ಅಧಿಕಾರಿಗಳು ಜನ ಮೆಚ್ಚುವಂತಿರಬೇಕು

shilpa
Published on

ಐಎಎಸ್​ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್​ ಅವರ ಜಟಾಪಟಿ ರಾಜ್ಯದ ಅಧಿಕಾರಿ ವರ್ಗಕ್ಕೆ ಪಾಠವನ್ನು ಕಲಿಸಿದೆ. ಮೆಸೂರು ಜಿಲ್ಲಾಧಿಕಾರಿಯಾಗಿದ್ದ ಸಿಂಧೂರಿ, ಮಹಾನಗರ ಪಾಲಿಕೆಯ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್​ ನಡುವಿನ ಜಗಳ ಸರ್ಕಾರದ ಮಟ್ಟಕ್ಕೆ ಹೋಗಿ, ಇಬ್ಬರೂ ಅಧಿಕಾರಿಗಳ ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಅವರನ್ನು ಬೇರೆಡೆ ವರ್ಗಾವಣೆ ಮಾಡಿದಾಗ ಕೆಎಟಿ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.

ಇತ್ತೀಚೆಗೆ ಮೆಸೂರಿನ ಸರ್ಕಾರಿ ಮನೆಯಲ್ಲಿ 50 ಲ ರೂಪಾಯಿ ಖರ್ಚು ಮಾಡಿ ಈಜುಕೊಳ ಕಟ್ಟಿಸಿಕೊಂಡ ವಿವಾದಕ್ಕೆ ಒಳಗಾಗಿದ್ದರು. ಅದಕ್ಕೆ ಸರ್ಕಾರ ತನಿಖೆಗೆ ಆದೇಶಿಸಿ ವರದಿ ನೀಡುವಂತೆ ಕೇಳಿತ್ತು. ಅಧಿಕಾರಿ ವರ್ಗ ಯಾವುದೇ ಸರ್ಕಾರದ ಅವಿಭಾಜ್ಯ ಅಂಗ. ಹೀಗಿರುವಾಗ ಅಧಿಕಾರಿಗಳು ಜನ, ಸಮಾಜ ಮೆಚ್ಚುವಂತೆ ಕೆಲಸ ಮಾಡಬೇಕು. ವರ್ತನೆ, ಸ್ವಭಾವವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಮೆಸೂರು ಪಾಲಿಕೆಯ ಸದಸ್ಯರು, ಸಿಬ್ಬಂದಿವರ್ಗ ಅಧಿಕಾರಿ ಶಿಲ್ಪಾ ನಾಗ್​ ಬೆಂಬಲಕ್ಕೆ ನಿಂತಿದ್ದು ಮೆಚ್ಚುಗೆಗೆ ಕಾರಣವಾದರೆ, ಸಿಂಧೂರಿ ವಿರುದ್ಧ ಜನಪ್ರತಿನಿಧಿಗಳು ಸಹ ಪಾತೀತವಾಗಿ ತಿರುಗಿಬಿದ್ದುದು ಯೋಚಿಸಬೇಕಾದ ಸಂಗತಿ.

ನಮ್ಮಲ್ಲಿ ಹಲವು ಐಎಎಸ್​ ಅಧಿಕಾರಿಗಳು ಇತರರಿಗೆ ಮಾದರಿಯಾಗಿ ಕೆಲಸ ಮಾಡಿದ, ಮಾಡುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಉಳಿದ ಅಧಿಕಾರಿಗಳು ಕೂಡ ಅಹಂ, ಸಣ್ಣತನ ಬಿಟ್ಟು ದೊಡ್ಡತನ, ವಿವೇಕ ಮೆರೆಯಬೇಕು. ಸರ್ಕಾರ ತಮಗೆ ವಹಿಸಿದ ಜವಾಬ್ದಾರಿಯನ್ನು ವಿವಾದಗಳಿಗೆ ಎಡೆ ಮಾಡಿಕೊಡದೆ ನಿರ್ವಹಿಸಬೇಕು. ಆ ಮೂಲಕ ಸೇವಾನಿಷ್ಠೆ, ಕಾರ್ಯತತ್ಪರತೆ ಮೆಗೂಡಿಸಿಕೊಂಡು ಜನಹಿತ, ಸಮಾಜಮುಖಿ ಕೆಲಸವನ್ನು ಮಾಡಬೇಕು.

> ಶ್ರೀಧರ್​ ಡಿ.ರಾಮಚಂದ್ರಪ್ಪ ತುರುವನೂರು (ಚಿತ್ರದುರ್ಗ ತಾಲ್ಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net