ಮೋಡಿ ಮಾಡುತ್ತಿದೆ ಪೈಸಾ ವಸೂಲ್ ಗಾಡಿ

Paisa Vasool
Published on

ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ವಾಹನಗಳ ವ್ಯಾಪಾರಕ್ಕೆ ಧಕ್ಕೆ ಉಂಟಾಗಿದ್ದು, ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಅವುಗಳ ಪೈಕಿ ವಿಶ್ವಾಸ್ ಎಲೆಕ್ಟ್ರಿಕ್ ವಾಹನಗಳು ಅತೀ ವಿಶ್ವಾಸಾರ್ಹವಾಗಿದ್ದು ಅತ್ಯುತ್ತಮವಾಗಿವೆ. ಈ ಎಲೆಕ್ಟಿ›ಕ್ ವಾಹನಗಳ ಶ್ರೇಣಿ ಯನ್ನು ಬೆಂಗಳೂರಿನ ಬಾಲನ್ ಇಂಜಿನಿಯರಿಂಗ್ ಪ್ರೈವೆಟ್ ಲಿಮಿಟೆಡ್​ನವರು ಪರಿಚಯಿಸಿದ್ದು, ಇವುಗಳು ಅತ್ಯಂತ ಅಗ್ಗವಾಗಿವೆ. ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ಮೋಟಾರ್, ಕಂಟ್ರೋಲರ್ ಮತ್ತು ಬ್ಯಾಟರಿಗಳಿಗೆ 4 ವರ್ಷಗಳ ವಾರಂಟಿ ನೀಡಲಾಗುತ್ತಿದೆ. ಎಲ್ಲ ವಾಹನಗಳು ಐಸಿಎಟಿ ಪ್ರಮಾಣೀಕರಿಸಲ್ಪಟ್ಟಿದ್ದು, ಆತ್ಮನಿರ್ಭರ ಭಾರತಕ್ಕೆ ಅನುಗುಣವಾಗಿ ವಾಹನಗಳು ಶೇ.100 ಭಾರತದಲ್ಲಿ ತಯಾರಿಸಲ್ಪಟ್ಟಿವೆ ಮತ್ತು ಎಸ್​ಸಿಜಿ ಬಾಷ್ ಬೆಂಗಳೂರು ಮೋಟಾರ್ಸ್ ಅನ್ನು ಬಳಸುತ್ತವೆ.

ವಿಶ್ವಾಸ್ ಎಲೆಕ್ಟ್ರಿಕ್ ವಾಹನದ ವಿಶೇಷತೆ: ಸಂಪೂರ್ಣ ಹೊರೆಯೊಂದಿಗೆ ಈ ವಾಹನವು ಮೈಸೂರಿನಿಂದ ಚಾಮುಂಡಿ ಬೆಟ್ಟದವರೆಗೆ ಕ್ರಮಿಸಿದ್ದು, ಭಾರತದ ನೈಜ ರಸ್ತೆ ಪರಿಸ್ಥಿತಿಗಳ ಮೇಲೆ ಕಠಿಣವಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ವೇಳೆ ಪ್ರತಿ ಚಾರ್ಜ್​ಗೆ ವಾಹನವು 100 ಕಿ.ಮೀ. ಗಿಂತ ಹೆಚ್ಚು ಮೈಲೇಜ್ ಸಾಧಿಸಿದೆ. ಅಂದರೆ ಪ್ರತಿ ಕಿ.ಮೀ.ಗೆ ಅವುಗಳ ಬೆಲೆ 0.30 - 0.35 ಪೈಸೆ. ಈ ವಾಹನಗಳು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, 1,85,000 ರೂ. ಮತ್ತು ಜಿಎಸ್​ಟಿ ಇದರ ಪ್ರಸ್ತುತ ಬೆಲೆಯಾಗಿದೆ. ನೀವು ಈ ವಾಹನದಿಂದ ಪ್ರತಿದಿನ 1,000 ರೂ. ಗಳಿಸಬಹುದು. ಇದು ಪೈಸಾ ವಸೂಲ್ ಗಾಡಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಎಲೆಕ್ಟ್ರಿಕ್ ವಾಹನಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಸಾಲ ಸೌಲಭ್ಯವಿದೆ. ಬಾಲನ್ ಇಂಜಿನಿಯರಿಂಗ್ ಅವರು ತಯಾರಿಸಿರುವ ವಾಹನಗಳಿಗೆ ಗುಣಮಟ್ಟ ಮತ್ತು 4 ವರ್ಷಗಳ ವಾರಂಟಿಯಿಂದಾಗಿ ಉತ್ತರದ ಕೆಲ ರಾಜ್ಯ ಗಳಲ್ಲಿ ಪ್ರತಿಕ್ರಿಯೆ ಅದ್ಭುತವಾಗಿದೆ. ಕಂಪನಿಯು ಬೆಂಗಳೂರಲ್ಲಿ ತಿಂಗಳಿಗೆ 300-400 ವಾಹನ ಉತ್ಪಾದಿಸುತ್ತಿದೆ. ಬಾಗಲಕೋಟೆಯಲ್ಲಿ ವರ್ಷಕ್ಕೆ 50,000 ವಾಹನಗಳ ಸಾಮರ್ಥ್ಯದ ಕಾರ್ಖಾನೆ ನಿರ್ವಿುಸುತ್ತಿದೆ. ಸಂರ್ಪಸಿ: 080 23253255 / 7892502926.

ವಿಶ್ವಾಸ್ ಎಲೆಕ್ಟ್ರಿಕ್ ವಾಹನಗಳು ತುಂಬಾ ಕೈಗೆಟುಕುವ ಬೆಲೆಯದ್ದಾಗಿದೆ. ಹಲವು ರಾಜ್ಯಗಳ ಸಿಎಂಗಳಿಂದ ಈ ವಾಹನ ಬಿಡುಗಡೆ ಮಾಡಿಸುವ ಭರವಸೆ ಇದೆ. ಸರ್ಕಾರಗಳು ಈ ವಾಹನ ಖರೀದಿಸಲು ಮತ್ತು ತರಕಾರಿ, ಹಣ್ಣು ಮಾರಾಟಗಾರರಿಗೆ ವಾಹನ ಖರೀದಿ ಸಬ್ಸಿಡಿ ನೀಡುವ ಬಗ್ಗೆ ಆಲೋಚಿಸಬೇಕು.

| ಬಾಲಕೃಷ್ಣ ಕಂಪನಿಯ ಯುವ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net