ನನಗೂ ಪ್ರವೇಶ ಬೇಡ. ಅದರೊಡನೆ ಇರಲು ಬಯಸುತ್ತೇನೆ’. ಆಗ ಧರ್ಮರಾಜನನ್ನು ಕುರಿತು ಇಂದ್ರ ಹೇಳುವನá- ‘ಧರ್ಮರಾಜ ನಿನ್ನ ಧರ್ಮನಿಷ್ಠೆಗೆ ನಾನು ತಲೆಬಾಗಿದ್ದೇನೆ. ನಿನ್ನನ್ನು ನಾಯಿಯ ರೂಪದಲ್ಲಿ ಹಿಂಬಾಲಿಸಿದ್ದು ಮತ್ಯಾರೂ ಅಲ್ಲ, ಸ್ವತಃ ಧರ್ಮರೂಪಿಯಾದ ಕಾಲಪುರುಷ ಯಮ’.

ಧರ್ಮವನ್ನು ಬಿಡದವನಿಗೆ ಕೊನೆಯಲ್ಲೂ ಧರ್ಮರೂಪವೇ ಕಾಣುತ್ತದೆ. ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ, ಮುಂಜಾನೆಯ ಮಂಜಿನಹನಿಯಂತೆ ನಮ್ಮ ಪ್ರಾಣವು ಯಾವ ಸಮಯದಲ್ಲಾದರೂ ಜಾರಿಹೋಗಬಹುದು. ಹಾಗಾಗಿ ಮನುಷ್ಯ ಜೀವನವನ್ನು ಸರಿಯಾದ ಧರ್ಮಪಾಲನೆಯಲ್ಲಿ ನಡೆಸಿಕೊಂಡು ಹೋಗಬೇಕು. ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮವು ರಕ್ಷಿಸುತ್ತದೆ ಎಂದು ಶ್ರೀಕೖಷ್ಣಪರಮಾತ್ಮ ಗೀತೆಯಲ್ಲಿ ಹೇಳಿರುವನು.

ಪಂಚ ಪಾಂಡವರು ಸ್ವರ್ಗಾರೋಹಣ ಮಾಡಿದ್ದು ಪುಷ್ಯಮಾಸದ ಕೖಷ್ಣಪಕ್ಷದ ದಶಮಿ ದಿನದಂದು. ಈ ಬಾರಿ ದಶಮಿ ಇಂದು (ಜ. 27) .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net